ಮಕ್ಕಳೊಂದಿಗೆ ಸೇರಿ ಸುಶಾಂತ್ ಸಿಂಗ್‌ಗೆ ಗಾನ ಗೌರವ ಸಲ್ಲಿಸಿದ ಎ.ಆರ್.ರೆಹಮಾನ್
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿ ಒಂದು ತಿಂಗಳ ಮೇಲಾಯಿತು. ಆದರೆ ಅವರ ಸಾವನ್ನು ಬಾಲಿವುಡ್ ಇನ್ನೂ ಅರಗಿಸಿಕೊಳ್ಳಲಾಗಿಲ್ಲ.
Recommended Video
ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್, ಸುಶಾಂತ್ ಸಿಂಗ್ ಗೆ ಗಾನ ಗೌರವ ಸಲ್ಲಿಸಿದ್ದಾರೆ. ಅವರೂ ಸೇರಿದಂತೆ ಇತರೆ ಹಾಡುಗಾರರು ಸುಶಾಂತ್ ಸಿಂಗ್ ನೆನಪಲ್ಲಿ ಹಾಡುಗಳನ್ನು ಹಾಡಿದ್ದು, ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ.
ಸುಶಾಂತ್ ಸಿಂಗ್ ಅವರ ಕೊನೆಯ ಸಿನಿಮಾ ದಿಲ್ ಬೇಚಾರಾ ಕ್ಕೆ ಸಂಗೀತ ನಿರ್ದೇಶನ ಮಾಡುವ ಜೊತೆಗೆ ಒಂದು ಹಾಡನ್ನು ಹಾಡನ್ನು ಸಹ ಎ.ಆರ್.ರೆಹಮಾನ್ ಹಾಡಿದ್ದರು. ಈಗ ಆ ಸಿನಿಮಾದ ಎಲ್ಲಾ ಹಾಡುಗಳನ್ನು ಸುಶಾಂತ್ ಗೌರವಕ್ಕಾಗಿ ಹಾಡಿಸಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿದೆ.

ತಮ್ಮ ಮಕ್ಕಳ ಜೊತೆ ಹಾಡಿರುವ ರೆಹಮಾನ್
ಎ.ಆರ್.ರೆಹಮಾನ್ ಮಗಳು ರಹೀಮಾ ರೆಹಮಾನ್, ಮಗ ಎ.ಆರ್.ಅಮೀನ್ ಹಾಗೂ ಹಿರಾಲ್ ವಿರಾದಿಯಾ ಒಟ್ಟಿಗೆ ಸೇರಿ ದಿಲ್ ಬೇಚಾರದ ಟೈಟಲ್ ಟ್ರ್ಯಾಕ್ ಅನ್ನು ಮತ್ತೆ ಲೈವ್ ಆಗಿ ಹಾಡಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ಹಾಡುಗಳ ಗುಚ್ಛ ಸುಶಾಂತ್ ನೆನಪಿಗೆ ಎಂದಿದ್ದಾರೆ ರೆಹಮಾನ್.

ಮನೆಗಳಿಂದಲೇ ಹಾಡು ಹಾಡಿದ್ದಾರೆ
ರೆಹಮಾನ್ ಮಾತ್ರವಲ್ಲದೆ, ದಿಲ್ ಬೇಚಾರಾ ಸಿನಿಮಾದಲ್ಲಿ ಹಾಡುಗಳನ್ನು ಹಾಡಿರುವ ಎಲ್ಲ ಗಾಯಕರೂ ತಮ್ಮ-ತಮ್ಮ ಮನೆಗಳಿಂದಲೇ ಮತ್ತೆ ಹಾಡನ್ನು ಲೈವ್ ಆಗಿ ಹಾಡಿ ವಿಡಿಯೋ ರೆಕಾರ್ಡ್ ಮಾಡಿ ಹಾಡುಗಳ ಗುಚ್ಛವನ್ನಾಗಿಸಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಹಾಡುಗಳು ಹೊಸ ಅರ್ಥವನ್ನು ನೀಡುತ್ತಿವೆ
'ದಿಲ್ ಬೇಚಾರಾ ಸಿನಿಮಾ ನಮ್ಮೆಲ್ಲರ ಪಾಲಿಗೆ ಎಂದೂ ಮರೆಯದ ಅನುಭವವಾಗಿ ಉಳಿದುಬಿಡಲಿದೆ. ಈ ಸಿನಿಮಾಕ್ಕೆ ಸಂಯೋಜಿಸಿದ್ದ ಒಂಬತ್ತು ಹಾಡುಗಳು ಸುಶಾಂತ್ ಇಲ್ಲದ ಈ ಹೊತ್ತಿಗೆ ಹೊಸದೇ ಅರ್ಥವನ್ನು ನೀಡುತ್ತಿವೆ. ಈ ಹಾಡುಗಳೆಲ್ಲವೂ ಸುಶಾಂತ್ ಸಿಂಗ್ ನೆನಪಿಗೆ ಮೀಸಲು' ಎಂದು ವಿಡಿಯೋದ ಆರಂಭದಲ್ಲಿ ರೆಹಮಾನ್ ಹೇಳುತ್ತಾರೆ.

ಹಲವು ಗಾಯಕರು ಹಾಡಿದ್ದಾರೆ
ವಿಡಿಯೋದಲ್ಲಿ ಸುನಿಧಿ ಚೌಹಾಣ್, ಹರಿದಾಯ್ ಗಟ್ಟಾನಿ, ಮೋಹಿತ್ ಚೌಹಾಣ್, ಶ್ರೆಯಾ ಘೋಷಾಲ್, ಅರಿಜಿತ್ ಸಿಂಗ್, ಸಾಶಾ ತಿರುಪತಿ, ಜೋನಿತಾ ಗಾಂಧಿ ಮತ್ತು ಹೃದಯ್ ಗಟ್ಟಾನಿ ಅವರುಗಳು ಸುಶಾಂತ್ ಸಿಂಗ್ ನೆನಪಿನಲ್ಲಿ ಹಾಡುಗಳನ್ನು ಹಾಡಿದ್ದಾರೆ.

ಜುಲೈ 24 ಕ್ಕೆ ಬಿಡುಗಡೆ ಆಗಲಿದೆ
ಸುಶಾಂತ್ ಸಿಂಗ್ ಕೊನೆಯದಾಗಿ ನಟಿಸಿದ್ದ 'ದಿಲ್ ಬೇಚಾರಾ' ಸಿನಿಮಾವು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಜುಲೈ 24 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ನಾಯಕಿಯಾಗಿ ಸಂಜನಾ ಸಂಘಿ ನಟಿಸಿದ್ದಾರೆ. ಸೈಫ್ ಅಲಿ ಖಾನ್ ಸಹ ಸಿನಿಮಾದಲ್ಲಿದ್ದಾರೆ. ಸಿನಿಮಾವನ್ನು ಮುಖೇಶ್ ಚಬ್ರಾ ನಿರ್ದೇಶಿಸಿದ್ದಾರೆ.


Click it and Unblock the Notifications











