For Quick Alerts
  ALLOW NOTIFICATIONS  
  For Daily Alerts

  ಭೂಮಿ ಪಡ್ನೆಕರ್ 'ದುರ್ಗಮತಿ' ಮೇಲೆ ಅನುಷ್ಕಾ ಅಭಿಮಾನಿಗಳು ಅಸಮಾಧಾನ

  |

  ಬಾಲಿವುಡ್ ನಟಿ ಭೂಮಿ ಪಡ್ನೆಕರ್ ಅಭಿನಯದ 'ದುರ್ಗಮತಿ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ನೋಡಿ ಹಿಂದಿ ಆಡಿಯೆನ್ಸ್ ಥ್ರಿಲ್ ಆಗಿದ್ದರೂ ಅನುಷ್ಕಾ ಶೆಟ್ಟಿ ಅಭಿಮಾನಿಗಳು ಮಾತ್ರ ದುರ್ಗಮತಿ ವಿರುದ್ಧ ಅಸಮಾಧಾನಗೊಂಡಿದ್ದಾರೆ.

  ಅಶೋಕ್ ನಿರ್ದೇಶನದ ಈ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ತೆರೆಕಾಣಲಿದ್ದು, ಸಿನಿಮಾ ಕುರಿತು ನಿರೀಕ್ಷೆ ಹೆಚ್ಚಿದೆ. ಭೂಮಿ ಪಡ್ನೆಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅರ್ಷದ್ ವಾರ್ಸಿ, ಜಿಶು ಸೇನಗುಪ್ತಾ, ಮಹೀ ಗಿಲ್, ಕರಣ್ ಕಪಾಡಿಯಾ ಸೇರಿದಂತೆ ಹಲವರು ನಟಿಸಿದ್ದಾರೆ.

  ಸೆನ್ಸೇಷನ್ ಸ್ಟಾರ್ ಜೊತೆ ನಟಿ ಅನುಷ್ಕಾ ಶೆಟ್ಟಿ ಸಿನಿಮಾ: ಇಲ್ಲಿದೆ ಮಾಹಿತಿಸೆನ್ಸೇಷನ್ ಸ್ಟಾರ್ ಜೊತೆ ನಟಿ ಅನುಷ್ಕಾ ಶೆಟ್ಟಿ ಸಿನಿಮಾ: ಇಲ್ಲಿದೆ ಮಾಹಿತಿ

  ಅಂದ್ಹಾಗೆ, ದುರ್ಗಮತಿ ಸಿನಿಮಾ ಅನುಷ್ಕಾ ಶೆಟ್ಟಿ ಅಭಿನಯಿಸಿದ್ದ ಭಾಗಮತಿ ಚಿತ್ರದ ರೀಮೇಕ್. ತೆಲುಗಿನಲ್ಲಿ ಅನುಷ್ಕಾ ನಿರ್ವಹಿಸಿದ್ದ ಪಾತ್ರದಲ್ಲಿ ಭೂಮಿ ಪಡ್ನೆಕರ್ ಕಾಣಿಸಿಕೊಂಡಿದ್ದಾರೆ. ಆದ್ರೆ, ಅನುಷ್ಕಾ ಶೆಟ್ಟಿಯಂತೆ ಭೂಮಿ ಪರ್ಫಾಮೆನ್ಸ್ ಬಂದಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಮುಂದೆ ಓದಿ...

  ಡೈಲಾಗ್ ಸಹ ಸರಿಯಾಗಿಲ್ಲ

  ಡೈಲಾಗ್ ಸಹ ಸರಿಯಾಗಿಲ್ಲ

  ''ತೆಲುಗಿನಿಂದ ಈ ಚಿತ್ರವನ್ನು ಕಾಪಿ ಮಾಡಲಾಗಿದೆ. ಆದ್ರೆ, ಅನುಷ್ಕಾ ಶೆಟ್ಟಿಯಂತೆ ಇವರು ನಟಿಸಲು ಸಾಧ್ಯವಾಗಿಲ್ಲ. ಕನಿಷ್ಠ ಪಕ್ಷ ''ನಾನು ದುರ್ಗಮತಿ'' ಎಂಬ ಡೈಲಾಗ್‌ನಲ್ಲೂ ಅನುಷ್ಕಾ ಶೆಟ್ಟಿಯಂತೆ ಪವರ್ ಇಲ್ಲ'' ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

