ಮುಂಬೈಗೆ ಮುರಳಿದ ನಟಿ ಅನುಷ್ಕಾ ಶರ್ಮಾ; ವರ್ಕೌಟ್ ಫೋಟೋ ವೈರಲ್

ಬಾಲಿವುಡ್​ ಖ್ಯಾತ ನಟಿ ಅನುಷ್ಕಾ ಶರ್ಮಾ ಕಳೆದ ಕೆಲವು ತಿಂಗಳುಗಳಿಂದ ಪತಿ ವಿರಾಟ್ ಕೊಹ್ಲಿ ಜೊತೆ ಇಂಗ್ಲೆಂಡ್ ಪ್ರವಾಸದಲ್ಲಿದ್ದರು. ಇದೀಗ ಮುಂಬೈಗೆ ವಾಪಸ್ ಆಗಿದ್ದಾರೆ. ಪತಿ ವಿರಾಟ್ ಕೊಹ್ಲಿ ಐಪಿಎಲ್ 2021ರ ಮುಂದುವರೆದ ಭಾಗವಾಗಿ ದುಬೈನಲ್ಲಿದ್ದಾರೆ.ಆದರೆ ಅನುಷ್ಕಾ ಮಾತ್ರ ಮಗಳು ವಮಿಕಾ ಜೊತೆ ಮುಂಬೈನಲ್ಲೇ ಇದ್ದಾರೆ.

ಮಗಳ ಆರೈಕೆ ಜೊತೆಗೆ ಅನುಷ್ಕಾ ಮತ್ತೆ ವರ್ಕೌಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮುಂಬೈಗೆ ವಾಪಸ್ ಆಗಿರುವ ಫೋಟೋ ಜೊತೆಗೆ ಅನುಷ್ಕಾ ವರ್ಕೌಟ್ ಫೋಟೋವನ್ನು ಶೇರ್ ಮಾಡಿದ್ದಾರೆ. ಮೊದಲ ಮಗುವಿಗೆ ಜನ್ಮ ನೀಡಿದ ಬಳಿಕ ಅನುಷ್ಕಾ ಮತ್ತೆ ಫಿಟ್ನೆಸ್ ಕಡೆ ಗಮನ ಹರಿಸಿದ್ದಾರೆ.

ಈ ಕುರಿತು ಇನ್ಸ್ಟಾಗ್ರಾಂ ಸ್ಟೋರಿಸ್‌ನಲ್ಲಿ ಫೋಟೋ ಹಂಚಿಕೊಂಡಿರುವ ಅನುಷ್ಕಾ, ತಮ್ಮ ಮನೆಯಿಂದ ಕಾಣುವ ಸಮುದ್ರದ ಚಿತ್ರವನ್ನು ಶೇರ್ ಮಾಡಿದ್ದಾರೆ. ಜೊತೆಗೆ ವರ್ಕೌಟ್ ಮುಗಿಸಿದ ನಂತರದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ವೀಕ್ಷಿಸಿದ ನಂತರ ಅಭಿಮಾನಿಗಳು, ಅನುಷ್ಕಾ ಮತ್ತೆ ಚಿತ್ರರಂಗಕ್ಕೆ ಮರಳುತ್ತೀರಾ? ಎಂದು ಪ್ರಶ್ನಿಸುತ್ತಿದ್ದಾರೆ.

Anushka Sharma returns to Mumbai, shares workout photo

ಅನುಷ್ಕಾ ಮಗಳ ಆರೋಗ್ಯದ ದೃಷ್ಟಿಯಿಂದ ಮುಂಬೈಗೆ ವಾಪಸ್ ಆಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ವರ್ಕೌಟ್ ಕಡೆ ಹೆಚ್ಚು ಗಮನಹರಿಸಿರುವುದನ್ನು ನೋಡಿದ್ರೆ ಅನುಷ್ಕಾ ಮತ್ತೆ ಬಣ್ಣ ಹಚ್ಚುವ ತಯಾರಿ ನಡೆಸುತ್ತಿದ್ದಾರಾ ಎನ್ನುವ ಅನುಮಾನ ಸಹ ಕಾಡುತ್ತಿದೆ. ಅನುಷ್ಕಾ ಕೊನೆಯದಾಗಿ ಶಾರುಖ್ ಖಾನ್ ನಟನೆಯ ಜೀರೋ ಸಿನಿಮಾದಲ್ಲಿ ನಟಿಸುತ್ತಿದ್ದರು. ಬಳಿಕ ಮತ್ತೆ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ನಂತರ ಸಿನಿಮಾ ಮತ್ತು ವೆಬ್ ಸೀರಿಸ್ ನಿರ್ಮಾಣ ಮಾಡಿ ಸಕ್ಸಸ್ ಕಂಡ ಅನುಷ್ಕಾ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ.

ಸದ್ಯ ಅನುಷ್ಕಾ ಕಳೆದ ವರ್ಷ ಅಗಲಿದ ನಟ ಇರ್ಫಾನ್​ ಖಾನ್​ರ ಪುತ್ರ ಬಬಿಲ್ ಕಾಣಿಸಿಕೊಳ್ಳುತ್ತಿರುವ 'ಕಾಲ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅವರ ನಿರ್ಮಾಣದ ವೆಬ್ ಸಿರೀಸ್ 'ಪಾತಾಳ್ ಲೋಕ್' ಸೀರಿಸ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೆಯೇ ನೆಟ್ ​ಫ್ಲಿಕ್ಸ್ ​ನಲ್ಲಿ ತೆರೆಕಂಡ 'ಬುಲ್ ​ಬುಲ್' ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು.

ಸದ್ಯ ಅನುಷ್ಕಾ ಯಾವಾಗ ಬಣ್ಣ ಹಚ್ಚುತ್ತಾರೆ, ಯಾವ ರೀತಿಯ ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಈ ಬಗ್ಗೆ ಸದ್ಯದಲ್ಲೇ ಮಾಹಿತಿ ಹಂಚಿಕೊಂಡರು ಅಚ್ಚರಿ ಇಲ್ಲ.

More from Filmibeat

English summary
Bollywood Actress Anushka Sharma returns to Mumbai, shares workout photo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X