ಮಾಜಿ ಪತ್ನಿ ಮಲೈಕಾ ಮದುವೆ ಬಗ್ಗೆ ಅರ್ಬಾಜ್ ಖಾನ್ ಹೇಳಿದ್ದೇನು?

ಬಾಲಿವುಡ್ ನಲ್ಲೀಗ ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಮದುವೆ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. 45 ವರ್ಷದ ನಟಿ ಮಲೈಕಾ 33 ವರ್ಷದ ಅರ್ಜುನ್ ಕಪೂರ್ ಜೊತೆ ಕಳೆದ ಎರಡು ಮೂರು ವರ್ಷಗಳಿಂದ ಓಡಾಡಿಕೊಂಡಿದ್ದರು.

ಇಬ್ಬರ ಸಂಬಂಧದ ಬಗ್ಗೆ ಕೇಳಿದ್ರೆ ಬೆಸ್ಟ್ ಫ್ರೆಂಡ್ಸ್ ಅಂತ ಹೇಳಿಕೊಂಡು ಸುತ್ತಾಡುತ್ತಿದ್ದ ಈ ಜೋಡಿ ಈಗ ಮದುವೆವರೆಗೂ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ, ಮಲೈಕಾಗೆ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜೊತೆ 1998 ರಲ್ಲಿ ವಿವಾಹವಾಗಿದೆ.

ಸುಮಾರು 18 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಎಳ್ಳು-ನೀರು ಬಿಡುವ ಮೂಲಕ 2017ರಲ್ಲಿ ಅರ್ಬಾಜ್ ಖಾನ್ ಗೆ ವಿಚ್ಛೇದನ ನೀಡಿ ಮಲೈಕಾ ಪತಿಯಿಂದ ದೂರವಾಗಿದ್ದರು. ನಂತರ ಅರ್ಜುನ್ ಕಪೂರ್ ಜೊತೆ ಗೆಳೆತನ ಮಾಡಿ, ಪಾರ್ಟಿ, ಫಂಕ್ಷನ್ ಅಂತ ಸುತ್ತಾಡುತ್ತಿದ್ದರು.

Arbaaz Khan react about ex wife Malaika Arora wedding rumours

ಮಾಜಿ ಪತ್ನಿ ಮಲೈಖಾ ಅರೋರಾ ಮತ್ತು ಅರ್ಜುನ್ ಮದುವೆ ಬಗ್ಗೆ ಅರ್ಬಾಜ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಅರ್ಬಾಜ್ ಖಾನ್ ಸರಿಯಾಗಿ ಉತ್ತರಿಸದೆ ಜೋಕ್ ಮಾಡಿ ಸುಮ್ಮನಾಗಿದ್ದಾರೆ. ಅರ್ಬಾಜ್ ಜೋರಾಗಿ ನಗುತ್ತಲೇ 'ಈ ಪ್ರಶ್ನೆಯನ್ನು ಕೇಳಬೇಕೆಂದು ರಾತ್ರಿಯಿಂದಲೇ ಪ್ಲಾನ್ ಮಾಡಿಕೊಂಡಿದ್ದೀರಾ, ನನಗೂ ಉತ್ತರ ಹೇಳಲು ಒಂದು ದಿನ ಟೈಮ್ ಬೇಕು, ಈಗ ಊಟದ ಸಮಯವಾಗಿದೆ ಹೋಗೋಣ' ಎಂದು ನಗುತ್ತಲೇ ಉತ್ತರಿಸಿದ್ದಾರೆ.

ಮಲೈಕಾ ಮತ್ತು ಅರ್ಜುನ್ ಕಪೂರ್ ಇದೇ ತಿಂಗಳು 19 ರಂದು ವಿವಾಹವಾಗುತ್ತಿದ್ದಾರಂತೆ. ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರು ಮದುವೆಯಾಗುತ್ತಿದ್ದು ತೀರಾ ಆಪ್ತರಿಗೆ ಮಾತ್ರ ಆಹ್ವಾನ ನೀಡಿದ್ದಾರಂತೆ.

ನಟಿ ಕರೀನಾ ಕಪೂರ್, ಕರೀಶ್ಮಾ ಕಪೂರ್, ದೀಪಿಕಾ ಪಡುಕೋಣೆ ದಂಪತಿ ಸೇರಿದಂತೆ ಕೆಲವೇ ಕೆಲವರಿಗೆ ಮಾತ್ರ ಅರ್ಜುನ್-ಮಲೈಕಾ ಅರೋರ ಮದುವೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ ಮದುವೆ ವಿಚಾರವಾಗಿ ಗೌಪ್ಯತೆ ಕಾಪಾಡುವಂತೆ ಆಪ್ತರಿಗೆ ಮನವಿ ಮಾಡಿದ್ದಾರಂತೆ.

More from Filmibeat

English summary
Bollywood actor Arbaaz Khan has react about his ex wife Malaika Arora and Arjun Kapoor wedding rumours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X