ಒಂದು ರಾತ್ರಿಯಾದರೂ ಆ ಸೂಪರ್ ಸ್ಟಾರ್ ಜೊತೆ ನಾನು ಹಾಸಿಗೆ ಹಂಚಿಕೊಳ್ಳಬೇಕು- 50ರ ಹರೆಯದ ಖ್ಯಾತ ನಟಿಯ ವಿಚಿತ್ರ ಆಸೆ
''ಆಸೆ'' ಮನುಷ್ಯನ ಸಹಜ ಗುಣ. ಆದರೆ .. ಬದಲಾದ ಈ ಕಾಲದಲ್ಲಿ ಆಸೆಯ ಲಿಸ್ಟ್ ಬೆಳೆಯುತ್ತಲೇ ಹೋಗುತ್ತಿದೆ. ವಸ್ತ್ರ.. ಆಭರಣ.. ಕಾರು.. ಬಂಗಲೆ.. ಹೀಗೆ ಆಸೆ ಅತಿಯಾಸೆಯಾಗಿದೆ. ಆಸೆಯ ಬೆನ್ನು ಹತ್ತಿ ಅತಿಯಾಸೆ ಎಂಬ ಕುದುರೆಯ ಬೆನ್ನೇರಿ ಹಲವರು ಪ್ರಯಾಣ ಮಾಡುತ್ತಿದ್ದಾರೆ. ಕೇವಲ ಜನಸಾಮಾನ್ಯರಲ್ಲಿ ಮಾತ್ರ ಈ ಆಸೆಯ ಒರತೆ ಚಿಮ್ಮುವುದಿಲ್ಲ. ಬದಲಿಗೆ ಸುಖದ ಸುಖದ ಸುಪ್ಪತ್ತಿಗೆಯಲ್ಲಿ....
ತೇಲುವ ತಾರೆಯರ ಆಸೆಗಳಿಗೆ ಕೂಡ ಲಂಗು-ಲಗಾಮು ಇಲ್ಲ. ಇಲ್ಲಿಯೂ ಕೂಡ ನಮ್ಮೆಲ್ಲ ಆಸೆ-ಆಕಾಂಕ್ಷೆಗಳು ಈಡೇರಬೇಕು ಅಂದರೆ ನಾವೇನು ಬೇಕಾದರೂ ಮಾಡಲೂ ಸಿದ್ಧ ಎನ್ನುವ ಮೊಂಡು ವಾದವನ್ನು ಕೂಡ ಹಲವರು ಮಾಡುತ್ತಾರೆ. ಉದಾಹರಣೆಗೆ ಅಮೀಷಾ ಪಟೇಲ್.

ಹೌದು, ''ಕಹೋ ನಾ ಪ್ಯಾರ್ ಹೈ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ಅಮೀಷಾ ಪಟೇಲ್ ಚಿತ್ರರಂಗದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯುವ ಸಮಯದಲ್ಲಿ ಬಾಲಿವುಡ್‌ನ ಹಿರಿಯ ನಿರ್ದೇಶಕ ವಿಕ್ರಂ ಭಟ್ ಜೊತೆ ಪ್ರೀತಿಯಲ್ಲಿ ಬಿದ್ದರು. ಪ್ರೀತಿ ಇದ್ದಲ್ಲಿ ವಯಸ್ಸಿನ ಹಂಗೆಲ್ಲಿ ಎಂದು ತೇಲಿದರು. ತಮ್ಮ ಚಿತ್ರ ಜೀವನದ ಕಡೆ ಗಮನ ಕೊಡದೇ ಪ್ರೇಮದ ಅಮಲೇರಿಸಿಕೊಂಡರು.
ಆದರೆ ಈ ಅಮಲು ಆ ನಂತರ ಇಳಿಯಿತು. ಸಂಬಂಧವೂ ಮುರಿದು ಬಿತ್ತು. ಈ ಕಡೆ ಅವಕಾಶಗಳ ಕೊರತೆ ಕೂಡ ಎದುರಾಯಿತು.ಇನ್ನೂ ಅಮೀಷಾ ಪಟೇಲ್ ''ಕಹೋ ನಾ ಪ್ಯಾರ್ ಹೈ'' ಹೊರತು ಪಡಿಸಿ ಮಾಡಿದ ಮತ್ತೊಂದು ಸಾಧನೆ ಅಂದರೆ ಅದು ''ಗದರ್''. ಅನಿಲ್ ಶರ್ಮಾ ನಿರ್ದೇಶನದಲ್ಲಿ ಸನ್ನಿ ಡಿಯೋಲ್ ನಾಯಕತ್ವದಲ್ಲಿ ಬಂದ ಈ ಚಿತ್ರ ಅಮೀಷಾ ಪಟೇಲ್‌ಗೆ ಆ ಕಾಲದಲ್ಲಿ ವ್ಯಾಪಕ ಜನಪ್ರಿಯತೆ ತಂದು ಕೊಟ್ಟಿತ್ತು.''ಗದರ್ 2'' ಕೂಡ ಗೆದ್ದಿತು.
ಇಂಥಾ ಅಮೀಷಾ ಪಟೇಲ್‌ಗೆ ಈಗ 50ರ ಹರೆಯ. ಇನ್ನೂ ಮದುವೆಯಾಗಿಲ್ಲ. ಆದರೂ ಬಯಕೆ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಅಮೀಷಾ ಸದ್ಯ ವಿಚಿತ್ರ ಆಸೆಯೊಂದನ್ನು ವ್ಯಕ್ತಪಡಿಸಿದ್ದಾರೆ. ಒಂದು ರಾತ್ರಿಯಾದರೂ ಆ ಸ್ಟಾರ್ ಜೊತೆ ನನಗೆ ಹಾಸಿಗೆ ಹಂಚಿಕೊಳ್ಳಬೇಕು ಎನ್ನುವ ಆಸೆ ಇದೆ ಎಂದು ಹೇಳಿದ್ದಾರೆ.
ಹೌದು, ಈ ಕುರಿತು ವಿವಾದಾತ್ಮಕ ಯೂಟ್ಯೂಬರ್ ''ರಣವೀರ್ ಅಲ್ಲಾಬಾಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಮೀಷಾ ಪಟೇಲ್, ಹಾಲಿವುಡ್‌ನ ಸೂಪರ್ ಸ್ಟಾರ್ ''ಟಾಮ್ ಕ್ರೂಸ್'' ಅಂದರೆ ನನಗೆ ಪಂಚ ಪ್ರಾಣ. ಅವರ ಮೇಲಿನ ನನ್ನ ಅಭಿಮಾನ ಇಂದು ನಿನ್ನೆಯದ್ದಲ್ಲ. ಬದಲಿಗೆ ಬಾಲ್ಯದಿಂದಲೂ ನನಗೆ ಅವರು ಕಂಡರೆ ಇಷ್ಟ ಎಂದು ಹೇಳಿದ್ದಾರೆ.

