For Quick Alerts
  ALLOW NOTIFICATIONS  
  For Daily Alerts

  ಕೋಣೆಯಲ್ಲಿ ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡ: ನಟಿ ಬಿಚ್ಚಿಟ್ಟ ಕರಾಳ ಅನುಭವ

  |

  ಮೀ ಟೂ ಅಭಿಯಾನದಿಂದ ಹೊರ ಬೀಳಲು ಆರಂಭಿಸಿದ ಚಿತ್ರರಂಗಗಳ ಕರಾಳ ಕತೆಗಳು ಇನ್ನೂ ನಿಂತಿಲ್ಲ. ಆಗೊಮ್ಮೆ-ಈಗೊಮ್ಮೆ ನಟಿಯರು ತಮಗಾದ ಕೆಟ್ಟ ಅನುಭವವನ್ನು ಹೇಳಿಕೊಳ್ಳುತ್ತಲೇ ಇದ್ದಾರೆ.

  ಇದೀಗ ಮಾಜಿ ಬಿಗ್‌ಬಾಸ್ ಸ್ಪರ್ಧಿ, ಕಿರುತೆರೆ ನಟಿ ಆರಾಧನಾ ಶರ್ಮಾ, ತಮಗೆ ಆದ ಕೆಟ್ಟ ಅನುಭವವನ್ನು ಮಾಧ್ಯಮದ ಎದುರು ಹಂಚಿಕೊಂಡಿದ್ದಾರೆ.

  ಕೆಲ ವರ್ಷಗಳ ಹಿಂದೆ ವ್ಯಕ್ತಿಯೊಬ್ಬ ಸಿನಿಮಾದಲ್ಲಿ ಪಾತ್ರ ಕೊಡಿಸುತ್ತೇನೆಂದು ಹೇಳಿ ತನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದನ್ನು ಆರಾಧನಾ ಶರ್ಮಾ ಈಗ ಹೇಳಿಕೊಂಡಿದ್ದಾರೆ.

  ''ನಾಲ್ಕು-ಐದು ವರ್ಷದ ಹಿಂದೆ ನಡೆದ ಘಟನೆ ಅದು. ಆಗ ನಾನು ಪುಣೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದೆ. ಆದರೆ ಘಟನೆ ನಡೆದಿದ್ದು ನನ್ನ ಕುಟುಂಬ ವಾಸವಿದ್ದ ರಾಂಚಿಯಲ್ಲಿಯೇ. ಆ ಘಟನೆಯನ್ನು ನನ್ನ ಜೀವನ ಪರ್ಯಂತ ನಾನು ಮರೆಯುವುದಿಲ್ಲ'' ಎಂದಿದ್ದಾರೆ ಆರಾಧನಾ.

  ''ವ್ಯಕ್ತಿಯೊಬ್ಬ ಮುಂಬೈನಲ್ಲಿ ಸಿನಿಮಾಗಳಿಗೆ ಕಾಸ್ಟಿಂಗ್ ಮಾಡುತ್ತಿದ್ದ. ಆ ಸಮಯದಲ್ಲಿ ನಾನು ಪುಣೆ, ರಾಂಚಿಯಲ್ಲಿ ಮಾಡೆಲಿಂಗ್ ಮಾಡುತ್ತಿದ್ದೆ. ಆತ ನನಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಪುಣೆಯಿಂದ ರಾಂಚಿಗೆ ಕರೆಸಿಕೊಂಡ'' ಎಂದು ಅಂದಿನ ಘಟನೆ ನೆನಪು ಮಾಡಿಕೊಂಡಿದ್ದಾರೆ ಆರಾಧನಾ.

