ರಸ್ತೆ ಮೇಲೆ ಪ್ಲಾಸ್ಟಿಕ್ ಬಿಸಾಕಿದವನ ಮುಖಕ್ಕೆ ಮಂಗಳಾರತಿ ಮಾಡಿದ ಅನುಷ್ಕಾ.!

By Harshitha

Recommended Video

ಸ್ವಚ್ಛತೆ ಬಗ್ಗೆ ಪಾಠ ಹೇಳಿದ ವಿರುಷ್ಕಾಗೆ ಅಮ್ಮ-ಮಗನಿಂದ ತರಾಟೆ

ಕಾಲ ಬದಲಾಗಿದೆ. ಸಮಾಜದ ಬಗ್ಗೆ ಚಿಂತನೆ ಮಾಡುವವರ ಸಂಖ್ಯೆ ದಿನೇ ದಿನೇ ಕಮ್ಮಿ ಆಗುತ್ತಿದೆ. ''ನಾವಾಯ್ತು.. ನಮ್ಮನೆಯವರಾಯ್ತು.. ನಾವು ಚೆನ್ನಾಗಿದ್ದರೆ ಸಾಕು. ಬೇರೆಯವರು ಹೇಗಾದರೂ ಇರಲಿ'' ಅಂತ ಈಗ ಯೋಚಿಸುವವರೇ ಹೆಚ್ಚು.

ಅಪಘಾತವಾಗಿ ರಸ್ತೆಯಲ್ಲಿ ರಕ್ತಸ್ರಾವದಿಂದ ಯಾರಾದರೂ ಒದ್ದಾಡುತ್ತಿದ್ದರೆ, ಅದನ್ನ ಜನ ವಿಡಿಯೋ ಮಾಡುತ್ತಾರೆ ಹೊರತು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಯೋಚನೆ ಮಾಡುವವರು ಕೇವಲ ಬೆರಳೆಣಿಕೆಯಷ್ಟು ಮಂದಿ. ''ನಮಗ್ಯಾಕೆ ಊರವರ ಉಸಾಬರಿ'' ಅಂತ ಭಾವಿಸುವವರೇ ಜಾಸ್ತಿ.

ಮನೆ ಮಾತ್ರ ಸ್ವಚ್ಛವಾಗಿದ್ದರೆ ಸಾಲದು, ಸಮಾಜ ಕೂಡ ಸ್ವಚ್ಛವಾಗಿರಬೇಕು ಅಂತ ಯಾರು ಎಷ್ಟೇ ಹೇಳಿದರೂ ಅದೆಲ್ಲ ಕೆಲವರ ತಲೆಗೆ ಹೋಗುವುದೇ ಇಲ್ಲ. ಆದರೂ, ನಮ್ಮ ಪ್ರಯತ್ನ ಬಿಡಬಾರದು. ಮಾರಕ ಪ್ಲಾಸಿಕ್ ನ ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿಸಾಡಬಾರದು ಎಂಬ ಸಂದೇಶ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿಯಿಂದ ಬಂದಿದೆ.

ಐಷಾರಾಮಿ ಕಾರ್ ನಲ್ಲಿ ಕೂತ್ಕೊಂಡು ಬೇಜವಾಬ್ದಾರಿಯಿಂದ ರಸ್ತೆ ಮೇಲೆ ಪ್ಲಾಸ್ಟಿಕ್ ಬಿಸಾಕಿದ ಓರ್ವ ವ್ಯಕ್ತಿಯ ಮುಖಕ್ಕೆ ನಟಿ ಅನುಷ್ಕಾ ಶರ್ಮಾ ಮಂಗಳಾರತಿ ಮಾಡಿದ್ದಾರೆ. ಮುಂದೆ ಓದಿರಿ...

ಮೊದಲು ಈ ವಿಡಿಯೋ ನೋಡಿ....

ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಕಾರ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಓರ್ವ ವ್ಯಕ್ತಿ ರಸ್ತೆ ಮೇಲೆ ಪ್ಲಾಸ್ಟಿಕ್ ಬಿಸಾಕಿದ್ದನ್ನ ನೋಡಿದ್ಮೇಲೆ, ಆ ವ್ಯಕ್ತಿಯನ್ನ ನಟಿ ಅನುಷ್ಕಾ ಶರ್ಮಾ ತರಾಟೆಗೆ ತೆಗೆದುಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ...

