For Quick Alerts
  ALLOW NOTIFICATIONS  
  For Daily Alerts

  ಕ್ರಿಕೆಟ್ ಆಡಲಿದ್ದಾರೆ ನಟಿ ಅನುಷ್ಕಾ ಶರ್ಮಾ: ವಿರಾಟ್ ಕೊಹ್ಲಿ ಪ್ರೇರಣೆ?

  |

  ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಭಾರತದ ಟಾಪ್ ಸೆಲೆಬ್ರಿಟಿಗಳ ದಂಪತಿಗಳಲ್ಲಿ ಒಬ್ಬರು. ಭಾರತದ ಎರಡು ಅತ್ಯಂತ ಜನಪ್ರಿಯ ಹಾಗೂ ಶ್ರೀಮಂತ ಉದ್ಯಮ ಕ್ರಿಕೆಟ್ ಹಾಗೂ ಸಿನಿಮಾದ ಮಿಲನ ವಿರಾಟ್ ಹಾಗೂ ಅನುಷ್ಕಾ.

  ಮೊದಲ ಲಾಕ್‌ಡೌನ್ ಅವಧಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಅಪಾರ್ಟ್‌ಮೆಂಟ್ ಕಾಂಪೌಂಡ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದ ವಿಡಿಯೋಗಳು ವೈರಲ್ ಆಗಿದ್ದವು. ವಿಡಿಯೋಗಳಲ್ಲಿ ಅನುಷ್ಕಾ ಬೌಲಿಂಗ್ ಮಾಡುತ್ತಿದ್ದರೆ ಕೊಹ್ಲಿ ಬ್ಯಾಟಿಂಗ್ ಆಡುತ್ತಿದ್ದರು.

  ಇದೀಗ ನಟಿ ಅನುಷ್ಕಾ ಶರ್ಮಾ ಬೌಲಿಂಗ್ ಮಾಡಲು ಸಕಲ ಸಜ್ಜಾಗಿದ್ದಾರೆ. ಆದರೆ ಸಿನಿಮಾದಲ್ಲಿ. ಭಾರತೀಯ ಮಹಿಳಾ ಕ್ರಿಕೆಟರ್ ಜೂಲನ್ ಗೋಸ್ವಾಮಿಯ ಜೀವನ ಸಿನಿಮಾ ಆಗುತ್ತಿದ್ದು ಗೋಸ್ವಾಮಿ ಪಾತ್ರದಲ್ಲಿ ಅನುಷ್ಕಾ ನಟಿಸಲಿದ್ದಾರೆ.

  ಈಗಲೂ ಭಾರತದ ಮುಖ್ಯ ಬೌಲರ್

  ಈಗಲೂ ಭಾರತದ ಮುಖ್ಯ ಬೌಲರ್

  ಜೂಲನ್ ಗೋಸ್ವಾಮಿ, ವಿಶ್ವ ಮಹಿಳಾ ಕ್ರಿಕೆಟ್ ಕಂಡ ಅಪ್ರತಿಮ ಬೌಲರ್‌ಗಳಲ್ಲಿ ಒಬ್ಬರು. 2002ರಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಸೇರಿಕೊಂಡ ಅವರು ಈಗಲೂ ಭಾರತದ ಮುಖ್ಯ ವೇಗದ ಬೌಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

  19ನೇ ವರ್ಷಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ

  19ನೇ ವರ್ಷಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ

  1982 ರಲ್ಲಿ ಪಶ್ಚಿಮ ಬಂಗಾಳದ ಚಕಡಾಹ ಎಂಬಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಗೋಸ್ವಾಮಿ 15 ವರ್ಷದವರಿದ್ದಾಗಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದರು. 19 ನೇ ವರ್ಷಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ ಗೋಸ್ವಾಮಿ ತಮ್ಮ ಕರಾರುವಾಕ್ ಹಾಗೂ ವೇಗದ ಬೌಲಿಂಗ್‌ನಿಂದ ಕ್ರಿಕೆಟರ್‌ಗಳನ್ನು ಕಾಡಿದ್ದಾರೆ. ಭಾರತಕ್ಕೆ ಹಲವು ಗೆಲುವುಗಳನ್ನು ತಂದುಕೊಟ್ಟಿದ್ದಾರೆ.

  ಹೆಣ್ಣು ಮಗುವಿನ ಜನ್ಮ ನೀಡಿದ ಅನುಷ್ಕಾ ಶರ್ಮಾ

  ಹೆಣ್ಣು ಮಗುವಿನ ಜನ್ಮ ನೀಡಿದ ಅನುಷ್ಕಾ ಶರ್ಮಾ

  ಅನುಷ್ಕಾ ಶರ್ಮಾ, ಜೂಲನ್ ಗೋಸ್ವಾಮಿ ಪಾತ್ರದಲ್ಲಿ ನಟಿಸಲು ಓಕೆ ಎಂದಿದ್ದು ಚಿತ್ರೀಕರಣವು ಇದೇ ವರ್ಷದ ಅಂತ್ಯದಲ್ಲಿ ಪ್ರಾರಂಭವಾಗಲಿದೆ. ಇದೇ ಜನವರಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಅನುಷ್ಕಾ ಶರ್ಮಾ ಪ್ರಸ್ತುತ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.

  ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ ಶಿವ ರಾಜ್ ಕುಮಾರ್ ಕೊಟ್ಟ ಗಿಫ್ಟ್ ನೋಡಿ | Filmibeat Kannada
  ನಿರ್ಮಾಣದ ಕಡೆಗೆ ಹೆಚ್ಚಿನ ಗಮನ

  ನಿರ್ಮಾಣದ ಕಡೆಗೆ ಹೆಚ್ಚಿನ ಗಮನ

  ನಿರ್ಮಾಪಕಿಯೂ ಆಗಿರುವ ಅನುಷ್ಕಾ ಶರ್ಮಾ ಕ್ಲೀನ್ ಸ್ಲೇಟ್ ಫಿಲಮ್ಸ್ ಹೆಸರಿನ ತಮ್ಮದೇ ಆದ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ನಿರ್ಮಾಣ ಸಂಸ್ಥೆಯ ಮೂಲಕ ನಾಲ್ಕು ಸಿನಿಮಾಗಳಲ್ಲಿ ನಿರ್ಮಿಸಿದ್ದಾರೆ. ಒಂದು ವೆಬ್ ಸರಣಿ ನಿರ್ಮಿಸಿದ್ದಾರೆ. ಇದೀಗ 'ಮಾಯ್' ಹೆಸರಿನ ವೆಬ್ ಸರಣಿ ಹಾಗೂ 'ಕಾಲಾ' ಹೆಸರಿನ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಎರಡೂ ನೆಟ್‌ಫ್ಲಿಕ್ಸ್‌ನಲ್ಲಿ ಬಿಡಗುಡೆ ಆಗಲಿವೆ.

  English summary
  Anushka Sharma playing lead role in cricketer Jhulan Goswami's biopic. Shooting will start from end of this year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X