For Quick Alerts
  ALLOW NOTIFICATIONS  
  For Daily Alerts

  ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೆ ಕೆಲಸಕ್ಕೆ ಮರಳಿದ ನಟಿ ಅನುಷ್ಕಾ ಶರ್ಮಾ

  |

  ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತೆ ಕೆಲಸಕ್ಕೆ ವಾಪಸ್ ಆಗಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ನಟಿ ಅನುಷ್ಕಾ ಇದೀಗ ರಜೆ ಮುಗಿಸಿ ತನ್ನ ಕೆಲಸಕ್ಕೆ ಹಾಜರಾಗಿದ್ದಾರೆ.

  ಇಂದು (ಮಾರ್ಚ್ 31) ಬೆಳಗ್ಗೆ ನಟಿ ಅನುಷ್ಕಾ ಶೂಟಿಂಗ್ ಸೆಟ್‌ಗೆ ಹಾಜರಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಳಿ ಬಣ್ಣದ ಟಾಪ್ ಮತ್ತು ಡೆನಿಮ್ ಜೀನ್ಸ್ ಧರಿಸಿರುವ ಅನುಷ್ಕಾ ತನ್ನ ವ್ಯಾನಿಟಿ ವ್ಯಾನ್‌ನಿಂದ ಹೊರಬರುತ್ತಿರುವ ಫೋಟೋ ಎಲ್ಲಾ ಕಡೆ ಹರಿದಾಡುತ್ತಿದೆ.

  ಅಂದಹಾಗೆ ಅನುಷ್ಕಾ ಮೇ ತಿಂಗಳಿಂದ ಚಿತ್ರೀಕರಣಕ್ಕೆ ಮರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೇ ಎರಡು ತಿಂಗಳ ಮುಂಚಿತವಾಗಿಯೇ ಕೆಲಸ ಪ್ರಾರಂಭಿಸಿ ಅಚ್ಚರಿ ಮೂಡಿಸಿದ್ದಾರೆ.

  ವಿರಾಟ್ ಮತ್ತು ಅನುಷ್ಕಾ ದಂಪತಿ ಮನೆಯಲ್ಲಿ ಮನೆಗೆಲಸದವರನ್ನು ಇಟ್ಟುಕೊಂಡಿಲ್ಲವಂತೆವಿರಾಟ್ ಮತ್ತು ಅನುಷ್ಕಾ ದಂಪತಿ ಮನೆಯಲ್ಲಿ ಮನೆಗೆಲಸದವರನ್ನು ಇಟ್ಟುಕೊಂಡಿಲ್ಲವಂತೆ

  ಈ ಹಿಂದೆ ಅನುಷ್ಕಾ ನಟನೆ ಮುಂದುವರೆಸುವ ಬಗ್ಗೆ ಮಾತನಾಡಿ, 'ನಾನು ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೆ ನಟನೆಗೆ ಮರಳುತ್ತೇನೆ. ನನ್ನ ಮಗು, ಮನೆ ಮತ್ತು ಕೆಲಸ ಎಲ್ಲದರ ನಡುವೆ ಸಮಯ ಹೊಂದಾಣಿಕೆ ಮಾಡಿಕೊಳ್ಳಬೇಕು. ನಾನು ಬದುಕಿರುವವರೆಗೂ ಕೆಲಸ ಮಾಡುವುದನ್ನು ಬಯಸುತ್ತೇನೆ. ನಟನೆ ನನಗೆ ಸಂತೋಷವನ್ನು ನೀಡುತ್ತೆ' ಎಂದು ಹೇಳಿದ್ದರು. ಅದರಂತೆ ಈಗ ಅನುಷ್ಕಾ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.

  ಇತ್ತೀಚಿಗಷ್ಟೆ ಅನುಷ್ಕಾ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಗಿಸಿ ಮುಂಬೈ ವಾಪಸ್ ಆಗಿದ್ದಾರೆ. ಮಗಳು ವಮಿಕಾ ಮತ್ತು ವಿರಾಟ್ ಕೊಹ್ಲಿ ಜೊತೆ ಅನುಷ್ಕಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಫೋಟೋಗಳು ಇತ್ತೀಚಿಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

  ಸದ್ಯ ಅನುಷ್ಕಾ ಜಾಹೀರಾತು ಚಿತ್ರೀಕರಣಕ್ಕೆ ವಾಪಸ್ ಆಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ಶೂಟಿಂಗ್‌ನಲ್ಲೂ ಭಾಗಿಯಾಗುವ ಮೂಲಕ ಪೂರ್ಣ ಪ್ರಮಾಣದ ಚಿತ್ರೀಕರಣದಲ್ಲಿ ನಿರತರಾಗಲಿದ್ದಾರೆ. ಅನುಷ್ಕಾ ತೆರೆಮೇಲೆ ಬರದೆ ಮೂರು ವರ್ಷಗಳ ಮೇಲಾಗಿದೆ. ಶಾರುಖ್ ಖಾನ್ ನಟನೆಯ ಝೀರೋ ಸಿನಿಮಾದಲ್ಲಿ ಅನುಷ್ಕಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಹಾಗಾಗಿ ಅನುಷ್ಕಾ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

  English summary
  Actress Anushka Sharma returns to work after welcoming baby girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X