ಉಟ್ಟಿದ್ದ ಬಟ್ಟೆ ಮಾರಾಟಕ್ಕಿಟ್ಟ ಅನುಷ್ಕಾ ಶರ್ಮಾ
ಸೆಲೆಬ್ರಿಟಿಗಳು ಅಗೆದು ಉಗಿದ ಚೂಯಿಂಗ್ ಗಮ್ ಸಹ ಕೋಟಿಗಳಿಗೆ ಮಾರಾಟವಾದ ವಿಚಿತ್ರಗಳನ್ನು ಕಂಡಿದ್ದೇವೆ. ಅಭಿಮಾನಿಗಳ ಹುಚ್ಚು ಅಭಿಮಾನವನ್ನು ಹಲವು ಸೆಲೆಬ್ರಿಟಿಗಳು ತಮ್ಮ ಲಾಭಕ್ಕೆ ಬಳಸಿಕೊಂಡಿದ್ದಾರೆ. ಬಳಸಿ ಕೊಳ್ಳುತ್ತಿದ್ದಾರೆ.
ಸೆಲೆಬ್ರಿಟಿಗಳು ತಾವು ಬಳಸಿದ ವಸ್ತುವನ್ನು ಹರಾಜಿಗೆ ಇಟ್ಟು ಅದರಿಂದ ಬರುವ ಹಣವನ್ನು ಉತ್ತಮ ಕಾರ್ಯಕ್ಕಾಗಿ ಬಳಸುವುದು ಸಾಮಾನ್ಯ. ಇದೀಗ ನಟಿ ಅನುಷ್ಕಾ ಶರ್ಮಾ ತಾವು ಬಳಸಿದ ಉಡುಗೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಮಾರಾಟದಿಂದ ಬಂದ ಹಣವನ್ನು ಜಲ ಸಂರಕ್ಷಣೆಗೆ ಬಳಸುವುದಾಗಿ ಹೇಳಿದ್ದಾರೆ.
ಅನುಷ್ಕಾ ತಾವು ಗರ್ಭಿಣಿ ಆಗಿದ್ದಾಗ ತೊಟ್ಟಿದ್ದ ಉಡುಗೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. 'ಸರ್ಕ್ಯುಲರ್ ಫ್ಯಾಷನ್' ಹೆಸರಿನಲ್ಲಿ ಹೊಸದೊಂದು ಮಾದರಿ ಫ್ಯಾಷನ್ ಅಭಿಯಾನ ಅಲ್ಲಲ್ಲಿ ನಡೆಯುತ್ತಿದೆ. ಇದರ ಪ್ರಕಾರ, ಯಾವುದೇ ರೀತಿಯ ಬಟ್ಟೆಯಾದರೂ ಅದನ್ನು ತೊಡಲು ಸಾಧ್ಯವಾಗುವವರೆಗೆ ಬೇರೆಯವರಿಗೆ ನೀಡುತ್ತಿರುವುದು. ಅ ಬಟ್ಟೆಗಳು ಉಡಲು ಸಾಧ್ಯವಾಗದ ಸ್ಥಿತಿ ತಲುಪಿದಾಗ ಅವನ್ನು ಪ್ರಕೃತಿಗೆ ಹಾನಿ ಮಾಡದೆ ವಿಲೇವಾರಿ ಮಾಡುವುದು ಈ ಅಭಿಯಾನದ ಉದ್ದೇಶ.

ನಟಿ ಅನುಷ್ಕಾ ಶರ್ಮಾ ಗರ್ಭಿಣಿ ಆಗಿದ್ದಾಗ ಉಟ್ಟಿದ್ದ ಬಟ್ಟೆಗಳನ್ನು ಮಾರಾಟಕ್ಕಿದ್ದಾರೆ. ತಾಯಿಯಾಗಿರುವ ಅನುಷ್ಕಾ ಕೆಲವೇ ತಿಂಗಳಲ್ಲಿ ಸ್ಲಿಮ್ ಆಗಿದ್ದಾರೆ. ಗರ್ಭಿಣಿ ಆಗಿದ್ದಾಗ ಅನುಷ್ಕಾ ಉಡುತ್ತಿದ್ದ ಬಟ್ಟೆಗಳು ಈಗ ಅವರಿಗೆ ಅವಶ್ಯಕತೆ ಇಲ್ಲ ಹಾಗಾಗಿ ಅವುಗಳನ್ನು ಅನಷ್ಕಾ ಮಾರಾಟಕ್ಕಿಟ್ಟಿದ್ದಾರೆ.
'ಸ್ನೇಹ' ಹೆಸರಿನ ಎನ್‌ಜಿಓ ಜೊತೆ ಕೈಜೋಡಿಸಿರುವ ಅನುಷ್ಕಾ ಶರ್ಮಾ ತಮ್ಮ ಬಟ್ಟೆಗಳ ಮಾರಾಟದಿಂದ ಬಂದ ಹಣವನ್ನು ಅದೇ ಎನ್‌ಜಿಓಗೆ ನೀಡಲಿದ್ದಾರೆ. ಆ ಎನ್‌ಜಿಓ ಆ ಹಣವನ್ನು ಬಳಸಿ ಕನಿಷ್ಠ 2.50 ಲಕ್ಷ ಲೀಟರ್ ನೀರು ಉಳಿಸುವ ಗುರಿಯನ್ನು ಹಾಕಿಕೊಂಡಿದೆ.
Recommended Video
ಈ ಬಗ್ಗೆ ಮಾತನಾಡಿರುವ ನಟಿ ಅನುಷ್ಕಾ, ''ಒಂದು ಪ್ರತಿಶತ ನಗರವಾಸಿ ಗರ್ಭಿಣಿ ಮಹಿಳೆಯರು ಹೊಸ ಬಟ್ಟೆಗಳನ್ನು ಖರೀದಿಸುವ ಬದಲಿಗೆ ಬಳಸಿರುವ ಬಟ್ಟೆಗಳನ್ನು ಖರೀದಿಸಿದರೆ ಕೇವಲ ಒಂದು ವರ್ಷದಲ್ಲಿ ಒಬ್ಬ ವ್ಯಕ್ತಿ 200 ವರ್ಷ ಕುಡಿಯಬಹುದಾದಷ್ಟು ನೀರು ಉಳಿಸಬಹುದು'' ಎಂದಿದ್ದಾರೆ. ವಿಚಿತ್ರವೆಂದರೆ ಹೀಗೆ ಬಳಸಿರುವ ಬಟ್ಟೆಗಳನ್ನು ಬಳಸಿ ಎಂದು ಹೇಳಿರುವ ಅನುಷ್ಕಾ ತಾವು ಗರ್ಭಿಣಿ ಆಗಿದ್ದಾಗ ಹೊಸ ಬಟ್ಟೆಗಳನ್ನೇ ಖರೀದಿಸಿದ್ದರು ಹಾಗೂ ಈಗಲೂ ಹೊಸ ಬಟ್ಟೆಗಳನ್ನೇ ಖರೀಸುತ್ತಿದ್ದಾರೆ.


Click it and Unblock the Notifications











