»   » ಅನುಷ್ಕಾ ಬಾಲಿವುಡ್ ಎಂಟ್ರಿಯನ್ನ ಪ್ರಭಾಸ್ ವಿರೋಧಿಸಲು ಬಲವಾದ ಕಾರಣ.!

ಅನುಷ್ಕಾ ಬಾಲಿವುಡ್ ಎಂಟ್ರಿಯನ್ನ ಪ್ರಭಾಸ್ ವಿರೋಧಿಸಲು ಬಲವಾದ ಕಾರಣ.!

Posted By:
Subscribe to Filmibeat Kannada
ಅನುಷ್ಕಾ ಬಾಲಿವುಡ್ ಎಂಟ್ರಿಯನ್ನ ಪ್ರಭಾಸ್ ವಿರೋಧಿಸಲು ಕಾರಣ ಏನು ? | FIlmibeat Kannada

'ಬಾಹುಬಲಿ' ಖ್ಯಾತಿಯ ನಟ ಪ್ರಭಾಸ್ 'ಸಾಹೋ' ಚಿತ್ರದ ಮೂಲಕ ಬಾಲಿವುಡ್ ಗೆ ಲಗ್ಗೆಯಿಟ್ಟಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ, ಅನುಷ್ಕಾ ಶೆಟ್ಟಿ ಕೂಡ ಬಿಟೌನ್ ನಲ್ಲಿ ಇಷ್ಟೋತ್ತಿಗಾಲೇ ಮಿಂಚಬೇಕಿತ್ತು. ಆದ್ರೆ, ಅದ್ಯಾಕೋ ಮನಸ್ಸು ಮಾಡದ ಅನುಷ್ಕಾ ಬಂದಿರುವ ಅವಕಾಶಗಳನ್ನೆಲ್ಲಾ ತಳ್ಳಿ ಹಾಕುತ್ತಿದ್ದಾರೆ.

ಇದಕ್ಕೆ ಕಾರಣ ಸ್ನೇಹಿತ ಪ್ರಭಾಸ್ ಎನ್ನಲಾಗಿದೆ. ಅನುಷ್ಕಾ ಶೆಟ್ಟಿ ಯಾಕೆ ಬಿ-ಟೌನ್ ಪ್ರವೇಶಿಸಬಾರದು.? ಅನುಷ್ಕಾಳನ್ನ ಬಿಗ್ ಇಂಡಸ್ಟ್ರಿಗೆ ಕಾಲಿಡಲು ಪ್ರಭಾಸ್ ಯಾಕೆ ಬಿಡುತ್ತಿಲ್ಲ ಎಂಬ ಕುತೂಹಲ ಈಗ ಎಲ್ಲರನ್ನ ಕಾಡುತ್ತಿದೆ.

ಸ್ವೀಟಿ ಅನುಷ್ಕಾ ಬಗ್ಗೆ ಡಾರ್ಲಿಂಗ್ ಪ್ರಭಾಸ್ ಪ್ರೀತಿ ಮಾತು

ಅದಕ್ಕೀಗ ಉತ್ತರ ಸಿಕ್ಕಿದ್ದು ಕಾರಣ ಕೇಳಿದ್ರೆ ಇವರಿಬ್ಬರ ಬಗ್ಗೆ ಮತ್ತಷ್ಟು ಅನುಮಾನ ಹೆಚ್ಚಾಗುತ್ತೆ. ಹೌದು, ''ಅನುಷ್ಕಾ ಶೆಟ್ಟಿ ಹಿಂದಿ ಸಿನಿಮಾ ಮಾಡಿದ್ರೆ, ಅದು ಪ್ರಭಾಸ್ ಜೊತೆಯಲ್ಲೇ ಇರಬೇಕು'' ಎನ್ನುವುದು ಪ್ರಭಾಸ್ ಇಚ್ಛೆಯಾಗಿದೆಯಂತೆ. ಹೀಗಾಗಿ, ಅನುಷ್ಕಾ ಕೂಡ ಬಂದಿರುವ ಆಫರ್ ಗಳನ್ನ ರಿಜೆಕ್ಟ್ ಮಾಡುತ್ತಿದ್ದಾರೆ ಎನ್ನಲಾಗಿದೆ.

Anushka Shetty rejects a bollywood Offer because of Prabhas

ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಉತ್ತಮ ಸ್ನೇಹಿತರಾಗಿದ್ದು, ಅನುಷ್ಕಾ ಸಿನಿಮಾಗಳ ಬಗ್ಗೆ ಪ್ರಭಾಸ್ ಹೆಚ್ಚು ಕಾಳಜಿ ವಹಿಸುತ್ತಾರಂತೆ. ಅನುಷ್ಕಾ ಅಭಿನಯದ 'ಭಾಗಮತಿ' ಚಿತ್ರದ ಶೂಟಿಂಗ್ ಸೆಟ್ ಗೆ ಹೋಗಿದ್ದ ಪ್ರಭಾಸ್, ಸಿನಿಮಾ ಹೇಗೆ ಸಾಗಿದೆ ಎಂದು ವಿಚಾರಿಸಿದ್ದರು.

ಕೊನೆಗೂ 'ಮದುವೆ ಆಗ್ತೀನಿ' ಎಂದ ನಟಿ ಅನುಷ್ಕಾ ಶೆಟ್ಟಿ: ಯಾರನ್ನ ಗೊತ್ತಾ?

'ಭಾಗಮತಿ' ಟ್ರೇಲರ್ ಬಿಡುಗಡೆಯಾದಾಗ "ಪ್ರತಿ ಸಿನಿಮಾಗಳಲ್ಲಿಯೂ ಹೊಸ ರೀತಿಯ ಪ್ರಯೋಗ ಮಾಡುವುದರಲ್ಲಿ ಅನುಷ್ಕಾ ಶೆಟ್ಟಿ ಯಾವಾಗಲೂ ಮೊದಲಿರುತ್ತಾರೆ. ಗುಡ್ ಲಕ್ ಸ್ವೀಟಿ.. ಹಾಗೂ ಚಿತ್ರತಂಡಕ್ಕೆ ಶುಭವಾಗಲಿ" ಎಂದು ಕಾಮೆಂಟ್ ಮಾಡಿದ್ದರು.

Anushka Shetty rejects a bollywood Offer because of Prabhas

ಸದ್ಯ, 'ಸಾಹೋ' ಚಿತ್ರದಲ್ಲಿ ಪ್ರಭಾಸ್ ಅಭಿನಯಿಸುತ್ತಿದ್ದಾರೆ. ಈ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಶ್ರದ್ಧಾ ಕಪೂರ್ ನಾಯಕಿಯಾಗಿದ್ದು, ನೀಲ್ ನಿತಿನ್ ಮುಖೇಶ್ ನಟಿಸುತ್ತಿದ್ದಾರೆ. ಇದು ಪ್ರಭಾಸ್ ಅಭಿನಯದ ಮೊದಲ ಬಾಲಿವುಡ್ ಸಿನಿಮಾವಾಗಿದೆ.

English summary
Prabhas is of the opinion that Anushka should make her Bollywood debut with him. He knows that that way they can make the most of their on-screen pair and give fans what they expect out of them.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada