twitter
    For Quick Alerts
    ALLOW NOTIFICATIONS  
    For Daily Alerts

    ಚಿಕಿತ್ಸೆ ನೀಡಲು ಬಂದಿದ್ದ ವೈದ್ಯರ ಮೇಲೆ ಹಲ್ಲೆ: ಕೆರಳಿ ಕೆಂಡವಾದ ಅನುಷ್ಕಾ

    |

    ಇಂಧೋರ್‌ ನಲ್ಲಿ ಕೆಟ್ಟ ಘಟನೆಯೊಂದು ನಡೆದಿದೆ. ಕೊರೊನಾ ಶಂಕಿತನೋರ್ವನಿಗೆ ಚಿಕಿತ್ಸೆ ನೀಡಲೆಂದು ಪುಣೆಯ ತಾತ್ಪಟ್ಟಿ ಭಕ್ಕಲ್ ಎಂಬಲ್ಲಿಗೆ ತೆರಳಿದ್ದ ವೈದ್ಯರ ತಂಡದ ಮೇಲೆ ಹಲ್ಲೆ ಮಾಡಲಾಗಿದೆ.

    ಈ ಘಟನೆ ಆಕ್ರೋಶ ಹುಟ್ಟಿಸಿದ್ದು, ಜನರು ಕಲ್ಲು ಹೊಡೆದು ವೈದ್ಯರುಗಳನ್ನು ಓಡಿಸುತ್ತಿರುವ ವಿಡಿಯೋಗಳು ತುಂಬಿಹೋಗಿವೆ. ವೈದ್ಯರ ಮೇಲೆ ಹಲ್ಲೆ ಮಾಡಿದ ದುರುಳರನ್ನು ಬಂಧಿಸಲು ಒತ್ತಾಯಿಸಿದ್ದಾರೆ.

    ಕೊರೊನಾ ಸಂಕಷ್ಟಕ್ಕೆ ಸಾಲು-ಸಾಲು ಸಾಹಯ ಘೋಷಿಸಿದ ಶಾರುಖ್ ಖಾನ್ಕೊರೊನಾ ಸಂಕಷ್ಟಕ್ಕೆ ಸಾಲು-ಸಾಲು ಸಾಹಯ ಘೋಷಿಸಿದ ಶಾರುಖ್ ಖಾನ್

    ರಾಜಕಾ ರಣಿಗಳು, ಸಚಿವರುಗಳು, ಸೆಲೆಬ್ರಿಟಿಗಳು, ಸಿನಿಮಾ ನಟ-ನಟಿಯರು ಸಹ ಈ ಅಮಾನವೀಯ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನಟಿ ಅನುಷ್ಕಾ ಶರ್ಮಾ ಸಹ ಆಕ್ರೋಶ ಹೊರಹಾಕಿದ್ದಾರೆ.

    ಕೊರೊನಾ ವಿರುದ್ಧ ಹೋರಾಡಲು ಸರ್ಕಾರಕ್ಕೆ ಆರ್ಥಿಕ ಸಹಾಯ ಮಾಡಿರುವ ಅನುಷ್ಕಾ ಶರ್ಮಾ, ಕೊರೊನಾ ಸಂದರ್ಭದಲ್ಲಿ ಇನ್ನೂ ಕೆಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ವಿರುದ್ಧ ಎಚ್ಚರಿಸುವ ಯತ್ನವನ್ನೂ ಮಾಡುತ್ತಿದ್ದಾರೆ.

    ಇನ್‌ಸ್ಟಾಗ್ರಾಂ ನಲ್ಲಿ ಅನುಷ್ಕಾ ಪೋಸ್ಟರ್

    ಇನ್‌ಸ್ಟಾಗ್ರಾಂ ನಲ್ಲಿ ಅನುಷ್ಕಾ ಪೋಸ್ಟರ್

    ಇಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇಂಧೋರ್‌ ನ ಸುದ್ದಿಯ ಚಿತ್ರ ಶೇರ್ ಮಾಡಿಕೊಂಡಿದ್ದು, ''ವೈದ್ಯಕೀಯ ಸಿಬ್ಬಂದಿಯನ್ನು ಅವರ ಕೆಲಸ ಮಾಡಲು ಬಿಡಿ, ಅವರು ದುಡಿಯುತ್ತಿರುವುದು 'ನಿಮಗಾಗಿ' ಎಂದು ಸಿಬ್ಬಂದಿಯ ಮೇಲೆ ಕಲ್ಲೆಸದವರನ್ನೇ ಉಲ್ಲೇಖಿಸಿ ಹೇಳಿದ್ದಾರೆ.

