ತಂದೆ ಅರ್ಬಾಜ್ ಖಾನ್ ಎರಡನೇ ಮದುವೆಯಲ್ಲಿ ಹಾಡಿ, ಕುಣಿದ ಮಗ ಅರ್ಹಾನ್ ಖಾನ್, ವಿಡಿಯೋ ವೈರಲ್
ಬಾಲಿವುಡ್ ನಟ ಅರ್ಬಾಜ್ ಖಾನ್ ಮತ್ತು ಮೇಕಪ್ ಆರ್ಟಿಸ್ಟ್ ಶುರಾ ಖಾನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ಕುಟುಂಬ ಸದಸ್ಯರು ಮತ್ತು ಕೆಲವೇ ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಮದುವೆಯಲ್ಲಿ ಹೆಚ್ಚು ಗಮನ ಸೆಳೆದಿರುವುದು ಅರ್ಬಾಜ್ ಖಾನ್ ಮತ್ತು ನಟಿ, ಮಾಜಿ ಪತ್ನಿ ಮಲೈಕಾ ಅರೋರಾ ಅವರ ಮಗ ಅರ್ಹಾನ್ ಖಾನ್. ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಅರ್ಹಾನ್ ಖಾನ್ ತಂದೆಗಾಗಿ ವಿಶೇಷ ಉಡುಗೊರೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಗಿಟಾರ್ ನುಡಿಸುವ ಮೂಲಕ ತಂದೆಯನ್ನು ಖುಷಿ ಪಡಿಸಿದ್ದಾರೆ.

ತಂದೆಗೆ ಅರ್ಹಾನ್ ಖಾನ್ ವಿಶೇಷ ಉಡುಗೊರೆ
ನಟಿ ಮಲೈಕಾ ಅರೋರಾ ಅವರಿಂದ ವಿಚ್ಛೇಧನ ಪಡೆದ ಅರ್ಬಾಜ್ ಖಾನ್, ಎರಡನೇ ಬಾರಿಗೆ ತಮಗಿಂತ ಇಪ್ಪತೇರಡು ವರ್ಷ ಕಿರಿಯರಾದ ಶುರಾ ಖಾನ್ ಅವರನ್ನು ವಿವಾಹವಾಗಿದ್ದಾರೆ. ಈ ವೇಳೆ ಅರ್ಹಾನ್ ಖಾನ್ ಅವರು ಗಿಟಾರ್ ನುಡಿ, ಹಾಡು ಹಾಡುವ ಮೂಲಕ ತಮ್ಮ ಕೌಶಲ್ಯ ಪ್ರದರ್ಶಿಸಿದ್ದಾರೆ.
ಅರ್ಬಾಜ್ ಖಾನ್ ಮತ್ತು ಶುರಾ ಖಾನ್ ಅವರ ವಿವಾಹದಲ್ಲಿ ಕಪ್ಪು ಬಣ್ಣದ ಸೂಟ್‌ನಲ್ಲಿ ಸಕತ್ ಆಗಿ ಮಿಂಚಿದ್ದಾರೆ ಅರ್ಹಾನ್ ಖಾನ್. ಸಲ್ಮಾನ್ ಖಾನ್ ಅವರ ಸೋದರ ಮಾವ ಅತುಲ್ ಅಗ್ನಿಹೋತ್ರಿ ಈ ವಿಡಿಯೋದ ಒಂದು ನೋಟವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಅತುಲ್ ಅಗ್ನಿಹೋತ್ರಿ ಅವರು ಈ ಪೋಸ್ಟ್‌ಗೆ "ಐ ಲವ್ ಯೂ ಪಾಪಾ" ಎಂದು ಹೇಳಿ, ಅರ್ಬಾಜ್ ಖಾನ್ ಮತ್ತು ಅರ್ಹಾನ್ ಖಾನ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಮಗ ಗಿಟಾರ್ ಬಾರಿಸುತ್ತಾ ಹಾಡು ಹಾಡುವ ವಿಡಿಯೋವನ್ನು ಅರ್ಬಾಜ್ ಖಾನ್ ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಸಕತ್ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಅರ್ಹಾನ್ ಖಾನ್ ಅವರ ಗಿಟಾರ್ ಕಲೆಯನ್ನು ಶ್ಲಾಘಿಸಿದ್ದಾರೆ.
