ವಿರಾಟ್ ವೆಡ್ಸ್ ಅನುಷ್ಕಾ : ವೈಯಕ್ತಿಕ ಜೀವನದ ಹೊಸ ಇನ್ನಿಂಗ್ಸ್ ಶುರು ಮಾಡಿದ ಕೊಹ್ಲಿ
Recommended Video

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಇಟಲಿಯ ಮಿಲನ್ ನಗರದಲ್ಲಿ ನಿನ್ನೆ (ಸೋಮವಾರ) ಈ ಜೋಡಿಯ ವಿವಾಹ ನಡೆದಿದೆ.
ಕೊಹ್ಲಿ ಮತ್ತು ಅನುಷ್ಕಾ ಮದುವೆಯಲ್ಲಿ ಇಬ್ಬರ ಕುಟುಂಬ ಸದಸ್ಯರು, ಕೆಲವೇ ಕೆಲವು ಸ್ನೇಹಿತರು ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರಂತೆ. ಇಟಲಿಯ ಮಿಲಾನ್‌ನ ಸಾಂಪ್ರದಾಯಿಕ ನಗರಿ ಟಸ್ಕಾನ್ ಬಳಿಯಿರುವ ಬೊರ್ಗೊ ಫಿನೊಕಿಯೊಟೊ ಎಂಬ ರೆಸಾರ್ಟ್‌ನಲ್ಲಿ ಸೋಮವಾರ ಇಬ್ಬರ ಮದುವೆ ನಡೆದಿದೆ ಎಂದು ವರದಿಯಾಗಿದೆ. ಇನ್ನು ಪಂಜಾಬ್ ಸಂಪ್ರದಾಯದಂತೆ ವಿವಾಹ ಕಾರ್ಯಗಳು ನೆರವೇರಿದೆ.

ಅಂದಹಾಗೆ, ತಮ್ಮ ವಿವಾಹದ ಫೋಟೋವನ್ನು ಕೊಹ್ಲಿ ಮತ್ತು ಅನುಷ್ಕಾ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಮದುವೆಯ ಬಗ್ಗೆ ಬಹಳಷ್ಟು ಕನಸು ಇಟ್ಟುಕೊಂಡಿದ್ದ ಅನುಷ್ಕಾ ಆಸೆಯಂತೆಯೇ ಅವರ ವಿವಾಹ ನಡೆದಿದೆ. ಇನ್ನು ಡಿಸೆಂಬರ್ 21ರಂದು ಮುಂಬೈನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್ ಹಾಗೂ ಕ್ರಿಕೆಟ್ ಸೆಲೆಬ್ರಿಟಿಗಳು ಸೇರಿದಂತೆ ಅನೇಕ ಗಣ್ಯತಿಗಣ್ಯರು ಭಾಗಿಯಾಗಲಿದ್ದಾರೆ.
2013ರಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮೊದಲು ಪರಸ್ಪರ ಬೇಟಿಯಾಗಿದ್ದರು. ಜಾಹೀರಾತು ಚಿತ್ರೀಕರಣದ ವೇಳೆ ಪರಿಚಯವಾಗಿದ್ದ ಇಬ್ಬರೂ, ಅಲ್ಲಿಂದ ಸ್ನೇಹಿತರಾಗಿ ನಂತರ ಅದು ಪ್ರೇಮಕ್ಕೆ ತಿರುಗಿತ್ತು. ಈಗ ಈ ಲವ್ ಬರ್ಡ್ ಮದುವೆ ಆಗಿ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ.


Click it and Unblock the Notifications











