ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ನಟಿ ಅನುಷ್ಕಾ ಶರ್ಮಾ ವಿಶ್ ಮಾಡಿದ್ದು ಹೀಗೆ

ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಖಾನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 55ನೇ ವಸಂತಕ್ಕೆ ಕಾಲಿಟ್ಟ ನಟ ಶಾರುಖ್ ಖಾನ್ ಈ ಬಾರಿಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.

ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರು ಸಹ ಪ್ರೀತಿಯ ಸಂದೇಶ ಕಳುಹಿಸುತ್ತಿದ್ದಾರೆ. ನಟಿ ಅನುಷ್ಕಾ ಶರ್ಮಾ, ಕರೀನಾ ಕಪೂರ್, ಮಾಧುರಿ ದೀಕ್ಷಿತ್, ರಿತೇಶ್ ದೇಶಮುಖ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಲೆಜೆಂಡರಿ ನಟನಿಗೆ ಶುಭಹಾರೈಸುತ್ತಿದ್ದಾರೆ.

ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಶಾರುಖ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ. 'ನಿಮ್ಮ ಬುದ್ಧಿ, ಚಾರ್ಮ್ ಮತ್ತು ಕ್ರಿಯಾಶೀಲತೆ ಮತ್ತು ಮುಕ್ತ ಹೃದಯ ಹೊಂದಿರುವ ಲೆಜೆಂಡರಿ ಹುಟ್ಟುಹಬ್ಬಕ್ಕೆ ಶುಭಾಶಯಗಳು 'ಎಂದು ಹೇಳಿದ್ದಾರೆ. ವಿಶ್ ಜೊತೆಗೆ ಶಾರುಖ್ ಜೊತೆಗಿನ ಹಳೆಯ ಫೋಟೋವನ್ನು ಹಂಚಿಕೊಂಡು ಹಳೆಯ ದಿನಗಳನ್ನು ಮೆಲಕು ಹಾಕಿದ್ದಾರೆ.

 Anushka Sharma Wishes To Shahrukh Khan Nn His 55th Birthday

ಜಬ್ ಹ್ಯಾರಿ ಮೆಟ್ ಸಿನಿಮಾದ ಪ್ರಮೋಷನ್ ಸಮಯದ ಫೋಟೋವನ್ನು ಅನುಷ್ಕಾ ಶೇರ್ ಮಾಡಿದ್ದಾರೆ. ಅಂದ್ಹಾಗೆ ಅನುಷ್ಕಾ ಮತ್ತು ಶಾರುಖ್ ಇಬ್ಬರು ನಾಲ್ಕು ಸಿನಿಮಾಗಲ್ಲಿ ಒಟ್ಟಿಗೆ ನಟಿಸಿದ್ದಾರೆ. ರಬ್ ನೇ ಬನಾದಿ ಜೋಡಿ, ಜಬ್ ಹ್ಯಾರಿ ಮೆಟ್, ಜಬ್ ತಕ್ ಹೇ ಜಾನ್ ಮತ್ತು ಝೀರೋ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಅನುಷ್ಕಾ ಸದ್ಯ ಐಪಿಎಲ್ ಕಾರಣ ಪತಿ ವಿರಾಟ್ ಕೊಹ್ಲಿ ಜೊತೆ ದುಬೈನಲ್ಲಿದ್ದಾರೆ. ಇನ್ನೂ ಶಾರುಖ್ ಖಾನ್ ಸಹ ಕುಟುಂಬದ ಜೊತೆ ದುಬೈನಲ್ಲಿ ಬೀಡುಬಿಟ್ಟಿದ್ದಾರೆ. ಶಾರುಖ್ ಈ ಬಾರಿ ಸರಳವಾಗಿ ದುಬೈನಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಅವರ ಅಭಿಮಾನಿಗಳು ವಿಡಿಯೋ ಕಾಲ್ ಮೂಲಕ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಲು ಸಜ್ಜಾಗಿದ್ದಾರೆ.

Recommended Video

ACT 1978 : 60 ಲಕ್ಷದ ಸೆಟ್ ಹಾಕಿದ್ದು ನೋಡಿ ಪುನೀತ್ ರಾಜ್ ಕುಮಾರ್ ಖುಷಿ ಪಟ್ಟಿದ್ರು | Sanchari Vijay | Puneeth

More from Filmibeat

English summary
Bollywood Actor Shahrukh Khan celebrating 55th birthday. Anushka Sharma wishes to Shahrukh Khan on his 55th birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X