ಸಲ್ಮಾನ್ ಖಾನ್ ಕುಟುಂಬದ ರಿಯಲ್ ಎಸ್ಟೇಟ್ ವ್ಯಾಪಾರ ; 11ವರ್ಷದ ಹಿಂದಿನ ಮನೆ ಮಾರಿ 3 ಕೋಟಿ ಲಾಭ ಗಳಿಸಿದ ಅರ್ಬಾಜ್ ಖಾನ್

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಟಾರ್‌ಗಳು ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ.

ಕೆಲವರು ಬಟ್ಟೆ ಮಾರಿದರೆ.. ಇನ್ನು ಕೆಲವರು ಮೇಕಪ್ ಕಿಟ್ ಮಾರುತ್ತಿದ್ದಾರೆ. ಕೆಲವರು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದರೆ ಮತ್ತೂ ಕೆಲವರು ಜನರಿಗೆಲ್ಲ ಎಣ್ಣೆ ಹೊಡೆಸಿ ದುಡ್ಡು ಮಾಡುತ್ತಿದ್ಧಾರೆ. ತಮ್ಮದೇ ವಿಸ್ಕಿ ಬ್ರ್ಯಾಂಡ್‌ಗಳನ್ನು ಶುರು ಮಾಡಿದ್ದಾರೆ. ಮತ್ತೂ ಕೆಲವರು ಕೆಲವರು ಹೊಟೇಲ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಉಳಿದವರು ರಿಯಲ್ ಎಸ್ಟೇಟ್‌ ವ್ಯಾಪಾರಕ್ಕಿಳಿದಿದ್ದಾರೆ ಉದಾಹರಣೆಗೆ ಸಲ್ಮಾನ್ ಖಾನ್ ಕುಟುಂಬ.

Arbaaz Khan s Real Estate Masterclass Flips Andheri Flat for 6 5 Cr After Strategic 2 78 Cr Buy

ಹೌದು, ಕೆಲ ದಿನಗಳ ಹಿಂದೆಯಷ್ಟೇ ಸಲ್ಮಾನ್ ಖಾನ್ ಅವರ ಸಹೋದರ ಸೊಹೈಲ್ ಖಾನ್ ಮುಂಬೈನಲ್ಲಿನ ತಮ್ಮ ಅಂಧೇರಿ ಕಚೇರಿಯನ್ನು ₹5.90 ಕೋಟಿಗೆ ಮಾರಿದ್ದರು. ಇನ್ನು.. ಸಲ್ಮಾನ್ ಖಾನ್ ಸಹೋದರಿ ಅಲ್ವಿರಾ ಗಂಡ ಮತ್ತು ನಿರ್ದೇಶಕ ಅತುಲ್ ಅಗ್ನಿಹೋತ್ರಿ ''ಶಿವಸಾಯಿ ಹೋಮ್ ಮೇಕರ್ ಇನ್ಫ್ರಾ'' ಎಂಬ ಸಂಸ್ಥೆಯನ್ನೇ ಶುರು ಮಾಡಿದ್ದಾರೆ. ತಮ್ಮ ಈ ಸಂಸ್ಥೆಯ ಮೂಲಕ ಬಾಂದ್ರಾ ಭಾಗದಲ್ಲಿನ ಹಳೆಯ ಬಿಲ್ಡಿಂಗ್‌ಗಳ ಪುನರಾಭಿವೃದ್ದಿ ವ್ಯವಹಾರ ಮಾಡುತ್ತಿದ್ದಾರೆ.

ಸಲ್ಮಾನ್ ಅವರ ತಂಗಿ ಅರ್ಪಿತಾ, ಮುಂಬೈನ ಖಾರ್ ಭಾಗದಲ್ಲಿರುವ ತಮ್ಮ ಐಷಾರಾಮಿ ಮನೆಯನ್ನು ಬರೋಬ್ಬರಿ ₹22 ಕೋಟಿಗೆ ಹಿಂದೆ ಮಾರಾಟ ಮಾಡಿದ್ದರು. 3,000 ಚದರ ಅಡಿ ವಿಸ್ತೀರ್ಣದ ಈ ಫ್ಲ್ಯಾಟ್ ಮುಂಬೈನ ಅತ್ಯಂತ ದುಬಾರಿ ಡೀಲ್‌ಗಳಲ್ಲಿ ಒಂದಾಗಿತ್ತು.

