For Quick Alerts
  ALLOW NOTIFICATIONS  
  For Daily Alerts

  ಒಂದೇ ದಿನಕ್ಕೆ ಕೋಟ್ಯಂತರ ಹಣ ಸಂಗ್ರಹಿಸಿದ ವಿರುಷ್ಕಾ: ಟೀಕೆಯೂ ಕಡಿಮೆಯಿಲ್ಲ

  |

  ದಂಪತಿಗಳಾದ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರುಗಳು ಕೋವಿಡ್ ವಿರುದ್ಧ ಹೋರಾಟಕ್ಕೆ ನೆರವಾಗಲು ನಿಧಿ ಸಂಗ್ರಹ ಅಭಿಯಾನವನ್ನು ನಿನ್ನೆಯಷ್ಟೆ (ಮೇ 07) ಆರಂಭಿಸಿದ್ದರು. ವಿರುಷ್ಕಾ ಮನವಿಗೆ ಸ್ಪಂದಿಸಿ ಸಾಕಷ್ಟು ಮಂದಿ ಹಣಕಾಸಿನ ನೆರವು ನೀಡಿದ್ದಾರೆ.

  ಕೊರೊನಾ ವಿರುದ್ಧ ಹೋರಾಡಲು ನಿಧಿ ಸಂಗ್ರಹ ಅಭಿಯಾನಕ್ಕೆ ನಿನ್ನೆ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಚಾಲನೆ ನೀಡಿ ಇಬ್ಬರೂ ಸೇರಿ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಅಭಿಯಾನ ಪ್ರಾರಂಭವಾದ ನಂತರ 24 ಗಂಟೆಗಳ ಒಳಗೆ 3.60 ಕೋಟಿ ರೂಪಾಯಿಯನ್ನು ವಿರಾಟ್-ಅನುಷ್ಕಾ ಸಂಗ್ರಹಿಸಿದ್ದಾರೆ.

  ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟಿ ಅನುಷ್ಕಾ ಶರ್ಮಾ, ನಮ್ಮ ಗುರಿಯ ಅರ್ಧದಷ್ಟನ್ನು ನಾವು ಈಗಾಗಲೇ ಕ್ರಮಿಸಿದ್ದೇವೆ. ಇನ್ನಷ್ಟು ದಾನ ಮಾಡಿ ಕೋವಿಡ್ ವಿರುದ್ಧ ಹೋರಾಡಲು ನೆರವಾಗಿ ಎಂದಿದ್ದಾರೆ.

  ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪ್ರಾರಂಭಿಸಿರುವ ಈ ಅಭಿಯಾನಕ್ಕೆ ಅಭಿನಂದನೆಗಳ ಜೊತೆಗೆ ಟೀಕೆಗಳೂ ಸಹ ವ್ಯಕ್ತವಾಗಿದೆ.

  ವಿರಾಟ್ ಕೊಹ್ಲಿಯ ಒಟ್ಟು ಮೌಲ್ಯ 633 ಕೋಟಿಗೂ ಹೆಚ್ಚು. ಅನುಷ್ಕಾ ಶರ್ಮಾ ಒಟ್ಟು ಮೌಲ್ಯ 264 ಕೋಟಿ ಇಬ್ಬರದ್ದೂ ಒಟ್ಟು ಸೇರಿ ಸುಮಾರು 900 ಕೋಟಿ ಆಗುತ್ತದೆ. ಅವರು ಎರಡು ಕೋಟಿ ದಾನ ಮಾಡಿದ್ದಾರೆ, ಅಲ್ಲಿಗೆ ಅವರ ಒಟ್ಟು ಆಸ್ತಿಯ ಶೇ 1 ರಷ್ಟು ಸಹ ಅವರು ದಾನ ಮಾಡಿಲ್ಲ. ಆದರೆ ಜನರಿಗೆ ದಾನ ಮಾಡಲು ಹೇಳುತ್ತಿದ್ದಾರೆ ಎಂಬ ಟೀಕೆಯನ್ನು ಹಲವರು ಮಾಡಿದ್ದಾರೆ.

  ಬಾಲಿವುಡ್ ನಟರಾದ ಸೋನು ಸೂದ್, ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ಸಲ್ಮಾನ್ ಖಾನ್, ಅಜಯ್ ದೇವಗನ್, ಜಾನ್ ಅಬ್ರಹಾಂ ಇನ್ನೂ ಹಲವಾರು ಮಂದಿ ಕೋವಿಡ್ ವಿರುದ್ಧ ಹೋರಾಟಕ್ಕೆ ನೆರವು ನೀಡುತ್ತಿದ್ದಾರೆ.

  ಕೊರೊನಾ‌ ಕಷ್ಟಕ್ಕೆ ಮಿಡಿದ‌ ವಿರೂಷ್ಕಾ ದಂಪತಿ ಏನ್ ಮಾಡೋಕೆ ಹೊರ್ಟಿದ್ದಾರೆ‌? | Filmibeat Kannada

  ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಅನಿಲ್ ಕಪೂರ್, ಕೃತಿ ಸೆನನ್, ಕರಣ್ ಜೋಹರ್, ಸಮಂತಾ ಅಕ್ಕಿನೇನಿ, ರಾಣಾ ದಗ್ಗುಬಾಟಿ, ಕ್ರಿಕೆಟಿಗರಾದ ಶಿಖರ್ ಧವನ್, ರಿಷಬ್ ಪಂತ್, ರವಿಚಂದ್ರನ್ ಅಶ್ವಿನ್ ಅವರುಗಳು ಒಟ್ಟು ಸೇರಿ ಆನ್‌ಲೈನ್ ಮೂಲಕ ನಿಧಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ನಾಳೆ ಇವರುಗಳ ಆನ್‌ಲೈನ್ ನಿಧಿ ಸಂಗ್ರಹ ಕಾರ್ಯಕ್ರಮ ನಡೆಯಲಿದೆ.

  English summary
  Actress Anushka Sharma and Virat Kohli collects 3.60 crore rs in less than 24 hours. They collecting donation to help fight against COVID 19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X