  ಕಾಪಿ ಮಾಡುವುದು ಬಿಡಬೇಕು

  ಕಾಪಿ ಮಾಡುವುದು ಬಿಡಬೇಕು

  ''ಭೂಮಿ ಪೆಡ್ನೇಕರ್ ಅತ್ಯುತ್ತಮ ನಟಿ ಆಗಿರಬಹುದು. ಆದರೆ, ಅನುಷ್ಕಾ ಶೆಟ್ಟಿ ಭಾಗಮತಿಯಲ್ಲಿ ಮಾಡಿದ್ದನ್ನು ಪುನರಾವರ್ತಿಸುವುದು ಒಂದು ದೊಡ್ಡ ಸವಾಲು ಮತ್ತು ಅದು ಅಸಾಧ್ಯ. ಸೌತ್ ಇಂಡಸ್ಟ್ರಿಯಿಂದ ಸಿನಿಮಾಗಳನ್ನು ಕಾಪಿ ಮಾಡುವ ಬದಲು ಹೊಸದಾಗು ಏನಾದರೂ ಹುಡುಕಬಹುದು'' ಎಂದು ವ್ಯಂಗ್ಯ ಮಾಡಿದ್ದಾರೆ.

  ಅನುಷ್ಕಾ ಶೆಟ್ಟಿ ಅಲ್ಲ, 'ಶಕುಂತಲಂ' ಸಿನಿಮಾದಲ್ಲಿ ನಟಿಸಲಿದ್ದಾರೆ ಈ ಸ್ಟಾರ್ ನಟಿಅನುಷ್ಕಾ ಶೆಟ್ಟಿ ಅಲ್ಲ, 'ಶಕುಂತಲಂ' ಸಿನಿಮಾದಲ್ಲಿ ನಟಿಸಲಿದ್ದಾರೆ ಈ ಸ್ಟಾರ್ ನಟಿ

  ಅನುಷ್ಕಾ ಶೆಟ್ಟಿಯಂತೆ ನಟಿಸಲು ಅಸಾಧ್ಯ

  ಅನುಷ್ಕಾ ಶೆಟ್ಟಿಯಂತೆ ನಟಿಸಲು ಅಸಾಧ್ಯ

  ''ಭಾಗಮತಿಯ ಹಿಂದಿ ರೀಮೇಕ್ ದುರ್ಗಮತಿಯ ಟ್ರೇಲರ್ ನೋಡಿದೆ. ಅನುಷ್ಕಾ ಶೆಟ್ಟಿ ಹೊರತುಪಡಿಸಿ ಬೇರೆ ಯಾರನ್ನೂ 'ಚಂಚಲ್' ಎಂದು ಊಹಿಸಲು ಸಾಧ್ಯವಿಲ್ಲ. ಭೂಮಿ ಪೆಡ್ನೇಕರ್ ಉತ್ತಮ ಅಭಿನಯ ಮಾಡಿರಬಹುದು, ಆದರೆ ಟ್ರೈಲರ್‌ನಲ್ಲಿ ಅದು ಅನುಷ್ಕಾ ಶೆಟ್ಟಿಯಷ್ಟು ಶಕ್ತಿಯುತವಾಗಿ ಕಾಣುತ್ತಿಲ್ಲ'' ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿಸದ್ದಾರೆ.

  ಅಂದು ಪ್ರಥಮ್ ಮಾಡಿದ ಒಳ್ಳೆ ಕೆಲಸ ಇಂದು ಎಷ್ಟೋ ಮಕ್ಕಳಿಗೆ ಉಪಯೋಗ ಆಗ್ತಿದೆ | Filmibeat Kannada
  ಡಿಸೆಂಬರ್ 11ಕ್ಕೆ ದುರ್ಗಮತಿ ರಿಲೀಸ್

  ಡಿಸೆಂಬರ್ 11ಕ್ಕೆ ದುರ್ಗಮತಿ ರಿಲೀಸ್

  2018ರಲ್ಲಿ ಬಿಡುಗಡೆಯಾಗಿದ್ದ ಭಾಗಮತಿ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಐಎಎಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರು. ಫ್ಲಾಶ್‌ಬ್ಯಾಕ್‌ನಲ್ಲಿ ಭಾಗಮತಿ ಮಹಾರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಪಾತ್ರವನ್ನು ಭೂಮಿ ಪಡ್ನೆಕರ್ ನಿರ್ವಹಿಸಿದ್ದಾರೆ. ಇನ್ನು ದುರ್ಗಮತಿ ಸಿನಿಮಾ ಡಿಸೆಂಬರ್ 11 ರಂದು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.

  ಮಹೇಶ್ ಬಾಬು ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ: ವೈರಲ್ ಆದ ಟ್ವೀಟ್‌ನಲ್ಲಿ ಏನಿದೆ?ಮಹೇಶ್ ಬಾಬು ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ: ವೈರಲ್ ಆದ ಟ್ವೀಟ್‌ನಲ್ಲಿ ಏನಿದೆ?

  English summary
  Anushka shetty fans are unhappy about bhumi pednekar's durgamati trailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X