ತಂದೆ ಮಗನ ಜುಗಲ್ ಬಂದಿ
ಮದುವೆಯಲ್ಲಿ 'ತೇರೆ ಮಸ್ತ್ ಮಸ್ತ್ ದೋ ನೈನ್' ಹಾಡಿಗೆ ಅರ್ಬಾಜ್ ಖಾನ್ ದನಿಯಾಗಿದ್ದು, ಅದಕ್ಕೆ ಮಗ ಅರ್ಹಾನ್ ಖಾನ್ ಕೂಡ ಸೇರಿಕೊಂಡಿದ್ದಾರೆ. ತಂದೆ-ಮಗ ಒಟ್ಟಿಗೆ ವೇದಿಕೆ ಹಂಚಿಕೊಂಡಿರುವ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಕತ್ ವೈರಲ್ ಆಗಿದೆ.
ಈ ಹಿಂದೆ ಮಲೈಕಾ ಅರೋರಾ ಅವರನ್ನು ವಿವಾಹವಾಗಿದ್ದ ನಟ, ನಿರ್ಮಾಪಕ ತಮ್ಮ ಸಹೋದರಿ ಅರ್ಪಿತಾ ಖಾನ್ ಅವರ ಮುಂಬೈ ಮನೆಯಲ್ಲಿ ಶುರಾ ಖಾನ್ ಅವರನ್ನು ಎರಡನೇ ವಿವಾಹವಾದರು. ಮದುವೆಯಲ್ಲಿ ಅರ್ಬಾಜ್ ಅವರ ಪೋಷಕರು ಸಲೀಂ ಖಾನ್ ಮತ್ತು ಸಲ್ಮಾ ಖಾನ್, ಹೆಲೆನ್, ಸಹೋದರರಾದ ಸಲ್ಮಾನ್ ಖಾನ್, ಸೊಹೈಲ್ ಖಾನ್ ಇದ್ದರು. ರವೀನಾ ಟಂಡನ್, ರಿತೇಶ್ ದೇಶಮುಖ್, ಜೆನಿಲಿಯಾ ಡಿಸೋಜಾ, ಸಂಜಯ್ ಕಪೂರ್ ಮುಂತಾದವರು ಭಾಗಿಯಾಗಿ ನವ ವಧು-ವರರಿಗೆ ಶುಭ ಹಾರೈಸಿದ್ದಾರೆ.
ಮದುವೆಯ ಎರಡು ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಅರ್ಬಾಜ್ ಖಾನ್, "ನಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ, ಈ ದಿನದಿಂದ ನಾನು ಮತ್ತು ನನ್ನವರ ಪ್ರೀತಿ ಮತ್ತು ಒಗ್ಗಟ್ಟಿನ ಆರಂಭವಾಗಿದೆ. ನಮ್ಮ ವಿಶೇಷ ದಿನದಂದು ನಿಮ್ಮೆಲ್ಲರ ಆಶೀರ್ವಾದ ಮತ್ತು ಶುಭಾಶಯಗಳು ಬೇಕು" ಎಂದಿದ್ದಾರೆ.ರ ವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅವರ ಇತ್ತೀಚಿನ ಚಿತ್ರ 'ಪಾಟ್ನಾ ಶುಕ್ಲಾ'ದಲ್ಲಿ ಕೆಲಸ ಮಾಡುವಾಗ ಅರ್ಬಾಜ್ ಖಾನ್ ಮತ್ತು ಶುರಾ ಖಾನ್ ನಡುವೆ ಪ್ರೇಮಾಂಕುರವಾಗಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











