ಕೇರಳಗೆ 1 ಕೋಟಿ ಸಹಾಯ ಮಾಡಿದ ಎಆರ್ ರೆಹಮಾನ್

By Bharath Kumar

ಜಲ ಪ್ರವಾಹಕ್ಕೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕೇರಳ ರಾಜ್ಯಕ್ಕೆ ಬಾಲಿವುಡ್ ಚಿತ್ರರಂಗದ ಹಲವು ತಾರೆಯರು ನೆರವು ನೀಡಿದ್ದಾರೆ. ಇದೀಗ, ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ತಮ್ಮ ಸಹಾಯವನ್ನ ನೀಡಿದ್ದಾರೆ.

ಹೌದು, ಆಸ್ಕರ್ ವಿಜೇತ ಮ್ಯಾಜಿಕ ಕಂಪೋಸರ್ ಎಆರ್ ರೆಹಮಾನ್ ಕೇರಳ ಸಂತ್ರಸ್ಥರಿಗಾಗಿ ಒಂದು ಕೋಟಿ ರೂಪಾಯಿ ನೀಡಿದ್ದಾರೆ. ಈ ವಿಷ್ಯವನ್ನ ಖುದ್ದು ರೆಹಮಾನ್ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಖಚಿತ ಪಡಿಸಿದ್ದಾರೆ.

ಸದ್ಯ, ತಮ್ಮ ತಂಡದೊಂದಿಗೆ ಯುಎಸ್ ನಲ್ಲಿರುವ ರೆಹಮಾನ್, 'ಕೇರಳದ ಸಹೋದರ ಹಾಗೂ ಸಹೋದರಿಯರಿಗಾಗಿ ತಮ್ಮಿಂದ ಸಣ್ಣ ಸಹಾಯ. ಇದರಿಂದ ಒಂದು ಸಣ್ಣ ಮಟ್ಟದ ಸಮಾಧಾನ ಸಿಗಬಹುದು' ಎಂದು ಟ್ವೀಟ್ ಮಾಡಿದ್ದಾರೆ.

ar rahman donated 1 crore kerala flood

ಯುಎಸ್ ರಾಷ್ಟ್ರದಲ್ಲಿ ಸುತ್ತಾಡುತ್ತಿರುವ ರೆಹಮಾನ್ ಮತ್ತು ತಂಡ ಹಲವು ಕಡೆ ಲೈವ್ ಕಾರ್ಯಕ್ರಮ ನೀಡುತ್ತಿದ್ದಾರೆ. ವಾಷಿಂಗನ್ ಟನ್ ನಲ್ಲಿ ನೀಡಿದ ಶೋ ನಂತರ ಈ ಸಹಾಯವನ್ನ ಪ್ರಕಟಿಸಿದ್ದಾರೆ.

ಕೇರಳಕ್ಕೆ 12 ಕೋಟಿ ಕೊಟ್ಟ ಸಲ್ಮಾನ್ ಖಾನ್: ಟ್ವೀಟ್ ಮಾಡಿ ಡಿಲೀಟ್ ಮಾಡಿದ ನಟ

ಸೆಪ್ಟೆಂಬರ್ 5 ರಂದು ಯುಎಸ್ ಟೂರ್ ಮುಗಿಸಿ, ಭಾರತಕ್ಕೆ ವಾಪಸ್ ಆಗಲಿರುವ ರೆಹಮಾನ್, ಮಣಿರತ್ನಂ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಚೆಕ್ಕ ಚೀವಂತ ವಾನಂ' ಚಿತ್ರದ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಸಿನಿಮಾಗೆ ಸಂಗೀತ ನೀಡಿರುವುದು ಇವರೇ.

ದಾಖಲೆಗಳ ಪ್ರಕಾರ ಕೇರಳ ಪ್ರವಾಹದಲ್ಲಿ ಸುಮಾರು 483 ಜನ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ. ಹಲವು ಜನರು ಮನೆಯನ್ನ, ಆಸ್ತಿಯನ್ನ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಹೀಗಾಗಿ, ದೇಶದ ಹಲವು ಜನರು, ಸಿನಿಮಾ ತಾರೆಯರು ಬೆಂಬಲ ನೀಡಿದ್ದಾರೆ.

More from Filmibeat

English summary
Music composer AR Rahman donated one crore to the relief fund in Kerala. The Oscar-winning music composer on Sunday at a concert in the USA pledged that he and his team of artists have donated the money to the Kerala Chief Minister’s Distress Relief Fund (CMDRF).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X