ವಿಶ್ವಕಪ್ ಸೋಲು: ಪತಿ ವಿರಾಟ್ ಕೊಹ್ಲಿಗೆ ಮಡದಿ ಅನುಷ್ಕಾ ಶರ್ಮಾರ ಅಪ್ಪುಗೆಯ ಸಾಂತ್ವನ, ಫೋಟೋ ವೈರಲ್

2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಮುಂದೆ ಶರಣಾಗಿದೆ. ಸತತ ಗೆಲುವುಗಳನ್ನು ದಾಖಲಿಸುತ್ತಾ ಒಂದೂ ಸೋಲು ಕಾಣದ ಭಾರತ ಕೊನೆಯ ಕ್ಷಣದಲ್ಲಿ ಇಡೀ ದೇಶವನ್ನು ನಿರಾಸೆಗೆ ನೂಕಿದೆ. ಉತ್ತಮ ಪ್ರದರ್ಶನ ಕಾಣುತ್ತಿದ್ದ ಟೀಂ ಇಂಡಿಯಾಗೂ ಇದು ನುಂಗಲಾರದ ನೋವಾಗಿದೆ.

ವಿಶ್ವಕಪ್ 2023 ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತ ತಂಡದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಚಿತ್ರರಂಗದ ಸೆಲಬ್ರಿಟಿಗಳು ಸೇರಿ ರಾಜಕೀಯ ನಾಯಕರು ಭಾರತ ತಂಡದ ಆಟಕ್ಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲದರ ಮಧ್ಯೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನರ ಮೆಚ್ಚುಗೆ ಪಡೆಯುತ್ತಿದೆ.

anushka-sharma-gives-warm-hug-to-husband

ವಿರಾಟ್ ಕೊಹ್ಲಿಗೆ ಅನುಷ್ಕಾ ಅಪ್ಪುಗೆಯ ಸಾಂತ್ವನ

ಭಾನುವಾರ ನವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತ ಕೆಲವೇ ಕ್ಷಣಗಳಲ್ಲಿ, ನಟಿ ಅನುಷ್ಕಾ ಶರ್ಮಾ ಪತಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಸಮಾಧಾನ ಮಾಡುತ್ತಿರುವುದು ಕಂಡು ಬಂದಿದೆ.

ಪಂದ್ಯ ಸೋತ ನಂತರ ಬೇಸರದಲ್ಲಿದ್ದ ವಿರಾಟ್ ಕೊಹ್ಲಿ ಸ್ಟ್ಯಾಂಡ್ ಬಳಿ ನಿಂತಿದ್ದ ನಟಿ ಅನುಷ್ಕಾ ಶರ್ಮಾ ಅವರನ್ನು ತಬ್ಬಿಕೊಂಡಿದ್ದಾರೆ. ಈ ವೇಳೆ ಅನುಷ್ಕಾ ಸಾಂತ್ವನ ಹೇಳುತ್ತಾ ವಿರಾಟ್ ಬೆನ್ನನ್ನು ಸವರಿದ್ದಾರೆ. ಅನುಷ್ಕಾ ಶರ್ಮಾ ಕೊಹ್ಲಿಯನ್ನು ಸಮಾಧಾನಪಡಿಸುತ್ತಿರುವಾಗ ವಿರಾಟ್‌ನ ಮುಖ ಕಾಣಿಸುತ್ತಿರಲಿಲ್ಲ. ಆದರೆ, ಕ್ಯಾಮೆರಾ ಕಣ್ಣಿಗೆ ಅವರ ನೀಲಿ ಬಣ್ಣದ ಜೆರ್ಸಿ ಮಾತ್ರ ಗೋಚರಿಸುತ್ತಿತ್ತು.

