For Quick Alerts
  ALLOW NOTIFICATIONS  
  For Daily Alerts

  ಮಗುವಿಗೆ ಜನ್ಮ ನೀಡಿದ ನಂತರ ಮತ್ತೆ ಆಕ್ಟಿಂಗ್ ಶುರು ಮಾಡ್ತೇನೆ: ಅನುಷ್ಕಾ ಶರ್ಮಾ

  |

  ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಚೊಚ್ಚಲ ಮಗುವಿನ ಜನ್ಮ ನೀಡುತ್ತಿದ್ದಾರೆ ಎಂಬ ಸುದ್ದಿ ಪ್ರಕಟ ಮಾಡಿದ ಕ್ಷಣದಿಂದ ತಮ್ಮ ಅಭಿಮಾನಿಗಳು ಅನುಷ್ಕಾ ಮಗುವನ್ನು ನೋಡಲು ಕಾಯುತ್ತಿದ್ದಾರೆ.

  2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ವಿವಾಹವಾದ ಅನುಷ್ಕಾ ಜನವರಿ 2021ರಲ್ಲಿ ಚೊಚ್ಚಲ ಮಗುವನ್ನು ಸ್ವಾಗತ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಮಗು ಆದ್ಮೇಲೆ ಅನುಷ್ಕಾ ನಟನೆ ಮುಂದುವರಿಸ್ತಾರಾ ಎಂಬ ಕುತೂಹಲಕ್ಕೆ ನಟಿ ಸ್ಪಷ್ಟನೆ ನೀಡಿದ್ದಾರೆ.

  ಬಾಂಬೆ ಟಾಕೀಸ್ ಜೊತೆ ಈ ಕುರಿತು ಮಾತನಾಡಿರುವ ಅನುಷ್ಕಾ ಶರ್ಮಾ ಮಗುವಿಗೆ ಜನ್ಮ ನೀಡಿದ ನಂತರ ಮತ್ತೆ ಆಕ್ಟಿಂಗ್ ಶುರು ಮಾಡ್ತೇನೆ ಎಂದು ತಿಳಿಸಿದ್ದಾರೆ.

  ಶೂಟಿಂಗ್ ನಲ್ಲಿ ಭಾಗಿಯಾದ ತುಂಬು ಗರ್ಭಿಣಿ ಅನುಷ್ಕಾ ಶರ್ಮಾ

  ''ಮಗುವಿಗೆ ಜನ್ಮ ನೀಡಿದ ಬಳಿಕ ನಾನು ಮತ್ತೆ ನಟನೆ ಶುರು ಮಾಡಲಿದ್ದೇನೆ. ಅದಕ್ಕೆ ತಕ್ಕಂತೆ ಎಲ್ಲ ಪ್ಲಾನ್ ಮಾಡಿಕೊಂಡು ಮಗು ಮತ್ತು ಕೆಲವನ್ನು ನಿಭಾಯಿಸಲಿದ್ದೇನೆ. ಮನೆ ಮತ್ತು ವೃತ್ತಿ ಜೀವನವನ್ನು ನಿರ್ವಹಿಸಲು ಸಿದ್ಧವಿದ್ದೇನೆ. ನಟನೆ ನನಗೆ ಹೆಚ್ಚು ಖುಚಿ ನೀಡುತ್ತದೆ. ಸಾಧ್ಯವಾದಷ್ಟು ಕಾಲ ನಟಿಸುತ್ತೇನೆ'' ಎಂದು ಅನುಷ್ಕಾ ಮಾಹಿತಿ ನೀಡಿದ್ದಾರೆ.

  ಶಾರೂಖ್ ಖಾನ್ ನಟನೆಯ ಜೀರೋ ಚಿತ್ರದ ಬಳಿಕ ಅನುಷ್ಕಾ ಶರ್ಮಾ ಯಾವ ಚಿತ್ರವನ್ನು ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಒಂದು ವೆಬ್‌ ಸಿರೀಸ್ ನಿರ್ಮಿಸುತ್ತಿದ್ದಾರೆ. ಜೊತೆಗೆ ಬುಲ್ ಬುಲ್ ಎಂಬ ಸಿನಿಮಾ ಸಹ ನಿರ್ಮಾಣ ಮಾಡುತ್ತಿದ್ದಾರೆ.

  English summary
  'i will back to acting after delivery my child' said bollywood actress anushka sharma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X