ಅನುಷ್ಕಾ ಶರ್ಮಾ ಹೇಳಿದ್ದೇನು.?

ಅನುಷ್ಕಾ ಶರ್ಮಾ ಹೇಳಿದ್ದೇನು.?

''ರಸ್ತೆ ಮೇಲೆ ಕಸವನ್ನ ಯಾಕೆ ಎಸೆಯುತ್ತಿದ್ದೀರಾ.? ಪ್ಲಾಸ್ಟಿಕ್ ನ ರಸ್ತೆಗೆ ಯಾಕೆ ಎಸೆಯುತ್ತಿದ್ದೀರಾ.? ದಯವಿಟ್ಟು ಹುಷಾರಾಗಿರಿ. ರಸ್ತೆ ಮೇಲೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯಬೇಡಿ. ಕಸದ ಬುಟ್ಟಿ ಉಪಯೋಗಿಸಿ'' ಎಂದು ಐಷಾರಾಮಿ ಕಾರ್ ನಲ್ಲಿ ಆಸೀನರಾದ ವ್ಯಕ್ತಿಗೆ ನಟಿ ಅನುಷ್ಕಾ ಶರ್ಮಾ ಹೇಳಿದರು.

ವಿಡಿಯೋ ರೆಕಾರ್ಡ್ ಮಾಡಿದ್ದು ವಿರಾಟ್ ಕೊಹ್ಲಿ

ವಿಡಿಯೋ ರೆಕಾರ್ಡ್ ಮಾಡಿದ್ದು ವಿರಾಟ್ ಕೊಹ್ಲಿ

ಅನುಷ್ಕಾ ಶರ್ಮಾ ರವರ ಈ ಸಾಮಾಜಿಕ ಕಳಕಳಿಯನ್ನ ವಿಡಿಯೋ ಮಾಡಿದವರು ಬೇರೆ ಯಾರೂ ಅಲ್ಲ. ಸ್ವತಃ ಅನುಷ್ಕಾ ಪತಿ ವಿರಾಟ್ ಕೊಹ್ಲಿ.

ವಿರಾಟ್ ಕೊಹ್ಲಿ ಅಭಿಪ್ರಾಯ ಏನು.?

ವಿರಾಟ್ ಕೊಹ್ಲಿ ಅಭಿಪ್ರಾಯ ಏನು.?

''ರಸ್ತೆ ಮೇಲೆ ಕಸ ಎಸೆಯುತ್ತಿದ್ದ ವ್ಯಕ್ತಿಗೆ ಬುದ್ಧಿ ಹೇಳಿದ್ದೇವೆ. ಐಷಾರಾಮಿ ಕಾರ್ ನಲ್ಲಿ ಪ್ರಯಾಣ ಮಾಡುತ್ತಿದ್ದರೂ ತಲೆಯಲ್ಲಿ ಬುದ್ಧಿ ಇರುವುದಿಲ್ಲ. ಇಂತಹ ಜನ ನಮ್ಮ ದೇಶವನ್ನ ಹೇಗೆ ಸ್ವಚ್ಛವಾಗಿ ಇಡುತ್ತಾರೆ.? ಇದೇ ತರಹ ನಿಮ್ಮ ಅಕ್ಕ-ಪಕ್ಕದಲ್ಲಿ ಆಗುತ್ತಿದ್ದರೆ, ಹೀಗೇ ಬುದ್ಧಿ ಹೇಳಿ ಜನರಲ್ಲಿ ಅರಿವು ಮೂಡಿಸಿ'' ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ನಿಮಗೇನು ಅನಿಸುತ್ತೆ.?

ನಿಮಗೇನು ಅನಿಸುತ್ತೆ.?

ಅನುಷ್ಕಾ ಮಾಡಿದ ಈ ಕೆಲಸಕ್ಕೆ ನಿಮ್ಮ ಅಭಿಪ್ರಾಯ ಏನು.? ಅನುಷ್ಕಾ ಮಾಡಿದ್ದು ಸರಿ ಅಂತ ನೀವು ಹೇಳ್ತೀರಾ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Watch Video: Bollywood Actress Anushka Sharma slams a man who littered on the road.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X