ಕಳೆದ ಕೆಲವು ದಿನಗಳಿಂದ, ಅನುಷ್ಕಾ ಶರ್ಮಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ಮೊದಲು ಮಗಳು ವಾಮಿಕಾ ನಂತರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ದಂಪತಿ ಘೋಷಣೆ ಮಾಡಿಲ್ಲ.

anushka-sharma-gives-warm-hug-to-husband

ಇನ್ನು, 2023 ರ ವಿಶ್ವಕಪ್‌ಗಾಗಿ ಟೀಮ್ ಇಂಡಿಯಾ ಮತ್ತು ಅವರ ಪತಿ ವಿರಾಟ್ ಕೊಹ್ಲಿಯನ್ನು ಬೆಂಬಲಿಸಲು ಅನುಷ್ಕಾ ಶರ್ಮಾ ತಮ್ಮ ಮಗಳು ವಾಮಿಕಾ ಜೊತೆಯಲ್ಲಿ ಅಹಮದಾಬಾದ್‌ಗೆ ಬಂದಿದ್ದರು. ವಿರಾಟ್ ಕೊಹ್ಲಿ 50 ರನ್ ಬಾರಿಸುತ್ತಿದ್ದಂತೆ, ನಟಿ ತನ್ನ ಪತಿಗೆ ಚಪ್ಪಾಳೆ ನೀಡಿ ಬೆಂಬಲಿಸಿದ್ದರು.

ಸೋತರು ಟೀಂ ಇಂಡಿಯಾಗೆ ಸೆಲಬ್ರಿಟಿಗಳ ಶ್ಲಾಘನೆ

ವಿಶ್ವಕಪ್ ಫೈನಲ್‌ನಲ್ಲಿ ಸೋಲು ಕಂಡರೂ ಕೂಡ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಭಾರರ ತಂಡವನ್ನು ಅಭಿನಂದಿಸಿದ್ದಾರೆ. ನಟರಾದ ಸುನೀಲ್ ಶೆಟ್ಟಿ, ಶಾರುಖ್ ಖಾನ್, ದಿಯಾ ಮಿರ್ಜಾಸೋನಾಲಿ ಬೇಂದ್ರೆ , ದಿಯಾ ಮಿರ್ಜಾ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿಯನ್ ವೀರ್ ದಾಸ್, ಮೀರಾ ರಜಪೂತ್ ತಮ್ಮ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟಿಗ ಕೆಎಲ್ ರಾಹುಲ್ ಅವರ ಮಾವ ಕೂಡ ಆಗಿರುವ ನಟ ಸುನೀಲ್ ಶೆಟ್ಟಿ ಅವರು ಟ್ವಿಟರ್ ಖಾತೆಯಲ್ಲಿ, "ಆಸ್ಟ್ರೇಲಿಯಾಗೆ ವಿಶ್ವಕಪ್ ಫೈನಲ್ ಗೆಲುವಿಗಾಗಿ ಅಭಿನಂದನೆಗಳು! ನನ್ನ ಟೀಂ ಇಂಡಿಯಾಗೆ ಇದು ಒಂದು ಕೆಟ್ಟ ದಿನ. ಆದರೆ ಟೂರ್ನಮೆಂಟ್‌ನಾದ್ಯಂತ ಈ ಟೀಂ ಇಂಡಿಯಾ 10 ಪಂದ್ಯಗಳನ್ನು ಗೆದ್ದುಕೊಂಡಿರುವುದನ್ನು ನಾವು ಮರೆಯಬಾರದು. ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳ ಅತ್ಯುತ್ತಮ ಪ್ರದರ್ಶನಗಳೊಂದಿಗೆ ನಿಜವಾಗಿಯೂ ಇದು ವಿಶ್ವ ದರ್ಜೆಯ ತಂಡ. ಈ ತಂಡ ಪ್ರದರ್ಶಿಸಿದ ಪ್ರಯತ್ನ, ದೃಢತೆ ಮತ್ತು ಕ್ರೀಡಾ ಮನೋಭಾವದ ಬಗ್ಗೆ ನನಗೆ ನಿಜವಾಗಿಯೂ ಹೆಮ್ಮೆ ಇದೆ. ಯಾವಾಗಲೂ ತಲೆ ಎತ್ತಿ ನಡೆಯಿರಿ" ಎಂದು ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

More from Filmibeat

English summary
World Cup final: Anushka Sharma gives warm hug to husband Virat Kohli.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X