ಬಾಲಿವುಡ್‌ ನಟಿ 'ಅನುಷ್ಕಾ ಶರ್ಮಾ' ಕಮ್ ಬ್ಯಾಕ್: 3 ದೊಡ್ಡ ಸಿನಿಮಾಗಳಿಗೆ ಸಹಿ!

ಬಾಲಿವುಡ್‌ನ ಹೆಸರಾಂತ ನಟಿ ಅನುಷ್ಕಾ ಶರ್ಮಾ ಸದ್ಯ ಮನೆ ಮಗು ಅಂತ ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮಗು ಆದ ಬಳಿಕ ಅನುಷ್ಕಾ ಶರ್ಮಾ ಚಿತ್ರರಂಗದಿಂದ ಕೊಂಚ ಗ್ಯಾಪ್‌ ತೆಗೆದುಕೊಂಡಿದ್ದಾರೆ. ಸದ್ಯ ಮಗುವಿನ ಆರೈಕೆಯಲ್ಲಿ ಬ್ಯೂಸಿ ಆಗಿದ್ದಾರೆ. ಆದರೆ ಈಗ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಚಿತ್ರ ರಂಗಕ್ಕೆ ಅನುಷ್ಕಾ ಶರ್ಮಾ ಮತ್ತೆ ವಾಪಸ್‌ ಆಗ್ತಿದ್ದಾರೆ.

ಅನುಷ್ಕಾ ಶರ್ಮಾ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದಾಕೆ. ಕೆಲವೇ ಚಿತ್ರಗಳ ಬಳಿಕ ಬಾಲಿವುಡ್‌ನ ಸ್ಟಾರ್‌ ನಟಿ ಆಗಿ ಅನುಷ್ಕಾ ಹೊರ ಹೊಮ್ಮಿದ್ದಾರೆ. ಅನುಷ್ಕಾ ಶರ್ಮಾ ಲೀಲಾಜಾಲದ ಅಭಿನಯಕ್ಕೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಆದರೆ ವಿರಾಟ್‌ ಜೊತೆಗೆ ಮದುವೆ ಆದ ಬಳಿಕ ಅನುಷ್ಕಾ ನಟನೆಯಿಂದ ಬ್ರೇಕ್‌ ತೆಗೆದು ಕೊಂಡಿದ್ದರು.

ಆದರೆ ಇನ್ನು ಹೆಚ್ಚು ಕಾಲ ಅನುಷ್ಕಾ ಶರ್ಮಾ ಅವರನ್ನು ಮಿಸ್‌ ಮಾಡಿಕೊಳ್ಳ ಬೇಕಾಗಿಲ್ಲ. ಯಾಕೆಂದರೆ, ಅನುಷ್ಕಾ ಶರ್ಮಾ ಮತ್ತೆ ನಟನೆಗೆ ಕಮ್‌ ಬ್ಯಾಕ್‌ ಮಾಡಲು ತಯಾರಿ ನಡೆಸಿದ್ದಾರೆ. ತೆರೆ ಮರೆಯಲ್ಲಿ ಬಣ್ಣ ಹಚ್ಚಲು ಸಜ್ಜಾಗುತ್ತಿದ್ದಾರಂತೆ ಅನುಷ್ಕಾ ಶರ್ಮಾ.

3 ವರ್ಷದ ಬಳಿಕ ಅನುಷ್ಕಾ ಬಣ್ಣ ಹಚ್ಚುತ್ತಿರುವ ಅನುಷ್ಕಾ ಶರ್ಮಾ!

3 ವರ್ಷದ ಬಳಿಕ ಅನುಷ್ಕಾ ಬಣ್ಣ ಹಚ್ಚುತ್ತಿರುವ ಅನುಷ್ಕಾ ಶರ್ಮಾ!

ನಟಿ ಅನುಷ್ಕಾ ಶರ್ಮಾ 2017ರಲ್ಲಿ ವಿರಾಟ್‌ ಕೋಹ್ಲಿ ಅವರನ್ನು ಮದುವೆ ಆದರು. ಬಳಿಕ ಒಂದು ಚಿತ್ರದಲ್ಲಿ ಮಾತ್ರ ಅಭಿನಯಿಸಿದ್ದಾರೆ. ಶಾರುಖ್ ಖಾನ್ ಮತ್ತು ಕತ್ರೀನಾ ಕೈಫ್ ಜೊತೆಗೆ 'ಜೀರೋ' ಚಿತ್ರದಲ್ಲಿ ಕೊನೆಯದಾಗಿ ಅಭಿನಯಿಸಿದ್ದಾರೆ. ಬಳಿಕ ಅನುಷ್ಕಾ ಮತ್ಯಾವ ಚಿತ್ರದಲ್ಲೂ ಕಾಣಿಸಿಕೊಂಡಿಲ್ಲ. ಇನ್ನು ಮಗು ಆದ ಬಳಿಕ ಅನುಷ್ಕಾ ಮತ್ತೆ ಚಿತ್ರರಂಗಕ್ಕೆ ಬರುವುದಿಲ್ಲ. ಮಗುವಿನ ಹಾರೈಕೆಯಲ್ಲೇ ಇದ್ದು ಬಿಡುತ್ತಾರೆ ಎನ್ನಲಾಗಿತ್ತು. ಆದರೆ ಮೂರು ವರ್ಷಗಳ ಬಳಿಕ ಅನುಷ್ಕಾ ಮತ್ತೆ ಬಣ್ಣ ಹಚ್ಚಲು, ಚಿತ್ರಗಳಲ್ಲಿ ನಟಿಸಲು ತಯಾರಿ ನಡೆಸಿದ್ದಾರೆ ಎನ್ನುವ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ.