ಖುದ್ದು ಸಲ್ಮಾನ್ ಖಾನ್ ಕೂಡ ಬಾಂದ್ರಾದಲ್ಲಿದ್ದ ತಮ್ಮ ಒಂದು ಹಳೆಯ ಫ್ಲ್ಯಾಟ್‌ನ ಕಳೆದ ವರ್ಷ ಸುಮಾರು ₹5.35 ಕೋಟಿಗೆ ಮಾರಾಟ ಮಾಡಿದ್ದರು. ಇನ್ನು ಮುಂಬೈನ ಸಾಂತಾಕ್ರೂಜ್‌ನಲ್ಲಿ ಸಲ್ಮಾನ್ ಖಾನ್ ಒಡೆತನದ ಕಮರ್ಷಿಯಲ್ ಕಾಂಪ್ಲೆಕ್ಸ್ ಇದೆ. ಈ ಕಾಂಪ್ಲೆಕ್ಸ್‌ದಿಂದನೇ ಪ್ರತಿ ತಿಂಗಳು ₹1 ಕೋಟಿಗೂ ಹೆಚ್ಚಿನ ಹಣ ಸಲ್ಮಾನ್ ಖಾನ್ ಕೈ ಸೇರುತ್ತೆ.

ಇವರಲ್ಲದೇ ಸಲ್ಮಾನ್ ಖಾನ್ ಅವರ ಇನ್ನೊಬ್ಬ ಸಹೋದರ ಅರ್ಬಾಜ್ ಖಾನ್ ಕೂಡ ಮನೆಯನ್ನು ಕಡಿಮೆ ಬೆಲೆಗೆ ಕೊಂಡು ದೊಡ್ಡ ಮೊತ್ತಕ್ಕೆ ಮಾರುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ತೀರಾ ಇತ್ತೀಚೆಗಷ್ಟೇ ಅಂದರೆ ಫೆಬ್ರವರಿ 2026ರಲ್ಲಿ ಮುಂಬೈನ ಜೋಗೇಶ್ವರಿ ವೆಸ್ಟ್‌ನಲ್ಲಿರುವ ಹೊಸ ಅಪಾರ್ಟ್‌ಮೆಂಟ್ ''ಆಟೋಗ್ರಾಫ್ ರೆಸಿಡೆನ್ಸಿ''ಯಲ್ಲಿ ಅರ್ಬಾಜ್ ಖಾನ್ 2.78 ಕೋಟಿ ರೂಪಾಯಿ ಮೌಲ್ಯದ ಫ್ಲ್ಯಾಟ್ ಖರೀದಿ ಮಾಡಿದ್ದರು.

Arbaaz Khan s Real Estate Masterclass Flips Andheri Flat for 6 5 Cr After Strategic 2 78 Cr Buy

ಲಿಂಕ್ ರೋಡ್‌ನಲ್ಲಿರುವ ಈ ಅಪಾರ್ಟ್‌ಮೆಂಟ್‌ನ 27ನೇ ಫ್ಲೋರ್ ನಲ್ಲಿರುವ 1,243 ಚದರ ಅಡಿ ವಿಸ್ತೀರ್ಣ ಹೊಂದಿರುವ ಮನೆ ತಮ್ಮದಾಗಿಸಿಕೊಂಡಿದ್ದರು. ದಾಖಲೆಗಳ ಪ್ರಕಾರ ಪ್ರತಿ ಚದರ ಅಡಿಗೆ ₹22,000 ಹಣ ನೀಡಿ ಖರೀದಿಸಿದ್ದರು. ಈಗ ಹೊಸ ಮನೆ ಖರೀದಿಸಿದ ಬೆನ್ನಲ್ಲೇ ಅರ್ಬಾಜ್ ಖಾನ್ ಮುಂಬೈನ ಅಂಧೇರಿಯಲ್ಲಿದ್ದ ತಮ್ಮ ಹಳೆಯ ಫ್ಲ್ಯಾಟ್‌ ನ ₹6.5 ಕೋಟಿಗೆ ಮಾರಿದ್ದಾರೆ. ಈ ಮೂಲಕ ₹3 ಕೋಟಿಗೂ ಹೆಚ್ಚಿನ ಲಾಭ ಗಳಿಸಿದ್ದಾರೆ.