ಮುಂದುವರೆದು ಬಾಲ್ಯದಲ್ಲಿ ನನ್ನ ಪೆನ್ಸಿಲ್ ಬಾಕ್ಸ್‌ನಲ್ಲಿ, ಫೈಲ್‌ಗಳಲ್ಲಿ, ಇಷ್ಟೇ ಯಾಕೆ ನನ್ನ ರೂಮ್‌ನ ಗೋಡೆಯ ಮೇಲೆ ಅವರ ಪೋಸ್ಟರ್‌ಗಳೇ ಕಾಣಿಸುತ್ತಿದ್ದವು ಎಂದು ಹೇಳಿರುವ ಅಮೀಷಾ ಪಟೇಲ್, "ಟಾಮ್ ಕ್ರೂಸ್'' ನನ್ನ ದೊಡ್ಡ ಕ್ರಶ್ ಎಂದು ಹೇಳಿದ್ದಾರೆ.
ಇನ್ನೂ ನನ್ನ ಬದುಕಿನಲ್ಲಿ ನಾನು ನನಗೆ ಹಲವು ನಿಯಮಗಳನ್ನು ಹಾಕಿಕೊಂಡಿದ್ದೇನೆ, ಆದರೆ.. ಆ ನಿಯಮಗಳನ್ನೆಲ್ಲಾ ನಾನು ''ಟಾಮ್ ಕ್ರೂಸ್''ಗಾಗಿ ಗಾಳಿಗೆ ತೂರುವೆ ಎಂದು ಹೇಳಿರುವ ಅಮೀಷಾ ಪಟೇಲ್
ಯಾರ ಜೊತೆ ಆದರೂ ಒಂದು ರಾತ್ರಿ (ಒನ್-ನೈಟ್ ಸ್ಟ್ಯಾಂಡ್) ಕಳೆಯಲು ಬಯಸುವೀರಾ ಮಲಗಲು ಬಯಸುವೀರಾ ಎಂದು ನೀವು ನನ್ನ ಕೇಳಿದರೆ ನನ್ನ ಉತ್ತರ ಹೌದು ಎಂದಾಗಿರುತ್ತೆ ಎಂದು ಹೇಳಿದ್ದಾರೆ. ಮದುವೆಯಾಗುವ ಅವಕಾಶ ಸಿಕ್ಕರೆ ನಾನು ಮದುವೆ ಕೂಡ ಆಗುತ್ತೇನೆ ಎಂದು ಹೇಳಿ ನಾಚಿಕೊಂಡಿದ್ಧಾರೆ.
ಸದ್ಯ ಅಮೀಷಾ ಪಟೇಲ್ ಅವರ ಈ ಉತ್ತರ ಇವರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿಯನ್ನು ಹಾಡಿದೆ. ನಾನಾ ಬಗೆಯ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ.


Click it and Unblock the Notifications











