ಸಲ್ಮಾನ್ ಕುಟುಂಬದ ವಿರುದ್ಧ 'ದಬಾಂಗ್' ನಿರ್ದೇಶರ ಆರೋಪ: ಅರ್ಬಾಜ್ ಖಾನ್ ಪ್ರತಿಕ್ರಿಯೆ
ಸಲ್ಮಾನ್ ಖಾನ್ ಕುಟುಂಬ್ಥರು ತನ್ನ ವೃತ್ತಿ ಜೀವನವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಹಾಕಿದ್ದಾರೆ. 2010ರಲ್ಲಿ ರಿಲೀಸ್ ಆದ ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಅಭಿನವ್ ಸಿಂಗ್, ಈ ಸಿನಿಮಾ ನಂತರ ಜೀವನ ಹಾಳುಮಾಡಿದ್ದಾರೆ ಎಂದು ದೂರಿದ್ದಾರೆ.
ಅಭಿನವ್ ಕಶ್ಯಪ್ ಹೇಳಿಕೆಗೆ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಖಾಸಗಿ ಪತ್ರಿಕೆಯೊಂದರ ಜೊತೆ ಮಾತನಾಡಿದ ಅರ್ಬಾಜ್ ಖಾನ್ "ನಾವು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.
ಈ ಹಿಂದೆ ಅಭಿನವ್ ಹೇಳುತ್ತಿರುವುದೆ ಬೇರೆ. ಆದರೀಗ ಹೇಳುತ್ತಿರುವುದೆ ಒಂದು ಎಂದಿದ್ದಾರೆ. ಈ ಹಿಂದೆ ಅಭಿನವ್ ಸಂದರ್ಶನಗಳಲ್ಲಿ ಮಾತಾಡಿದ ಕೆಲವು ಹೇಳಿಕೆಗಳನ್ನು ಅರ್ಬಾಜ್ ಹಂಚಿಕೊಂಡಿದ್ದಾರೆ. ದಬಾಂಗ್ ಸಿನಿಮಾದ ನಂತರ ಅಭಿನವ್ ಪಾರ್ಟ್-2 ಮಾಡಲು ಮನಸ್ಸಿರಲಿಲ್ಲ ಎಂದು ಹೇಳಿಕೊಂಡಿದ್ದರು. ಎಂದು ಅಭಿನವ್ ಹೇಳಿದ ಮಾತನ್ನು ನೆನಪಿಸಿದ್ದಾರೆ.

ಮತ್ತೊಂದು ಸಂದರ್ಶನದಲ್ಲಿ ಅಭಿನವ್, ದಬಾಂಗ್ ನಂತರ ಪಾರ್ಟ್-2 ಮಾಡಿದರೆ, ದಬಾಂಗ್ ಸರಣಿಯಿಂದ ಹೊರಬರಲು ಸಾಧ್ಯವಿಲ್ಲ. ನಂತರ ಪಾರ್ಟ್-3 ಮಾಡಬೇಕಾಗುತ್ತೆ. ನಾನು ಉತ್ತಮವಾಗಿ ಸಿನಿಮಾ ಮಾಡುತ್ತಿರುವವರೆಗೂ ದಬಾಂಗ್ ಸರಣಿ ಮಾಡಬೇಕಾಗುತ್ತೆ.ಉತ್ತಮವಾಗಿ ಕಾರ್ಯನಿರ್ವಹಿಸದಿದ್ದರೆ ಯಾರು ನನಗೆ ಅವಕಾಶ ನೀಡುವುದಿಲ್ಲ. ದಬಾಂಗ್-2 ಮಾಡುವ ಬಗ್ಗೆ ಅರ್ಬಾಜ್ ಖಾನ್ ಗಂಭೀರವಾಗಿದ್ದಾರೆ. ನನಗಾಗಿ ಕಾಯಬೇಡಿ ಎಂದು ಹೇಳಿದ್ದೇನೆ, ಎಂದು ಅಭಿನವ್ ಹೇಳಿರುವ ಮಾತನ್ನು ಅರ್ಬಾಜ್ ನೆನಪಿಸಿಕೊಂಡಿದ್ದಾರೆ.
ಅಭಿನವ್ ಕಶ್ಯಪ್, ಸಲ್ಮಾನ್ ಖಾನ್ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ. "ನನ್ನ ಎಲ್ಲಾ ಯೋಜನೆಗಳು ಮತ್ತು ಸೃಜನಶೀಲ ಪ್ರಯತ್ನಗಳನ್ನು ಹಾಳುಮಾಡಿದ್ದಾರೆ. ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾರೆ. ಕುಟುಂಬದ ಮಹಿಳಾ ಸದ್ಯರಿಗೆ ಪದೇ ಪದೇ ಅತ್ಯಾಚಾರ ಬೆದರಿಕೆಯೊಡ್ಡಿದ್ದಾರೆ. ಇದು ನನ್ನ ಮಾನಸಿಕ ನೆಮ್ಮದಿ ಮತ್ತು ಕುಟುಂಬದ ಆರೋಗ್ಯವನ್ನು ನಾಶಪಡಿಸಿದೆ. ಇದು ನನ್ನ ವಿಚ್ಛೇದನ ಮತ್ತು ಕುಟುಂಬ ಒಡೆಯಲು ಕಾರಣವಾಗಿದೆ" ಎಂದು ಅಭಿನವ್, ಸಲ್ಮಾನ್ ಖಾನ್ ವಿರುದ್ಧ ಆರೋಪ ಮಾಡಿದ್ದರು.


Click it and Unblock the Notifications











