For Quick Alerts
  ALLOW NOTIFICATIONS  
  For Daily Alerts

  ಶೂ ಸ್ವಚ್ಛಗೊಳಿಸಿದ ಕೊಹ್ಲಿ: ಚಿತ್ರ ಹಂಚಿಕೊಂಡ ಅನುಷ್ಕಾ ಶರ್ಮಾ

  |

  ಐಪಿಎಲ್ 2020 ಯ ಆರಂಭದಲ್ಲಿ ಟ್ರೋಫಿ ಗೆಲ್ಲುವ ಭರವಸೆ ಮೂಡಿಸಿದ್ದ ಆರ್‌ಸಿಬಿ ತಂಡ ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಸೋತು ಮನೆಗೆ ವಾಪಸ್ಸಾಗಿದೆ. ವಿರಾಟ್ ಕೊಹ್ಲಿ ಜೊತೆಗೆ ದುಬೈನಲ್ಲಿದ್ದ ನಟಿ ಅನುಷ್ಕಾ ಶರ್ಮಾ ಸಹ ವಾಪಸ್ಸಾಗಿದ್ದಾರೆ.

  ಈ ಐಪಿಎಲ್ 2020 ಯಲ್ಲಿ ಕೊಹ್ಲಿ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿತ್ತು. ಆದರೆ ಕೆಲವು ಪಂದ್ಯಗಳಲ್ಲಿ ಚೆನ್ನಾಗಿ ಆಡಿದ ಕೊಹ್ಲಿ, ತಂಡಕ್ಕೆ ಅವಶ್ಯಕತೆ ಇದ್ದಾಗಲೇ ಬೇಗನೇ ಔಟಾಗಿ ನಿರಾಸೆ ಮೂಡಿಸಿದರು.

  ಈಗ ಐಪಿಎಲ್ ಮುಗಿದಿದೆ. ಇನ್ನೇನಿದ್ದರೂ ಅಂತರರಾಷ್ಟ್ರೀಯ ಪಂದ್ಯಗಳತ್ತ ಚಿತ್ರ. ಇನ್ನು ದೇಶಕ್ಕಾಗಿ ಆಡಲು ಕೊಹ್ಲಿ ಮಾನಸಿಕವಾಗಿ, ದೈಹಿಕವಾಗಿ ತಯಾರಾಗಬೇಕಿದೆ. ಆದರೆ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ ಕೊಹ್ಲಿ. ಪತ್ನಿ ಅನುಷ್ಕಾ ಶರ್ಮಾ ಹಂಚಿಕೊಂಡಿರುವ ಇದಕ್ಕೆ ಸಾಕ್ಷ್ಯ ನೀಡುತ್ತಿದೆ.

  ಶೂ ತೊಳೆಯುತ್ತಿರುವ ವಿರಾಟ್ ಕೊಹ್ಲಿ

  ಶೂ ತೊಳೆಯುತ್ತಿರುವ ವಿರಾಟ್ ಕೊಹ್ಲಿ

  ವಿರಾಟ್ ಕೊಹ್ಲಿ, ಕೊಳೆಯಾದ ತಮ್ಮ ಶೂಗಳನ್ನು ಟೂತ್‌ ಬ್ರಷ್‌ ಬಳಸಿ ಸ್ವಚ್ಛಗೊಳಿಸುತ್ತಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಲೆಂದು ಈ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ ಕೊಹ್ಲಿ. ಹಲವು ಬ್ರ್ಯಾಂಡ್‌ಗಳ ರಾಯಭಾರಿ ಆಗಿರುವ ಕೊಹ್ಲಿಗೆ ಹೊಸ ಶೂ ತೆಗೆದುಕೊಳ್ಳುವುದು ದೊಡ್ಡದಲ್ಲ, ಅಥವಾ ಕೆಲಸದವರಿಂದ ಶೂ ತೊಳೆಸಿಕೊಳ್ಳುವುದು ಸಹ ದೊಡ್ಡದಲ್ಲ, ಆದರೆ ಕೊಹ್ಲಿ ತಮ್ಮ ಶೂ ತಾವೇ ತೊಳೆದುಕೊಳ್ಳುತ್ತಿದ್ದಾರೆ ಇದರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

  ನವೆಂಬರ್ 27 ರಿಂದ ಆಸ್ಟ್ರೇಲಿಯಾ ವಿರುದ್ಧ ಸರಣಿ

  ನವೆಂಬರ್ 27 ರಿಂದ ಆಸ್ಟ್ರೇಲಿಯಾ ವಿರುದ್ಧ ಸರಣಿ

  ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವು ನವೆಂಬರ್ 27 ರಿಂದ ಆಸ್ಟ್ರೇಲಿಯಾ ಪ್ರವಾಸ ಆರಂಭಿಸಲಿದೆ. ಮೂರು ಟಿ-20, ಮೂರು ಏಕದಿನ ಹಾಗೂ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ವಿರಾಟ್ ಕೊಹ್ಲಿಯು ಟೆಸ್ಟ್ ಸರಣಿಯ ಮಧ್ಯಭಾಗದಲ್ಲಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ.

  Chiru ಹಾಗೂ Meghana ಕುಟುಂಬಕ್ಕೆ ನಾಳೆ ತುಂಬಾ ವಿಶೇಷ ದಿನ | Chiru Naming Ceremony? | Filmibeat Kannada
  ಜನವರಿಯಲ್ಲಿ ಮಗು

  ಜನವರಿಯಲ್ಲಿ ಮಗು

  ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದು, ವಿರಾಟ್-ಅನುಷ್ಕಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜನವರಿಯಲ್ಲಿ ಅನುಷ್ಕಾಗೆ ಹೆರಿಗೆ ಆಗಲಿದೆ. ಆ ವೇಳೆಗೆ ಸರಿಯಾಗಿ ಆಸ್ಟ್ರೇಲಿಯಾ ಪ್ರವಾಸದಿಂದ ಬಿಡುವು ಪಡೆದು ವಾಪಸ್ ಬರಲಿದ್ದಾರೆ ವಿರಾಟ್ ಕೊಹ್ಲಿ.

  English summary
  Virat Kohli cleaning his shoes and getting ready for Australia tour. Anushka Sharma shared picture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X