For Quick Alerts
  ALLOW NOTIFICATIONS  
  For Daily Alerts

  ಮೇಕಪ್ ಆರ್ಟಿಸ್ಟ್ ನಿಧನ: ಕಣ್ಣೀರಿಟ್ಟ ನಟಿ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್

  |

  ಬಾಲಿವುಡ್ ನ ಖ್ಯಾತ ಮೇಕಪ್ ಆರ್ಟಿಸ್ಟ್ ಸುಭಾಷ್ ವಾಗಲ್ ನಿಧನರಾಗಿದ್ದಾರೆ. ಬಾಲಿವುಡ್ ನ ಟಾಪ್ ನಟಿಯರಿಗೆ ಮೇಕಪ್ ಮಾಡಿ ಕ್ಯಾಮರಾ ಮುಂದೆ ಸುಂದರವಾಗಿ ಕಾಣುವಂತೆ ಮಾಡುತ್ತಿದ್ದ ಸುಭಾಷ್ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಸುಬ್ಬು ಅಂತನೆ ಫೇಮಸ್ ಆಗಿದ್ದ ಮೇಕಪ್ ಆರ್ಟಿಸ್ಟ್ ಸುಭಾಷ್ ನಿಧನಕ್ಕೆ ಅನೇಕ ಬಾಲಿವುಡ್ ನಟಿಯರು ಸಂತಾಪ ಸೂಚಿಸಿದ್ದಾರೆ.

  ಅನೇಕ ವರ್ಷಗಳಿಂದ ಮೇಕಪ್ ಮಾಡುತ್ತಿದ್ದ ಅದ್ಭುತ ಕಲಾವಿದನ ಅಗಲಿಕೆಗೆ ನಟಿ ಅನುಷ್ಕಾ ಶರ್ಮಾ ಮತ್ತು ಕತ್ರೀನಾ ಕೈಫ್ ಕಣ್ಣೀರಾಕಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿ ಸಂತಾಪ ಸೂಚಿಸಿದ್ದಾರೆ. ನಟಿ ಅನುಷ್ಕಾ ಶರ್ಮಾ ಸುಬ್ಬು ಜೊತೆಗಿರುವ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿ ದೀರ್ಘವಾಗಿ ಬರೆದುಕೊಂಡಿದ್ದಾರೆ.

  'ಟೀಂ ಇಂಡಿಯಾ ಆಯ್ಕೆ ಸಮಿತಿ ಅನುಷ್ಕಾಗೆ ಟೀ ಸಪ್ಲೈ ಮಾಡುತ್ತಿದ್ದರು' ಆರೋಪಕ್ಕೆ ಅನುಷ್ಕಾ ಖಡಕ್ ಪ್ರತಿಕ್ರಿಯೆ'ಟೀಂ ಇಂಡಿಯಾ ಆಯ್ಕೆ ಸಮಿತಿ ಅನುಷ್ಕಾಗೆ ಟೀ ಸಪ್ಲೈ ಮಾಡುತ್ತಿದ್ದರು' ಆರೋಪಕ್ಕೆ ಅನುಷ್ಕಾ ಖಡಕ್ ಪ್ರತಿಕ್ರಿಯೆ

  "ತುಂಬಾ ಕರುಣಾಮಯಿ, ಸರಳ ಹಾಗೂ ಅದ್ಭುತ ವ್ಯಕ್ತಿ. ನಾನು ಅವರನ್ನು ಯಾವಾಗಲೂ ಪ್ರೀತಿಯಿಂದ ಮಾಸ್ಟರ್ ಎಂದು ಕರೆಯುತ್ತಿದೆ. ಅವರು ದೇಶದ ಅತ್ಯಂತ ಪ್ರೀತಿಯ ಹಾಗೂ ಗೌರವಾನ್ವಿತ ಮೇಕಪ್ ಕಲಾವಿದರಲ್ಲಿ ಒಬ್ಬರು. ಸುಭಾಷ್ ತಮ್ಮ ಟ್ಯಾಲೆಂಟ್ ನಿಂದ ನನ್ನನ್ನು ಯಾವಾಗಲೂ ಸುಂದರವಾಗಿ ಕಾಣಿಸುವಂತೆ ಮಾಡುತ್ತಿದ್ದರು. ಅವರ ಈ ಅದ್ಭುತವಾದ ಕೆಲಸ ಹಾಗೂ ಟ್ಯಾಲೆಂಟ್ ಅನ್ನು ನಾನು ಯಾವಾಗಲೂ ನೆನಪು ಮಾಡಕೊಳ್ಳುತ್ತೇನೆ. ಇಂದು ಒಂದು ಒಳ್ಳೆಯ ಮಗ, ಸಹೋದರ ಹಾಗೂ ಅದ್ಭುತ ಆತ್ಮ ನಮ್ಮನ್ನು ಬಿಟ್ಟು ಹೋಗಿದೆ. ನಿನ್ನ ಆತ್ಮಕ್ಕೆ ದೇವರು ಶಾಂತಿ ನೀಡಲಿ ಸುಬ್ಬು" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

  ಇನ್ನು ಕತ್ರೀನಾ ಕೈಫ್ ಕೂಡ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. "ಇದು ದೊಡ್ಡ ನಷ್ಟ. ಅನಿರೀಕ್ಷಿತವಾದದ್ದು ನಂಬಲಿಕ್ಕೆ ಸಧ್ಯವಾಗುತ್ತಿಲ್ಲ. ಅದ್ಭುತವಾದ ಪ್ರತಿಭೆ. ನಾನು ಮೊದಲು ಕೆಲಸ ಮಾಡಿದ ಮೇಕಪ್ ಕಲಾವಿದರು. ಸಾಕಷ್ಟು ವಿಚಾರಗಳನ್ನು ಕಲಿಸಿದ್ದಾರೆ. ಅವರು ಯಾರ ಬಗ್ಗೆಯು, ಯಾವುದೆ ರೀತಿಯಲ್ಲಿ ಮಾತನಾಡಿರುವುದನ್ನು ನೋಡಲು ಸಾಧ್ಯವಿಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಮಿಸ್ ಯು ಸುಬ್ಬು" ಎಂದು ಬರೆದುಕೊಂಡಿದ್ದಾರೆ.

  ಬಾಲಿವುಡ್ ನ ಅನೇಕ ಕಲಾವಿದರು ಸುಭಾಷ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಮಾಧುರಿ ದೀಕ್ಷಿತ್, ಅನುಷ್ಕಾ ಶರ್ಮಾ ಸೇರಿದಂತೆ ಅನೇಕರು ಅಂತಿಮ ನಮನ ಸಲ್ಲಿಸಿದ್ದಾರೆ. ಸುಭಾಷ್ ಬಾಲಿವುಡ್ ನ ಟಾಪ್ ನಟಿಯರಾದ ಸೋನಮ್ ಕಪೂರ್, ಲಾರಾ ದತ್, ಪ್ರೀತಿ ಜಿಂತಾ, ಕಾಜಲ್ ಅಗರವಾಲ್ ಸೇರಿದಂತೆ ಅನೇಕ ನಟಿಮಣಿಯರ ಸೌಂದರ್ಯದ ಹಿಂದೆ ಸುಭಾಷ್ ಅವರ ಮೇಕಪ್ ರಹಸ್ಯ ಅಡಗಿತ್ತು.

  English summary
  Bollywood famous makeup artist Subhash Vagal death. Anushka Sharma, Katrina Kaif share emotional posts on death of makeup artist Subbu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X