For Quick Alerts
  ALLOW NOTIFICATIONS  
  For Daily Alerts

  ಜಾನ್ ಅಬ್ರಹಾಂ, ಅನುಷ್ಕಾ ನಂ.1 ಸೆಕ್ಸಿ ತಾರೆಯರು

  By Mahesh
  |

  ಮಾಜಿ ವಿಶ್ವತಾರೆಯರು, ಹೊಸದಾಗಿ ಎಂಟ್ರಿ ಕೊಟ್ಟಿರುವ ಪೋರ್ನ್ ತಾರೆಯರು ಇರುವ ಬಾಲಿವುಡ್ ನಲ್ಲಿ 'ಸಕತ್ ಹಾಟ್ ಮೈಮಾಟ' ಹೊಂದಿರುವ ನಟಿ ಯಾರು? ಸಲ್ಮಾನ್, ಶಾರುಖ್, ಅಮೀರ್ ಖಾನ್ ತ್ರಯರಿದ್ದರೂ ಯುವ ಪೀಳಿಗೆಯ ಹೃದಯ ಗೆದ್ದ ಚೋರ ಯಾರು? ಎಂಬ ಪ್ರಶ್ನೆಯೊಂದಿಗೆ ನಡೆದ ಸಮೀಕ್ಷೆಯಲ್ಲಿ ಅನೀರಿಕ್ಷಿತವಾಗಿ ಬೆಂಗಳೂರು ಬೆಡಗಿ ಅನುಷ್ಕಾ ಶರ್ಮ ಹಾಗೂ ಜಾನ್ ಅಬ್ರಹಾಂ ವಿಜೇತರಾಗಿ ಹೊರಹೊಮ್ಮಿದ್ದಾರೆ.

  ಬಿಕಿನಿ ತೊಟ್ಟರೆ ಯಾರು ಸೆಕ್ಸಿಯಾಗಿ ಕಾಣುತ್ತಾರೆ ಎಂಬ ಪ್ರಶ್ನೆ ಹಾಕಿ ಸಮೀಕ್ಷೆ ನಡೆಸಿದ hotel.com ಗೆ ಉತ್ತರವಾಗಿ ಅನುಷ್ಕಾ ಶರ್ಮ ಪರ ಶೇ 11 ರಷ್ಟು ಮತಗಳು ಸಿಕ್ಕಿದೆ. ಆಕೆ ಸ್ಲಿಮ್ ಹಾಗೂ ಟ್ರಿಮ್ ದೇಹ ಹೊಂದಿದ್ದಾರೆ ಎಂದು ಎಲ್ಲರ ಅಭಿಮತ.

  ಈ ರೀತಿ ಹಾಟ್ ಮೈಮಾಟವುಳ್ಳ ಸನ್ನಿ ಲಿಯೋನ್, ದೀಪಿಕಾ ಪಡುಕೋಣೆ, ಬಿಪಾಶಾ ಪಶು, ಪ್ರಿಯಾಂಕಾ ಛೋಪ್ರಾ, ಕರೀನಾ ಕಪೂರ್, ಕತ್ರೀನಾ ಕೈಫ್ ಹಾಗೂ ನರ್ಗೀಸ್ ಫಕ್ರಿ ಅವರು ಅನುಷ್ಕಾಗೆ ತೀವ್ರ ಪೈಪೋಟಿ ನೀಡಿ ಕೂಡಾ ಸೋಲೊಪ್ಪಿಕೊಳ್ಳಬೇಕಾಗಿದೆ.

  ಆದರೆ, ಜಾನ್ ಗೆ ಮಾತ್ರ ಶೇ 20 ರಷ್ಟು ಮತಗಳು ಸಿಕ್ಕಿದ್ದು, ಬೆಸ್ಟ್ 'ಬೀಚ್ ಬಾಡಿ' ಎಂದು ವರ್ಣಿಸಲಾಗಿದೆ. 2008ರ ದೋಸ್ತಾನಾ ಚಿತ್ರದಲ್ಲಿ ಚಡ್ಡಿ ಧರಿಸಿ ಜಾನ್ ತೋರಿಸಿದ ಅಂಗಾಂಗ ಪ್ರದರ್ಶನ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವುದಿದೆಯಂತೆ.

  ಜಾನ್ ಗೆ ಪೈಪೋಟಿ ನೀಡಿದ ಹೃತಿಕ್ ರೋಷನ್ ಶೇ 17 ರಷ್ಟು ಮತ ಪಡೆದಿದ್ದಾರೆ. ಉಳಿದಂತೆ ಸಲ್ಮಾನ್ ಖಾನ್, ರಣವೀರ್ ಸಿಂಗ್, ರಣಬೀರ್ ಕಪೂರ್ ಹಾಗೂ ಅರ್ಜುನ್ ರಾಮ್ ಪಾಲ್ ಹೆಸರು ಕಾಣಿಸಿಕೊಂಡಿದೆ. ಶಾರುಖ್ ಹಾಗೂ ಅಮೀರ್ ಹೆಸರು ತುಂಬಾ ಹಿಂದೆ ಉಳಿದಿದೆ.

  ಅಂತಾರಾಷ್ಟ್ರೀಯ ತಾರೆಯರಲ್ಲಿ ಜೆಸ್ಸಿಕಾ ಆಲ್ಬಾ ಹಾಗೂ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್ ಹ್ಯಾಮ್ ಬೆಸ್ಟ್ ಬಿಕಿನಿ ಮೈಮಾಟ ಹೊಂದಿದ್ದಾರಂತೆ. ಸುಮಾರು 5,000ಕ್ಕೂ ಅಧಿಕ ಪ್ರವಾಸಿಗರು ವಿಶ್ವದ ವಿವಿಧೆಡೆಗಳಿಂದ ಈ ಸಮೀಕ್ಷೆಯಲ್ಲಿ ಮತ ಚಲಾಯಿಸಿದ್ದರು.

  English summary
  Anushka Sharma and John Abraham have topped the respective female and male lists of a poll survery conducted by hotel.com for the best bikini bodies.More than 5,000 travellers from across the world participated in the survey, conducted by Hotels.com last month.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X