'ಸಂಜು' ಚಿತ್ರದಲ್ಲಿ ಅನುಷ್ಕಾ ಶರ್ಮಾ ಪಾತ್ರ ಗುರುತಿಸಿ.?

By Bharath Kumar

ಬಾಲಿವುಡ್ ಬ್ಯಾಡ್ ಬಾಯ್ ಸಂಜಯ್ ದತ್ ಅವರ ಬಯೋಪಿಕ್ ಸಿನಿಮಾ ಸಿದ್ಧವಾಗಿದ್ದು, ಒಂದೊಂದೆ ಪೋಸ್ಟರ್ ಗಳು ಗಮನ ಸೆಳೆಯುತ್ತಿದೆ. ಈಗಾಗಲೇ ಟೀಸರ್ ಸೇರಿದಂತೆ ಪಾತ್ರಧಾರಿಗಳ ಲುಕ್ ಕೂಡ ರಿವಿಲ್ ಆಗಿದೆ. ಈಗ ನಟಿ ಅನುಷ್ಕಾ ಶರ್ಮಾ ಅವರ ಗೆಟಪ್ ಬಹಿರಂಗವಾಗಿದೆ.

'ಸಂಜು' ಚಿತ್ರದಲ್ಲಿ ಕೊಹ್ಲಿ ಪತ್ನಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದ್ರೆ, ಆ ಪಾತ್ರ ಯಾವುದು ಎಂದು ಯಾರೂ ಬಿಟ್ಟುಕೊಟ್ಟಿಲ್ಲ. ಹೀಗಾಗಿ, ಅನುಷ್ಕಾ ಪಾತ್ರದ ಬಗ್ಗೆ ಬಾಲಿವುಡ್ ನಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಸೋನಂ ಕಪೂರ್, ಪರೇಶ್ ರಾವಲ್, ವಿಕ್ಕಿ ಕುಶಾಲ್ ಸೇರಿದಂತೆ ಹಲವರ ಲುಕ್ ರಿಲೀಸ್ ಮಾಡಲಾಗಿದೆ.

ಈ ಹಿಂದೆ ಸ್ವತಃ ಅನುಷ್ಕಾ ಅವರೇ ಹೇಳಿದಂತೆ ''ನಾನು ಈ ಚಿತ್ರದಲ್ಲಿ ತುಂಬಾ ಮುಖ್ಯವಾದ ಪಾತ್ರ ನಿಭಾಯಿಸುತ್ತಿದ್ದೇನೆ. ನಾನು ಸಂಜುಗೆ ಹೀರೋಯಿನ್ ಅಲ್ಲ, ಅಥವಾ ಜರ್ನಲಿಸ್ಟ್ ಕೂಡ ಅಲ್ಲ, ಆದ್ರೆ, ಈ ಬಯೋಪಿಕ್ ನಲ್ಲಿ ಬರುವ ಹಲವು ಜೀವಂತ ವ್ಯಕ್ತಿಗಳ ಪಾತ್ರದಲ್ಲಿ ನನ್ನದು ಕೂಡ ಒಂದಾಗಿದೆ'' ಎಂದಷ್ಟೆ ಸುಳಿವು ನೀಡಿದ್ದರು.

Anushka Sharma Look in Sanju Movie

ಇದೀಗ, ನಿರ್ದೇಶಕ ರಾಜ್ ಕುಮಾರ್ ಹಿರಾನಿ ಕೂಡ ಈ ಪೋಸ್ಟರ್ ಬಿಟ್ಟು, ಅನುಷ್ಕಾ ಪಾತ್ರ ಗುರುತಿಸಿ ಎಂದು ಕಾಮೆಂಟ್ ಹಾಕಿದ್ದಾರೆ. ಅಥವಾ ನಾಳೆವರೆಗೂ ಕಾಯಿರಿ ಎಂದಿದ್ದಾರೆ.

ಸದ್ಯದ ಮಾಹಿತಿಯ ಪ್ರಕಾರ ಅನುಷ್ಕಾ ಶರ್ಮಾ ಚಿತ್ರದಲ್ಲಿ ಲಾಯರ್ ಪಾತ್ರ ಮಾಡುತ್ತಿದ್ದಾರೆ. ಆದ್ರೆ, ಅದು ಯಾರ ಕ್ಯಾರೆಕ್ಟರ್ ಎನ್ನುವುದು ಕುತೂಹಲ ಮೂಡಿಸಿದೆ. ಇನ್ನುಳಿದಂತೆ ಅಂದಹಾಗೆ, 'ಸಂಜು' ಸಿನಿಮಾದ ಟ್ರೇಲರ್ ಮೇ 30 ಕ್ಕೆ ರಿಲೀಸ್ ಆಗಲಿದ್ದು, ಸಿನಿಮಾ ಜೂನ್ 29ಕ್ಕೆ ಬಿಡುಗಡೆಯಾಗಲಿದೆ.

More from Filmibeat

English summary
After exploring Kumar Gaurav and Sanjay Dutt's friendship in the previous poster, another Sanju poster has been released. The poster introduces a curly-haired Anushka Sharma and a middle-aged Ranbir Kapoor as Sanjay Dutt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X