Just In
Don't Miss!
- News
ಕೊರೊನಾ ಅಂತ್ಯ ಕಾಲ ತುಂಬಾ ದೂರವಿದೆ ಎಂದ ವಿಶ್ವ ಆರೋಗ್ಯ ಸಂಸ್ಥೆ
- Finance
2021 ಸ್ಕೋಡಾ ಕೊಡಿಯಾಕ್ ಅಧಿಕೃತವಾಗಿ ಬಿಡುಗಡೆ: ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ
- Automobiles
ಹೀರೋ ಕನೆಕ್ಟ್ ಫೀಚರ್ ಪಡೆದುಕೊಂಡ ಡೆಸ್ಟಿನಿ 125 ಸ್ಕೂಟರ್
- Sports
ಐಪಿಎಲ್: ಕೋಲ್ಕತ್ತಾ vs ಮುಂಬೈ, ಪ್ಲೇಯಿಂಗ್ XI, Live ಅಪ್ಡೇಟ್ಸ್
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನುಷ್ಕಾ 'ಪರಿ' ಚಿತ್ರಕ್ಕೆ ಪಾಕಿಸ್ತಾನದಲ್ಲಿ ನಿಷೇಧ: ಕಾರಣವೇನು.?
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅಭಿನಯದ 'ಪರಿ' ಚಿತ್ರ ಕಳೆದ ಶುಕ್ರವಾರವಷ್ಟೇ (ಮಾರ್ಚ್ 2) ತೆರೆಕಂಡಿದ್ದ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದ್ರೆ, ಈ ಚಿತ್ರವನ್ನ ಪಾಕಿಸ್ತಾನದಲ್ಲಿ ಬಿಡುಗಡೆಗೊಳಿಸಲು ಸೆನ್ಸಾರ್ ಮಂಡಳಿ ಅನುಮತಿ ನೀಡಲಿಲ್ಲ ಎಂದು ತಿಳಿದು ಬಂದಿದೆ.
''ಈ ಚಿತ್ರ ಮುಸ್ಲಿಮರ ಭಾವನೆಗಳಿಗೆ ವಿರುದ್ಧವಾಗಿದ್ದು, ಚಿತ್ರದಲ್ಲಿ ಅನುಷ್ಕಾ ಶರ್ಮಾ ವಾಮಾಚಾರ, ಮಾಟ ಮಂತ್ರ, ಮೌಢ್ಯವನ್ನು ಪ್ರಚಾರ ಮಾಡಿದಂತಿದೆ. ಅಷ್ಟೇ ಅಲ್ಲದೆ ಖುರಾನ್‌ನಲ್ಲಿ ಪದ್ಯಗಳನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಿ ಪಾಕಿಸ್ತಾನದಲ್ಲಿ 'ಪರಿ' ಚಿತ್ರದ ಮೇಲೆ ನಿಷೇಧ ವಿಧಿಸಿದ್ದಾರೆ'' ಎನ್ನಲಾಗಿದೆ.
ಪತ್ನಿ ಅನುಷ್ಕಾ ಅವರ 'ಪರಿ' ಸಿನಿಮಾ ನೋಡಿದ ವಿರಾಟ್ ಕೊಹ್ಲಿ
ಇನ್ನು ಈ ಮೊದಲೇ ಪಾಕ್ ಮಲ್ಟಿಫ್ಲೆಕ್ಸ್ ಗಳಲ್ಲಿ ಪರಿ ಚಿತ್ರದ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಅದನ್ನ ಪ್ರೇಕ್ಷಕರಿಗೆ ವಾಪಸ್ ನೀಡಲಾಗಿದೆಯಂತೆ.
ಪಾಕ್ ಚಿತ್ರಗಳ ವಿತರಕರ ಸಂಘಟನೆ ಮುಖ್ಯಸ್ಥ ಚೌದರಿ ಎಜಾಜ್ ಕಮ್ರಾನ್ ಮಾತನಾಡುತ್ತಾ, ಇಸ್ಲಾಂ ಇತಿಹಾಸ, ಸಂಸ್ಕೃತಿಗೆ ವಿರುದ್ಧವಾಗಿರುವ ಯಾವುದೆ ಚಿತ್ರವನ್ನು ಪಾಕ್ ನಲ್ಲಿ ನಿಷೇಧಿಸಬೇಕಾದದ್ದೇ ಎಂದು ಸಮರ್ಥಿಸಿಕೊಂಡಿದ್ದಾರೆ.
ಪ್ರೋಸಿಟ್ ರಾಯ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸ್ವತಃ ಅನುಷ್ಕಾ ಶರ್ಮಾ ಕೂಡ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇದೊಂದು ಹಾರರ್ ಸಿನಿಮವಾಗಿದ್ದು, ಪ್ರೇಕ್ಷಕರನ್ನ ಭಯ ಪಡಿಸುತ್ತಿದೆ.
ಅನುಷ್ಕಾ ಹೊಸ ಚಿತ್ರದ ಟ್ರೈಲರ್ ಗೆ ವಿರಾಟ್ ಮಾಡಿದ ಕಾಮೆಂಟ್ ಏನು?
ಮದುವೆ ನಂತರ ಭಯ ಹುಟ್ಟಿಸೋಕೆ ಬಂದ ಅನುಷ್ಕಾ ಶರ್ಮಾ