ತನ್ನ ಕಾರಿನಲ್ಲಿ ಅಪರಿಚಿತ ವ್ಯಕ್ತಿ ಕಂಡು ಬೆಚ್ಚಿ ಬಿದ್ದ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ; ಕೋಲ್ಕತ್ತಾದಲ್ಲಿ ಹೈಡ್ರಾಮಾ

ತಮ್ಮ ನೆಚ್ಚಿನ ತಾರೆಯನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಹಿಂದೆ ಹಲವರು ಹವಣಿಸುತ್ತಿದ್ದ ಕಾಲವೊಂದಿತ್ತು. ಆ ಕಾಲದಲ್ಲಿ ಆಟೋಗ್ರಾಫ್ ಸಿಕ್ಕರೆ ಅಭಿಮಾನಿಯ ಪಾಲಿಗೆ ಅದೇ ದೊಡ್ಡ ಸಾಧನೆ. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಭಿಮಾನ ಅಪಾಯಕಾರಿ ಹಂತ ತಲುಪಿದೆ. ಹೇಗಾದರೂ ಮಾಡಿ ಸೆಲ್ಫಿ ಕ್ಲಿಕಿಸಿಕೊಂಡು, ಆ ಫೋಟೊವನ್ನು ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದರೆ ಜನ್ಮ ಸಾರ್ಥಕ ಎನ್ನುವ ಮನೋಭಾವ ಹೆಚ್ಚಾಗಿದೆ.

ಈ ಸೆಲ್ಫಿ ವ್ಯಾಮೋಹ ಇಲ್ಲಿಗೆ ಮುಗಿಯುವುದಿಲ್ಲ. ಹಲವರು ಅಭಿಮಾನದ ಬೋರ್ಡ್ ನೇತಾಕಿಕೊಂಡು ಸೆಲಿಬ್ರಿಟಿಗಳ ವೈಯಕ್ತಿಕ ಬದುಕಿನಲ್ಲಿ ನುಗ್ಗುವ ಪ್ರಯತ್ನವನ್ನು ಕೂಡ ಮಾಡುತ್ತಾರೆ. ತಮ್ಮ ಹುಚ್ಚುತನದಿಂದ ಆತಂಕದ ವಾತಾವರಣ ನಿರ್ಮಾಣ ಮಾಡುತ್ತಾರೆ. ಉದಾಹರಣೆಗೆ ಅರ್ಬಾಜ್ ಖಾನ್ ಅವರ ವೈರಲ್ ವಿಡಿಯೋವನ್ನೇ ತೆಗೆದುಕೊಳ್ಳಿ.

Arbaaz Khan Car Security Breach Video Kolkata

ಹೌದು, ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಕೋಲ್ಕತ್ತಾದಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಅರ್ಬಾಜ್ ಖಾನ್ ಬರುತ್ತಿರುವ ಸುದ್ದಿಯನ್ನು ಕೇಳಿ ಅಲ್ಲಿ ಜನ ಕೂಡ ಬಂದು ಸೇರಿದ್ದರು. ಅಲ್ಲಿದ್ದವರಲ್ಲಿ ಬಹುತೇಕರಲ್ಲಿ ಎಲ್ಲರಿಗೂ ಸೆಲ್ಫಿ ಕ್ಲಿಕಿಸಿಕೊಳ್ಳಬೇಕೆಂಬ ಬಯಕೆ ಇದ್ದಂತೆ ಇತ್ತು.

ಆದರೆ ಒಬ್ಬ ವ್ಯಕ್ತಿಯ ಕಣ್ಣು ಮಾತ್ರ ಅರ್ಬಾಜ್ ಖಾನ್ ಅವರ ಕಾರಿನ ಮೇಲಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಅರ್ಬಾಜ್ ಖಾನ್‌ ಕಾರಿನಲ್ಲಿ ಅಪರಿಚತ ವ್ಯಕ್ತಿಯೊಬ್ಬ ಕುಂತಿದ್ದಾನೆ. ತನ್ನ ಕಾರಿನಲ್ಲಿ ಅಪರಿಚತ ವ್ಯಕ್ತಿ ಕುಳಿತಿರುವುದನ್ನು ಕಂಡು ಅರ್ಬಾಜ್ ಖಾನ್ ಅಕ್ಷರಶಃ ಬೆಚ್ಚಿ ಬಿದ್ದಿದ್ಧಾರೆ.

ಹಾಗೇ ನೋಡಿದರೆ ಅರ್ಬಾಜ್ ಖಾನ್ ಅವರ ಸುರಕ್ಷತೆಗಾಗಿ ಅಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಅರ್ಬಾಜ್ ಖಾನ್ ಅವರ ವೈಯಕ್ತಿಕ ಬಾಡಿಗಾರ್ಡ್‌ಗಳು ಕೂಡ ಇದ್ದರು. ಆದಾಗ್ಯೂ ಆ ವ್ಯಕ್ತಿ ಕಾರಿನ ಬಳಿ ಹೋಗಿದ್ಹೇಗೆ..? ಒಳಗಡೆ ಕುಳಿತಿದ್ದು ಹೇಗೆ..? ಎನ್ನುವ ಪ್ರಶ್ನೆಗೆ ಅಲ್ಲಿದ್ದ ಭದ್ರತಾ ಸಿಬ್ಬಂದಿಯ ಹತ್ತಿರ ಕೂಡ ಇರಲಿಕ್ಕಿಲ್ಲ.

