For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ ಶರ್ಮಾಳ ಬಾಡಿಗಾರ್ಡ್‌ನ ಸಂಬಳ ಎಷ್ಟು?

  |

  ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿ ಭಾರತದ ಟಾಪ್ ಸೆಲೆಬ್ರಿಟಿ ದಂಪತಿ ಪಟ್ಟಿಯಲ್ಲಿರುವವರು. ಇಬ್ಬರ ಒಟ್ಟು ಮೌಲ್ಯ ಕೆಲವು ಸಾವಿರ ಕೋಟಿಗಳಾಗುತ್ತವೆ.

  ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಈ ಇಬ್ಬರು ಹೊರಗೆ ಹೋಗಬೇಕೆಂದರೆ ಬಿಗಿ ಭದ್ರತೆಯಲ್ಲಿಯೇ ಹೋಗುತ್ತಾರೆ. ಪದ್ಮಶ್ರೀ ಪುರಸ್ಕೃತ ವಿರಾಟ್ ಕೊಹ್ಲಿಗೆ ಸರ್ಕಾರ ಭದ್ರತೆ ನೀಡಿದೆ. ಜೊತೆಗೆ ಖಾಸಗಿ ಬಾಡಿಗಾರ್ಡ್ ಅನ್ನು ಸಹ ಅವರು ಹೊಂದಿದ್ದಾರೆ. ನಟಿ ಅನುಷ್ಕಾ ಶರ್ಮಾ ಸಹ ಹಲವು ವರ್ಷಗಳಿಂದ ಒಬ್ಬ ಬಾಡಿಗಾರ್ಡ್ ಅನ್ನು ಹೊಂದಿದ್ದಾರೆ.

  ನಟಿ ಅನುಷ್ಕಾ ಶರ್ಮಾ ನೇಮಿಸಿಕೊಂಡಿರುವ ಬಾಡಿಗಾರ್ಡ್‌ಗೆ ದೊಡ್ಡ ಮೊತ್ತದ ಸಂಬಳವನ್ನು ಈ ನಟಿ ನೀಡುತ್ತಾರೆ. ಅನುಷ್ಕಾ ನೀಡಿರುವ ಸಂಬಳ ಲಕ್ಷಗಳ ಲೆಕ್ಕದಲ್ಲ ಬದಲಿಗೆ ಕೋಟಿಗಳ ಲೆಕ್ಕದಲ್ಲಿದೆ.

  ಅನುಷ್ಕಾ ಶರ್ಮಾರ ಬಾಡಿಗಾರ್ಡ್ ಹೆಸರು ಪ್ರಕಾಶ್ ಸಿಂಗ್ ಅವರನ್ನು ಅನುಷ್ಕಾ ಹಾಗೂ ಬಾಲಿವುಡ್‌ನ ಮಂದಿ ಸೋನು ಎಂದೇ ಕರೆಯುತ್ತಾರೆ. ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಯನ್ನು ಮದುವೆಯಾಗುವ ಮುಂಚೆಯಿಂದಲೂ ಸೋನು ಅನುಷ್ಕಾ ಶರ್ಮಾರ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ.

  1.20 ಕೋಟಿ ವಾರ್ಷಿಕ ಸಂಬಳ

  1.20 ಕೋಟಿ ವಾರ್ಷಿಕ ಸಂಬಳ

  ಪ್ರಕಾಶ್ ಸಿಂಗ್‌ಗೆ ವರ್ಷಕ್ಕೆ ಬರೋಬ್ಬರಿ 1.20 ಕೋಟಿ ಸಂಬಳವನ್ನು ಅನುಷ್ಕಾ ಶರ್ಮಾ ನೀಡುತ್ತಾರೆ. ಅಂದರೆ ತಿಂಗಳಿಗೆ ಹತ್ತು ಲಕ್ಷ ಸಂಬಳವನ್ನು ಅನುಷ್ಕಾ ಶರ್ಮಾ ನೀಡುತ್ತಿದ್ದಾರೆ. ಹೀಗೆ ಸಂಬಳ ಹೆಚ್ಚಾಗಿರುವುದು ಇತ್ತೀಚೆಗೆ ಎನ್ನಲಾಗಿದೆ.