  ''ನನ್ನನ್ನು ಒಂದು ಕೋಣೆಗೆ ಕರೆದುಕೊಂಡು ಹೋಗಿ ಅಲ್ಲಿ ಸ್ಕ್ರಿಪ್ಟ್ ಒಂದನ್ನು ಓದಲು ಕೊಟ್ಟ. ನಾನು ಓದಲು ಶುರು ಮಾಡಿದೆ. ಆಗ ಆತ ನನ್ನನ್ನು ಮುಟ್ಟಲು ಯತ್ನಿಸಿದ. ಕೆಟ್ಟದಾಗಿ ಮುಟ್ಟಲು ಆರಂಭಿಸಿದ. ಕೂಡಲೇ ನಾನು ಅವನ್ನು ಜೋರಾಗಿ ತಳ್ಳಿ ಕೋಣೆಯಿಂದ ಹೊರಗೆ ಓಡಿ ಬಂದು ಬಿಟ್ಟೆ. ನಾನು ಅಂದು ಸಾಕಷ್ಟು ಹೆದರಿದ್ದೆ'' ಎಂದಿದ್ದಾರೆ ಆರಾಧನಾ.

  ''ಆಗಿನ್ನೂ ನನಗೆ 19/20 ವರ್ಷ ವಯಸ್ಸು ಅಷ್ಟೆ. ಆದರೆ ಆ ಘಟನೆ ನನ್ನ ಮನಸ್ಸಿನಲ್ಲಿ ಕುಳಿತು ಬಿಟ್ಟಿತು. ಆ ಘಟನೆ ನಂತರ ಯಾರನ್ನೂ ನಂಬದ ಸ್ಥಿತಿಗೆ ನಾನು ತಲುಪಿಬಿಟ್ಟೆ. ನನ್ನ ತಂದೆಯೇ ನನ್ನನ್ನು ಮುಟ್ಟಿದರೂ ನನಗೆ ಭಯದ ಭಾವ ಆವರಿಸಲು ಆರಂಭವಾಗಿಬಿಡುತ್ತಿತ್ತು. ಮಾನಸಿಕವಾಗಿ ನಾನು ಕುಗ್ಗಿ ಹೋಗಿದ್ದೆ'' ಎಂದಿದ್ದಾರೆ ಆರಾಧನಾ.

  ''ನಾನು ನನ್ನ ತಾಯಿ ಆತನಿಗೆ ಬುದ್ಧಿಕಲಿಸಲು ನಿಶ್ಚಯಿಸಿದೆವು ಆದರೆ ನಮ್ಮ ಕುಟುಂಬದವರು ನಮ್ಮನ್ನು ತಡೆದರು'' ಎಂದು ಕಹಿ ಘಟನೆ ನೆನಪಿಸಿಕೊಂಡಿದ್ದಾರೆ ಆರಾಧನಾ.

  Sandesh Prince ಸಾಕ್ಷ್ಯ ಬೇಕು ಅಂದ್ರೆ CCTV ಫೂಟೇಜ್ ಚೆಕ್ ಮಾಡಿ! | Filmibeat Kannada

  ''ಮತ್ತೊಂದು ಬಾರಿ, ಸಿನಿಮಾ ಒಂದಕ್ಕೆ ಸುಂದರ ನಟಿಯರು ಬೇಕಾಗಿದ್ದಾರೆ ಎಂದು ಜಾಹೀರಾತು ಪ್ರಕಟಿಸಲಾಗಿತ್ತು, ನಾನು ನನ್ನ ಚಿತ್ರಗಳನ್ನು ಕೊಟ್ಟೆ, ಅದಕ್ಕೆ ಪ್ರತಿಕ್ರಿಯಿಸಿದ ಕಾಸ್ಟಿಂಗ್ ಮ್ಯಾನೇಜರ್, 'ನೀನು ಸುಂದರವಾಗಿಲ್ಲ, ಸುಂದರ ಯುವತಿಯರಿಗಷ್ಟೆ ಇಲ್ಲಿ ಅವಕಾಶ' ಎಂದಿದ್ದ. ಅದು ಮಾತ್ರವೇ ಅಲ್ಲದೆ, ನಾನು ಗಟ್ಟಿಮುಟ್ಟಾದ ದೇಹ ಹೊಂದಿದ್ದರಿಂದ ನನ್ನನ್ನು ಗಂಡಸು ಎಂದು ಕರೆದಿರುವ ಉದಾಹರಣೆಯೂ ಇದೆ'' ಎಂದಿದ್ದಾರೆ ಆರಾಧನಾ.

  English summary
  Actress Aradhana Sharma shares her horrible casting couch experience. She is participated in Hindi bigg boss and many serials and reality shows.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X