ಹೌದು, ಅಸಲಿಗೆ 2015ರ ಮೇನಲ್ಲಿ ಅಂಧೇರಿಯ ಲೋಖಂಡವಾಲ ಕಾಂಪ್ಲೆಕ್ಸ್‌ನಲ್ಲಿರುವ ''ರನ್ವಾಲ್ ಎಲಿಗಾಂಟೆ'' ಯ ಬಿ-ಟವರ್‌ನಲ್ಲಿ ಅರ್ಬಾಜ್ ಖಾನ್ ಫ್ಲ್ಯಾಟ್ ಖರೀದಿ ಮಾಡಿದ್ದರು. ಎರಡು ಪಾರ್ಕಿಂಗ್ ಸ್ಥಳಗಳನ್ನೊಳಗೊಂಡಿದ್ದ ಈ ಫ್ಲ್ಯಾಟ್ 1,369 ಚದರ ಅಡಿ ವಿಸ್ತೀರ್ಣ ಹೊಂದಿತ್ತು. ಇದಕ್ಕೆ 16.92 ಲಕ್ಷ ಸ್ಟ್ಯಾಂಪ್ ಡ್ಯೂಟಿಯನ್ನು ಅರ್ಬಾಜ್ ಖಾನ್ ಪಾವತಿ ಮಾಡಿದ್ದರು. ಆ ಕಾಲದಲ್ಲಿ ₹3.38 ಕೋಟಿಗೆ ಖರೀದಿಸಿದ್ದರು.

ಈಗ ಹನ್ನೊಂದು ವರ್ಷದ ನಂತರ ಅರ್ಬಾಜ್ ಖಾನ್ ಈ ಫ್ಲ್ಯಾಟ್‌ನ ಮಾರಿದ್ದಾರೆ. ''ಸಿಆರ್‌ಇ ಮ್ಯಾಟ್ರಿಕ್ಸ್‌''ನ ನೋಂದಣಿ ದಾಖಲೆಗಳ ಪ್ರಕಾರ ತಮ್ಮ ಫ್ಲ್ಯಾಟ್‌ನ ಅರ್ಬಾಜ್ ಖಾನ್ ₹6.5 ಕೋಟಿಗೆ ಮಾರಾಟ ಮಾಡಿದ್ದು ಖರೀದಿದಾರರು ಇದಕ್ಕೆ ₹39 ಲಕ್ಷ ಸ್ಟ್ಯಾಂಪ್ ಡ್ಯೂಟಿಯನ್ನು ಪಾವತಿಸಿದ್ದಾರೆ.

ಹೀಗೆ ಒಂದು ಕಡೆ ಹೊಸ ಆಸ್ತಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ, ಹಳೆಯ ಆಸ್ತಿಯನ್ನು ದೊಡ್ಡ ಮೊತ್ತಕ್ಕೆ ಮಾರುವ ಮೂಲಕ ಅರ್ಬಾಜ್ ಖಾನ್ ಲಾಭ ಗಳಿಸಿದ್ದಾರೆ. ಸಿನಿಮಾದಲ್ಲಿ ಸೋತಿರಬಹುದು ಆದರೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಾನು ''ದಬಾಂಗ್'' ಎನ್ನುವುದನ್ನು ರುಜುವಾತು ಮಾಡಿದ್ದಾರೆ.

ಅಂದ್ಹಾಗೇ ಮುಂಬೈನ ಪಶ್ಚಿಮ ಉಪನಗರಗಳಾದ ಅಂಧೇರಿ ಮತ್ತು ಜೋಗೇಶ್ವರಿ ಯಾವಾಗಲೂ ಬಾಲಿವುಡ್ ತಾರೆಯರ ನೆಚ್ಚಿನ ತಾಣ. ಮೆಟ್ರೋ ಸಂಪರ್ಕ ಮತ್ತು ಅತ್ಯಾಧುನಿಕ ಜೀವನಶೈಲಿಯಿಂದಾಗಿ ಇಲ್ಲಿನ ಆಸ್ತಿ ಬೆಲೆಗಳು ಗಗನಕ್ಕೇರುತ್ತಿವೆ. ಅರ್ಬಾಜ್ ಖಾನ್ ಈ ಅವಕಾಶವನ್ನು ಸರಿಯಾದ ಸಮಯದಲ್ಲಿ ಬಳಸಿಕೊಂಡಿದ್ದಾರೆ. ಲಾಭ ಗಳಿಸಿದ್ದಾರೆ.

English summary
Arbaaz Khan is making major moves! Discover how the actor turned a strategic real estate play into a massive ₹6.5 crore payday in Andheri, just months after his latest property acquisition. Read the full details of this multi-crore Mumbai flip here!
Read more about: business real estate arbaaz khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X