  ವಿರಾಟ್-ಅನುಷ್ಕಾಗೆ ಜಂಟಿ ಭದ್ರತೆ

  ವಿರಾಟ್-ಅನುಷ್ಕಾಗೆ ಜಂಟಿ ಭದ್ರತೆ

  ಮುಂಚೆ ಅನುಷ್ಕಾ ಶರ್ಮಾಗೆ ಮಾತ್ರವೇ ಭದ್ರತೆ ನೀಡುತ್ತಿದ್ದ ಸೋನು ಈಗ ಕೊಹ್ಲಿ ಹಾಗೂ ಅನುಷ್ಕಾಗೆ ಜಂಟಿ ಅಂಗರಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿಯೇ ಅವರ ಸಂಬಳದಲ್ಲಿಯೂ ಭಾರಿ ಏರಿಕೆ ಆಗಿದೆ. ಈಗ ಈ ದಂಪತಿಗೆ ಮಗುವು ಸಹ ಆಗಿದ್ದು ಆಕೆಗೂ ಪ್ರಕಾಶ್ ಸಿಂಗ್ ಅಂಗರಕ್ಷಕರಾಗಿ ಕಾರ್ಯ ಮಾಡಲಿದ್ದಾರೆ.

  ಕುಟುಂಬವೆಂದು ಪರಿಗಣಿಸಿರುವ ಅನುಷ್ಕಾ ಶರ್ಮಾ

  ಕುಟುಂಬವೆಂದು ಪರಿಗಣಿಸಿರುವ ಅನುಷ್ಕಾ ಶರ್ಮಾ

  ಪ್ರಕಾಶ್ ಸಿಂಗ್ ಅನ್ನು ಅನುಷ್ಕಾ ಶರ್ಮಾ ನೌಕರ ಎಂದು ಪರಿಗಣಿಸಿಲ್ಲ ಬದಲಿಗೆ ಕುಟುಂಬದ ವ್ಯಕ್ತಿ ಎಂದೇ ಪರಿಗಣಿಸಿದ್ದಾರೆ. ಈ ಹಿಂದೆಯೂ ಈ ಬಗ್ಗೆ ಅನುಷ್ಕಾ ಶರ್ಮಾ ಮಾತನಾಡಿದ್ದಾರೆ. ಪ್ರತಿ ವರ್ಷ ಪ್ರಕಾಶ್ ಸಿಂಗ್ ಹುಟ್ಟುಹಬ್ಬವನ್ನು ಅವರೊಟ್ಟಿಗೆ ಇದ್ದು ಅನುಷ್ಕಾ ಶರ್ಮಾ ಆಚರಣೆ ಮಾಡುತ್ತಾರೆ.

  ಇಂದ್ರಜಿತ್ ಲಂಕೇಶ್ ಕೊಟ್ಟ ದೂರಿನಲ್ಲಿ ಏನಿದೆ? | Filmibeat Kannada
  ಅತಿ ಹೆಚ್ಚು ಸಂಭಾವನೆ ಪಡೆವ ಸಲ್ಮಾನ್ ಖಾನ್ ಬಾಡಿಗಾರ್ಡ್

  ಅತಿ ಹೆಚ್ಚು ಸಂಭಾವನೆ ಪಡೆವ ಸಲ್ಮಾನ್ ಖಾನ್ ಬಾಡಿಗಾರ್ಡ್

  ನಟ ಸಲ್ಮಾನ್ ಖಾನ್‌ರ ಬಾಡಿಗಾರ್ಡ್ ಶೇರಾ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಬಳ ಪಡೆಯುತ್ತಿರುವ ಸೆಲೆಬ್ರಿಟಿ ಬಾಡಿಗಾರ್ಡ್ ಆಗಿದ್ದಾರೆ. ಸ್ವತಃ ಶೇರಾ ಹೇಳಿರುವಂತೆ ಭಾರತದ ಹಲವು ಟಾಪ್‌ ಸಂಸ್ಥೆಗಳ ಸಿಇಓಗಳು ಪಡೆದುಕೊಳ್ಳುವುದಕ್ಕಿಂತಲೂ ಹೆಚ್ಚಿನ ಸಂಬಳವನ್ನು ಪಡೆಯುತ್ತಾರಂತೆ ಅವರು. ಕಳೆದ 26 ವರ್ಷಗಳಿಂದಲೂ ಸಲ್ಮಾನ್ ಖಾನ್‌ಗೆ ಬಾಡಿಗಾರ್ಡ್‌ ಆಗಿ ಶೇರಾ ಕೆಲಸ ಮಾಡುತ್ತಿದ್ದಾರೆ.

  English summary
  Anushka Sharma's Bodyguard Prakash receiving big amount of salary every month. He is Bodyguarding both Virat Kohli and Anushka Sharma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X