twitter
    For Quick Alerts
    ALLOW NOTIFICATIONS  
    For Daily Alerts

    ಅನುಷ್ಕಾ 'ಪರಿ' ಚಿತ್ರಕ್ಕೆ ಪಾಕಿಸ್ತಾನದಲ್ಲಿ ನಿ‍ಷೇಧ: ಕಾರಣವೇನು.?

    By Bharath Kumar
    |

    ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅಭಿನಯದ 'ಪರಿ' ಚಿತ್ರ ಕಳೆದ ಶುಕ್ರವಾರವಷ್ಟೇ (ಮಾರ್ಚ್ 2) ತೆರೆಕಂಡಿದ್ದ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದ್ರೆ, ಈ ಚಿತ್ರವನ್ನ ಪಾಕಿಸ್ತಾನದಲ್ಲಿ ಬಿಡುಗಡೆಗೊಳಿಸಲು ಸೆನ್ಸಾರ್ ಮಂಡಳಿ ಅನುಮತಿ ನೀಡಲಿಲ್ಲ ಎಂದು ತಿಳಿದು ಬಂದಿದೆ.

    ''ಈ ಚಿತ್ರ ಮುಸ್ಲಿಮರ ಭಾವನೆಗಳಿಗೆ ವಿರುದ್ಧವಾಗಿದ್ದು, ಚಿತ್ರದಲ್ಲಿ ಅನುಷ್ಕಾ ಶರ್ಮಾ ವಾಮಾಚಾರ, ಮಾಟ ಮಂತ್ರ, ಮೌಢ್ಯವನ್ನು ಪ್ರಚಾರ ಮಾಡಿದಂತಿದೆ. ಅಷ್ಟೇ ಅಲ್ಲದೆ ಖುರಾನ್‌ನಲ್ಲಿ ಪದ್ಯಗಳನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಿ ಪಾಕಿಸ್ತಾನದಲ್ಲಿ 'ಪರಿ' ಚಿತ್ರದ ಮೇಲೆ ನಿಷೇಧ ವಿಧಿಸಿದ್ದಾರೆ'' ಎನ್ನಲಾಗಿದೆ.

    ಪತ್ನಿ ಅನುಷ್ಕಾ ಅವರ 'ಪರಿ' ಸಿನಿಮಾ ನೋಡಿದ ವಿರಾಟ್ ಕೊಹ್ಲಿಪತ್ನಿ ಅನುಷ್ಕಾ ಅವರ 'ಪರಿ' ಸಿನಿಮಾ ನೋಡಿದ ವಿರಾಟ್ ಕೊಹ್ಲಿ

    ಇನ್ನು ಈ ಮೊದಲೇ ಪಾಕ್ ಮಲ್ಟಿಫ್ಲೆಕ್ಸ್ ಗಳಲ್ಲಿ ಪರಿ ಚಿತ್ರದ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಅದನ್ನ ಪ್ರೇಕ್ಷಕರಿಗೆ ವಾಪಸ್ ನೀಡಲಾಗಿದೆಯಂತೆ.

    Anushka Sharmas Pari banned in Pakistan

    ಪಾಕ್ ಚಿತ್ರಗಳ ವಿತರಕರ ಸಂಘಟನೆ ಮುಖ್ಯಸ್ಥ ಚೌದರಿ ಎಜಾಜ್ ಕಮ್ರಾನ್ ಮಾತನಾಡುತ್ತಾ, ಇಸ್ಲಾಂ ಇತಿಹಾಸ, ಸಂಸ್ಕೃತಿಗೆ ವಿರುದ್ಧವಾಗಿರುವ ಯಾವುದೆ ಚಿತ್ರವನ್ನು ಪಾಕ್‌ ನಲ್ಲಿ ನಿಷೇಧಿಸಬೇಕಾದದ್ದೇ ಎಂದು ಸಮರ್ಥಿಸಿಕೊಂಡಿದ್ದಾರೆ.

    Anushka Sharmas Pari banned in Pakistan

    ಪ್ರೋಸಿಟ್ ರಾಯ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸ್ವತಃ ಅನುಷ್ಕಾ ಶರ್ಮಾ ಕೂಡ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇದೊಂದು ಹಾರರ್ ಸಿನಿಮವಾಗಿದ್ದು, ಪ್ರೇಕ್ಷಕರನ್ನ ಭಯ ಪಡಿಸುತ್ತಿದೆ.

    ಅನುಷ್ಕಾ ಹೊಸ ಚಿತ್ರದ ಟ್ರೈಲರ್ ಗೆ ವಿರಾಟ್ ಮಾಡಿದ ಕಾಮೆಂಟ್ ಏನು?ಅನುಷ್ಕಾ ಹೊಸ ಚಿತ್ರದ ಟ್ರೈಲರ್ ಗೆ ವಿರಾಟ್ ಮಾಡಿದ ಕಾಮೆಂಟ್ ಏನು?

    ಮದುವೆ ನಂತರ ಭಯ ಹುಟ್ಟಿಸೋಕೆ ಬಂದ ಅನುಷ್ಕಾ ಶರ್ಮಾಮದುವೆ ನಂತರ ಭಯ ಹುಟ್ಟಿಸೋಕೆ ಬಂದ ಅನುಷ್ಕಾ ಶರ್ಮಾ

    English summary
    Anushka Sharma’s horror film Pari, which was released in India on Friday (march 2), has been banned in Pakistan, according to a report in Dawn.
    Sunday, March 4, 2018, 11:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X