ಇನ್ನು ಕಾರಿನಲ್ಲಿ ಕುಳಿತುಕೊಳ್ಳುವುದಲ್ಲದೇ, ವ್ಯಕ್ತಿ ಹೊರಗಡೆ ಬರಲು ನಿರಾಕರಿಸಿದ್ದಾನೆ. ಸಹನೆಯನ್ನು ಕಳೆದುಕೊಂಡ ಬಾಡಿಗಾರ್ಡ್‌ಗಳು ವ್ಯಕ್ತಿಯನ್ನು ಹೊರಗಡೆ ಎಳೆದು ಥಳಿಸಿದ್ದಾರೆ. ಆದರೂ ಕೂಡ ಅಲ್ಲಿಂದ ವ್ಯಕ್ತಿ ಕದಲಲಿಲ್ಲ.

arbaaz-khan-car-security-breach-video-kolkata

ಬದಲಿಗೆ ಬಾಡಿಗಾರ್ಡ್‌ಗಳ ಜೊತೆ ಜಗಳಕ್ಕಿಳಿದಿದ್ದಾನೆ. ಬೌನ್ಸರ್ ಗಳನ್ನೇ ತಳ್ಳುವ ಪ್ರಯತ್ನ ಮಾಡಿದ್ದಾನೆ. ಕಾರಿನ ಬಳಿ ಮತ್ತೆ ಹೋಗುವ ಪ್ರಯತ್ನ ಮಾಡಿದ್ಧಾನೆ. ಇದರಿಂದ ಕೆರಳಿದ ಭದ್ರತಾ ಸಿಬ್ಬಂದಿಗಳು ವ್ಯಕ್ತಿಯನ್ನು ಹಿಡಿದು ಬಾರಿಸಿದ್ದಾರೆ.

ವ್ಯಕ್ತಿಯ ಈ ವರ್ತನೆಯಿಂದ ಅಲ್ಲಿ ನೆರೆದಿದ್ದ ಅಭಿಮಾನಿಗಳು ಮತ್ತು ಸಾರ್ವಜನಿಕರು ಕೂಡ ಕೆರಳಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ಅಲ್ಲಿನ ಜನ ಅವನನ್ನು ಬಿಡಬೇಡಿ, ಹೊಡೆಯಿರಿ ಎಂದು ಕಿರಚುತ್ತಿರುವುದನ್ನು ಕೇಳಬಹುದು.

ಆ ನಂತರ ಅಲ್ಲಿಯೇ ಗಾಬರಿಯಿಂದ ಇದೆಲ್ಲವನ್ನು ನೋಡುತ್ತಿದ್ದ ಅರ್ಬಾಜ್ ಖಾನ್ ಅವರನ್ನು ಬಾಡಿಗಾರ್ಡ್‌ಗಳು ಕಾರಿನತ್ತ ಕರೆದೊಯ್ದಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಹಲವರು ಸೆಲಿಬ್ರಿಟಿಗಳ ಸುರಕ್ಷತೆಯ ಕುರಿತು ಪ್ರಶ್ನೆ ಮಾಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಾಡಿಗಾರ್ಡ್‌ಗಳನ್ನು ಇಟ್ಟುಕೊಂಡಿದ್ದರೂ ಇಷ್ಟು ಸುಲಭವಾಗಿ ಅಪರಿಚಿತ ವ್ಯಕ್ತಿ ನಟನ ಕಾರಿನೊಳಗೆ ಹೇಗೆ ನುಗ್ಗಲು ಸಾಧ್ಯ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಅಭಿಮಾನ ಮತ್ತು ಅಂಧಾಭಿಮಾನದ ನಡುವೆ ಇರುವ ವ್ಯತ್ಯಾಸದ ಕುರಿತು ಕೂಡ ಚರ್ಚೆ ಮಾಡುತ್ತಿದ್ದಾರೆ.

ಒಟ್ನಲ್ಲಿ ಸದ್ಯ ಕೋಲ್ಕತ್ತಾದಲ್ಲಿ ನಡೆದ ಈ ಘಟನೆ ಸದ್ಯ ಚರ್ಚೆಗೆ ಗ್ರಾಸವಾಗಿದ್ದು, ಇಂದಿನ ಹುಚ್ಚು ಅಭಿಮಾನದ ಮುಂದೆ ಸೆಲೆಬ್ರಿಟಿ ಭದ್ರತಾ ವ್ಯವಸ್ಥೆ ಕೂಡ ದುರ್ಬಲವಾಗುತ್ತೆ ಎನ್ನುವುದಕ್ಕೆ ಈ ಘಟನೆಯೇ ಕೈಗನ್ನಡಿ ಎಂಬ ಅಭಿಪ್ರಾಯ ಕೂಡ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

English summary
Shocking viral video captures the terrifying moment an intruder breaches security and forces his way into Arbaaz Khan’s car in Kolkata. Watch the chaos unfold.
Read more about: arbaaz khan viral video fans
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X