ಬಾಡಿ ಶೇಮಿಂಗ್ಗೆ ಒಳಗಾದ ಜರೀನ್ ಖಾನ್: ಬೆಂಬಲಕ್ಕೆ ನಿಂತ ಅನುಷ್ಕಾ ಶರ್ಮಾ
ಬಾಡಿ ಶೇಮಿಂಗ್ ಎನ್ನುವುದು ಸಿನಿಮಾ ಜಗತ್ತಿನಲ್ಲಿ ಅಗಾಗ ಸದ್ದು ಮಾಡುತ್ತಲೇ ಇದೆ. ಈ ವಿಚಾರದಲ್ಲಿ ಅನೇಕ ನಟಿಯರು ಟೀಕೆಗೆ ಗುರಿಯಾಗಿದ್ದಾರೆ. ಇದೀಗ, 'ವೀರ್' ಖ್ಯಾತಿಯ ನಟಿ ಜರೀನ್ ಖಾನ್ ಬಾಡಿ ಶೇಮಿಂಗ್ ಗೆ ಆಹಾರವಾಗಿದ್ದಾರೆ.
ಇತ್ತೀಚಿಗಷ್ಟೆ ಇನ್ಸ್ಟಾಗ್ರಾಂನಲ್ಲಿ ಜರೀನ್ ಖಾನ್ ಒಂದು ಫೋಟೋ ಹಂಚಿಕೊಂಡಿದ್ದರು. ರಾಜಸ್ಥಾನದ ಉದಯ್ ಪುರದಲ್ಲಿರುವ ಪಿಚೋರ ನದಿ ಬಳಿ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋದಲ್ಲಿ ಜರೀನ್ ಖಾನ್ ಹೊಟ್ಟೆಯ ಮೇಲೆ ಸ್ಟ್ರಚ್ ಮಾರ್ಕ್ ಕಾಣುತ್ತಿದೆ.
ಇದನ್ನ ಪ್ರಶ್ನಿಸಿರುವ ನೆಟ್ಟಿಗರು 'ಜರೀನ್ ಖಾನ್ ಏನಿದು ನಿನ್ನ ಹೊಟ್ಟೆಯ ಮೇಲೆ ಸ್ಟ್ರಚ್ ಮಾರ್ಕ್ ಇದೆ' ಎಂದು ಕಾಲೆಳೆದಿದ್ದಾರೆ. ಇದಕ್ಕೆ ಖಡಕ್ ಆಗಿ ಪ್ರತಿಕ್ರಿಯೆ ಕೊಟ್ಟಿರುವ ಜರೀನ್ ತನ್ನ ಹೊಟ್ಟೆಯ ಮೇಲೆ ಕಾಣಿಸುತ್ತಿರುವ ಸ್ಟ್ರಚ್ ಮಾರ್ಕ್ ರಹಸ್ಯ ಬಹಿರಂಗಪಡಿಸಿದ್ದು, ತಿರುಗೇಟು ನೀಡಿದ್ದಾರೆ.
''ಯಾವುದೇ ವ್ಯಕ್ತಿ ತನ್ನ ದೇಹದ 50 ಕೆಜಿ ತೂಕ ಕಳೆದುಕೊಂಡಲ್ಲಿ ಸಹಜವಾಗಿ ಇಂತಹ ಸ್ಟ್ರಚ್ ಮಾರ್ಕ್ ಉಳಿದುಕೊಳ್ಳುವುದು ಸಹಜ. ಅದನ್ನ ಫೋಟೋಶಾಪ್ ಮಾಡಿ ಅಥವಾ ಎಡಿಟ್ ಮಾಡಿ ಫೋಟೋ ಹಾಕಲು ಸಾಧ್ಯವಿಲ್ಲ. ನಾನು ಸಹಜವಾಗಿ ಇದ್ದ ಹಾಗೆ ಇರಲು ಬಯಸುತ್ತೇನೆ. ಮರೆಮಾಚಲು ಇಷ್ಟಡುವುದಿಲ್ಲ'' ಎಂದು ತಿರುಗೇಟು ನೀಡಿದ್ದಾರೆ.

ಇದಕ್ಕೆ ಬೆಂಬಲ ವ್ಯಕ್ತಪಡಿಸಿರುವ ನಟಿ ಅನುಷ್ಕಾ ಶರ್ಮಾ, ''ಜರೀನ್, ನೀವು ಇರುವ ರೀತಿಯಲ್ಲಿಯೇ ಪರಿಪೂರ್ಣರಾಗಿದ್ದೀರಿ ಮತ್ತು ಸುಂದರ ಮತ್ತು ಧೈರ್ಯಶಾಲಿ ಮತ್ತು ಬಲವಾಗಿದ್ದೀರಿ'' ಎಂದು ಬರೆದು ಮಾನಸಿಕ ಸ್ಥೈರ್ಯ ತುಂಬಿದ್ದಾರೆ.
ಅಂದ್ಹಾಗೆ, ಜರೀನ್ ಖಾನ್ ಈ ರೀತಿ ಬಾಡಿ ಶೇಮಿಂಗ್ ಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕು ಮುಂಚೆಯೇ ಹಲವು ಬಾರಿ ಈ ರೀತಿ ಟೀಕೆಗೆ ಗುರಿಯಾಗಿದ್ದಾರೆ. ಸಿನಿಮಾ ರಂಗಕ್ಕೆ ಬರುವ ಮೊದಲು 100 ಕೆಜಿಗೂ ಹೆಚ್ಚು ತೂಕ ಇದ್ದರಂತೆ. ಆಗಲೂ ಇಂತಹ ಅನುಭವಗಳನ್ನ ಎದುರಿಸಿದ್ದರಂತೆ.

2010ರಲ್ಲಿ ಸಲ್ಮಾನ್ ಖಾನ್ ಅಭಿನಯದ 'ವೀರ್' ಸಿನಿಮಾ ಬಾಲಿವುಡ್ ಪ್ರವೇಶಿಸಿದ ಜರೀನ್ ಖಾನ್, ರೆಡಿ, ಹೌಸ್ ಫುಲ್ 2, ಹೇಟ್ ಸ್ಟೋರಿ 3, ಆಸ್ಕರ್ 2, 1921 ಅಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಪಂಜಾಬಿನಲ್ಲಿ ಒಂದು ಸಿನಿಮಾ ಮಾಡ್ತಿದ್ದಾರೆ.


Click it and Unblock the Notifications