3 ದೊಡ್ಡ ಚಿತ್ರಗಳೊಂದಿಗೆ ಅನುಷ್ಕಾ ಶರ್ಮಾ ಕಮ್‌ ಬ್ಯಾಕ್!

3 ದೊಡ್ಡ ಚಿತ್ರಗಳೊಂದಿಗೆ ಅನುಷ್ಕಾ ಶರ್ಮಾ ಕಮ್‌ ಬ್ಯಾಕ್!

ಇನ್ನು ಈ ವಿಚಾರ ಗಾಳಿ ಸುದ್ದಿ ಆಗಿ ಮಾತ್ರ ಉಳಿದಿಲ್ಲ. ಯಾಕೆಂದರೆ ಅನುಷ್ಕಾ ಶರ್ಮಾ ಈಗಾಗಲೇ ಮೂರು ಚಿತ್ರಗಳಿಗೆ ಸಹಿ ಹಾಕಿದ್ದಾರೆ ಎನ್ನುವ ಉದ್ದಿ ಕೂಡ ಹೊರ ಬಿದ್ದಿದೆ. ಮೂರು ಚಿತ್ರಗಳ ಕಥೆ ಕೇಳಿ ಅಭಿನಯಿಸಲು ಅನುಷ್ಕಾ ಶರ್ಮಾ ಒಪ್ಪಿಕೊಂಡಿದ್ದಾರಂತೆ. ಅದರಲ್ಲಿ ಎರಡು ಚಿತ್ರಗಳು ನೇರವಾಗಿ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತವೆ ಅಂತೆ. ಇನ್ನು ಒಂದು ಚಿತ್ರ ಓಟಿಟಿಯಲ್ಲಿ ತೆರೆ ಕಾಣಲಿದೆಯಂತೆ.

2022ರಲ್ಲಿ ಅನುಷ್ಕಾ ಹೊಸ ಚಿತ್ರಗಳು ಪ್ರಕಟ!

2022ರಲ್ಲಿ ಅನುಷ್ಕಾ ಹೊಸ ಚಿತ್ರಗಳು ಪ್ರಕಟ!

ಸದ್ಯಕ್ಕೆ ತಮ್ಮ ಮುಂದಿನ ಚಿತ್ರಗಳ ಬಗ್ಗೆ ಮಾಹಿತಿಯನ್ನು ಅನುಷ್ಕಾ ಹಂಚಿಕೊಂಡಿಲ್ಲ. ಯಾಕೆಂದರೆ 2022ರಲ್ಲಿ ಸೂಕ್ತ ಸಮಯ ನೋಡಿ ಚಿತ್ರವನ್ನು ಪ್ರಕಟಿಸುವ ಯೋಜನೆಯಲ್ಲಿ ಇದ್ದಾರಂತೆ. ಆದರೆ ಈ ಮೂರೂ ಚಿತ್ರಗಳು ಕೂಡ ಬಿಗ್‌ ಬಜೆಟ್‌ ಚಿತ್ರಗಳು. ಹಾಗಾಗಿ ಅನುಷ್ಕಾ ಶರ್ಮಾಗೆ ಮೊದಲಿನಂತೆಯೇ ಈಗಲೂ ಬೇಡಿಕೆ ಇದೆ. ಒಟ್ಟಾರೆ ದೊಡ್ಡ ಪ್ರಾಜೆಕ್ಟ್ ಮೂಲಕ ಅನುಷ್ಕಾ ಶರ್ಮಾ ಕಮ್‌ ಬ್ಯಾಕ್‌ ಮಾಡುತ್ತಾರೆ.

ಗಳಿಕೆಯಲ್ಲಿ 300 ಕೋಟಿ ದಾಟಿದ ನಟಿ ಅನುಷ್ಕಾ ಶರ್ಮಾ!

ಗಳಿಕೆಯಲ್ಲಿ 300 ಕೋಟಿ ದಾಟಿದ ನಟಿ ಅನುಷ್ಕಾ ಶರ್ಮಾ!

ಅನುಷ್ಕಾ ಶರ್ಮಾ ಬಾಲಿವುಡ್‌ ನಟಿಯರಿಗೆ ಬಿಗ್‌ ಫೈಟ್‌ ಕೊಟ್ಟಿದ್ದಾರೆ. ಅಂದರೆ ಬಾಲಿವುಡ್‌ ನಟಿಯರ ಪೈಕಿ ಅತಿ ಹೆಚ್ಚು ಗಳಿಕೆ ಮಾಡಿರುವು ಅನುಷ್ಕಾ ಶರ್ಮಾ ಅಭಿನಯದ ಚಿತ್ರಗಳು. 300 ಕೋಟಿಗೂ ಮೀರಿದ ಗಳಿಕೆಯನ್ನು ಅನುಷ್ಕಾ ಚಿತ್ರಗಳು ಮಾಡಿವೆ. ಈ ಸಾಲಿನಲ್ಲಿ 'ಪಿ.ಕೆ', 'ಸುಲ್ತಾನ್', 'ಸಂಜು' ಚಿತ್ರಗಳು ಇವೆ. 2008ರಲ್ಲಿ ಶಾರುಕ್‌ ಖಾನ್‌ ಜೊತೆಗೆ 'ರಬ್‌ ನೇ ಬನಾದಿ ಜೋಡಿ' ಚಿತ್ರದಲ್ಲಿ ಅಭಿನಯಿಸುವ ಮೂಲಕ ಅನುಷ್ಕಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈಗ ಮತ್ತೆ ಅನುಷ್ಕಾ ಶರ್ಮಾ ಕಮ್‌ ಬ್ಯಾಕ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

More from Filmibeat

English summary
Anushka Sharma To Make A Comeback To Films With 3 Big Projects
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X