    ಪ್ರಾಣ ಪಣಕ್ಕಿಟ್ಟು ಅವರು ಕೆಲಸ ಮಾಡುತ್ತಿದ್ದಾರೆ: ಅನುಷ್ಕಾ

    ಪ್ರಾಣ ಪಣಕ್ಕಿಟ್ಟು ಅವರು ಕೆಲಸ ಮಾಡುತ್ತಿದ್ದಾರೆ: ಅನುಷ್ಕಾ

    ಮುಂದುವರೆದು, ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿರುವುದು 'ನಿಮಗಾಗಿ' ಎಂದಿರುವ ಅನುಷ್ಕಾ ಶರ್ಮಾ, ಇದು ತೀರಾ ಕೆಟ್ಟ ಘಟನೆ ಎಂದಿರುವ ಅನುಷ್ಕಾ ಶರ್ಮಾ, ಈ ರೀತಿಯ ಕಾರ್ಯಗಳನ್ನು ಮಾಡುವುದರಿಂದ ಎದುರಾಗುವ ಅಪಾಯದ ಬಗ್ಗೆ ಅರಿತುಕೊಳ್ಳಿ ಎಂದು ಸಲಹೆಯನ್ನೂ ನೀಡಿದ್ದಾರೆ.

    ವೈದ್ಯಕೀಯ ಸಿಬ್ಬಂದಿ ಮೇಲೆ ಕಲ್ಲು ತೂರಾಟ

    ವೈದ್ಯಕೀಯ ಸಿಬ್ಬಂದಿ ಮೇಲೆ ಕಲ್ಲು ತೂರಾಟ

    ಇಂಧೋರ್‌ ನ ತಾತ್ಪಟ್ಟಿ ಭಕ್ಕಲ್ ಎಂಬಲ್ಲಿ ಕೊರೊನಾ ಶಂಕಿತನೋರ್ವ ಇರುವ ಬಗ್ಗೆ ಮಾಹಿತಿ ಇದ್ದು, ಆತನಿಗೆ ಚಿಕಿತ್ಸೆ ನೀಡಿ, ಅವಶ್ಯಕ ಸಲಹೆ ನೀಡಲೆಂದು ಮಹಿಳೆಯೂ ಇದ್ದ ವೈದ್ಯಕೀಯ ಸಿಬ್ಬಂದಿ ಭೇಟಿ ನೀಡಿದ್ದರು. ಆದರೆ ಇವರ ಮೇಲೆ ಗುಂಪು ಹಲ್ಲೆ ಮಾಡಿದೆ. ಕಲ್ಲು ತೂರಿ ಅಲ್ಲಿಂದ ಓಡಿಸಿದೆ.

    ಘಟನೆ ಸಂಭಂಧ ಕೆಲವರನ್ನು ಬಂಧಿಸಲಾಗಿದೆ

    ಘಟನೆ ಸಂಭಂಧ ಕೆಲವರನ್ನು ಬಂಧಿಸಲಾಗಿದೆ

    ಈ ಪ್ರಕರಣ ದೇಶದ ಗಮನ ಸೆಳೆದಿದ್ದು, ಪೊಲೀಸರು ಅಗತ್ಯ ಕೈಗೊಳ್ಳುತ್ತೇವೆ ಎಂದಿದ್ದು, ಈಗಾಗಲೇ ಕೆಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

    English summary
    Actress Anushka Sharma lambasted on Indore people who thrown stones on medical workers today.
    Saturday, May 30, 2020, 14:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X