For Quick Alerts
  ALLOW NOTIFICATIONS  
  For Daily Alerts

  ಮಲೈಕಾ ಆರೋರಾಗೆ ಮೊದಲ ಪತಿಯಿಂದ ಸಿಕ್ತು ವಿಶೇಷ ಉಡುಗೊರೆ; ಏನದು?

  |

  ಬಾಲಿವುಡ್ ನ ಹಾಟ್ ನಟಿ ಮತ್ತು ಡಾನ್ಸರ್ ಮಲೈಕಾ ಅರೋರಾ ಯಾರಿಗೆ ತಾನೆ ಗೊತ್ತಿಲ್ಲ. ಮೊದಲ ಪತಿ ಅರ್ಬಾಜ್ ಖಾನ್ ರಿಂದ ವಿಚ್ಛೇದನ ಪಡೆದು ನಟ ಅರ್ಜುನ್ ಕಪೂರ್ ಜೊತೆ ಪ್ರೀತಿಯಲ್ಲಿರುವ ಮಲೈಕಾ ಸದಾ ಸುದ್ದಿಯಲ್ಲಿರುತ್ತಾರೆ. ಅರ್ಜುನ್ ಕಪೂರ್ ಜೊತೆ ಆಗಾಗ ಕಾಣಿಸಿಕೊಳ್ಳುವ ಮಲೈಕಾಗೆ ಮೊದಲ ಪತಿಯಿಂದ ವಿಶೇಷವಾದ ಉಡುಗೊರೆ ಸಿಕ್ಕಿದೆ.

  ಅರ್ಬಾಜ್ ಖಾನ್ ರಿಂದ ದೂರ ಆದರೂ ಮಲೈಕಾ ಮೊದಲ ಪತಿ ಜೊತೆಗೆ ಉತ್ತಮ ಸ್ನೇಹ ಉಳಿಸಿಕೊಂಡಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಅರ್ಬಾಜ್ ಕಳುಹಿಸಿರುವ ಗಿಫ್ಟ್. ಇದೀಗ ಮಾವಿನ ಹಣ್ಣಿನ ಸೀಸನ್ ಪ್ರಾರಂಭವಾಗಿದೆ, ಅರ್ಬಾಜ್ ತನ್ನ ಮೊದಲ ಪತ್ನಿಗೆ ಒಂದು ಬಾಕ್ಸ್ ಮಾವಿನ ಹಣ್ಣನ್ನು ಗಿಫ್ಟ್ ಕಳುಹಿಸಿ ಸರ್ಪ್ರೈಸ್ ನೀಡಿದ್ದಾರೆ.

  ಫೋಟೋ ವೈರಲ್: ಹಸಿರು ಬಣ್ಣದ ಉಡುಪು ತೊಟ್ಟು ಹಾಟ್ ಅವತಾರದಲ್ಲಿ ಮಿಂಚಿದ ನಟಿ ಮಲೈಕಾಫೋಟೋ ವೈರಲ್: ಹಸಿರು ಬಣ್ಣದ ಉಡುಪು ತೊಟ್ಟು ಹಾಟ್ ಅವತಾರದಲ್ಲಿ ಮಿಂಚಿದ ನಟಿ ಮಲೈಕಾ

  ಈ ಬಗ್ಗೆ ಸ್ವತಃ ಮಲೈಕಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಮಾವಿನ ಹಣ್ಣನ್ನು ಉಡುಗೊರೆ ಕೊಟ್ಟ ಅರ್ಬಾಜ್ ಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ವಿಶೇಷ ಎಂದರೆ ಮಲೈಕಾ ಸಹೋದರಿ ಅಮೃತಾ ಅರೋರಾ ಅವರಿಗೂ ತಾಜಾ ಮಾವಿನಹಣ್ಣನ್ನು ಉಡುಗೊರೆ ನೀಡಿದ್ದಾರೆ.

  ಮಲೈಕಾ ಮತ್ತು ಅರ್ಬಾಜ್ ಖಾನ್ 1998ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟದರು. 18 ವರ್ಷಗಳ ಕಾಲ ಸಂಸಾರ ನಡೆಸಿದ್ದ ಈ ಜೋಡಿ 2016ರಲ್ಲಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರುವ ಮೂಲಕ ಇಡೀ ಬಾಲಿವುಡ್ ಗೆ ಶಾಕ್ ನೀಡಿದ್ದರು. 2017ರಲ್ಲಿ ಇಬ್ಬರು ಬೇರೆ ಬೇರೆ ಆಗಿದ್ದಾರೆ. ಈ ದಂಪತಿಗೆ ಅರ್ಹನ್ ಎನ್ನುವ ಮಗನಿದ್ದಾನೆ.

  Yuvarathna film team lands in trouble!

  ವಿಚ್ಛೇದನ ಬಳಿಕ ಮಲೈಕಾ ಬಾಲಿವುಡ್ ನಟ ಅರ್ಜನ್ ಕಪೂರ್ ಜೊತೆ ಪ್ರೀತಿಯಲ್ಲಿದ್ದಾರೆ. ಇಬ್ಬರು ಪ್ರೀತಿ-ಪ್ರೇಮದ ವಿಚಾರ ಗುಟ್ಟಾಗಿ ಉಳಿದಿಲ್ಲ. ಉತ್ತಮ ಸ್ನೇಹಿತರಷ್ಟೆ ಎಂದು ಹೇಳಿಕೊಂಡು ಓಡಾಡುತ್ತಿರುವ ಈ ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿಯು ಇದೆ.

  English summary
  Arbaaz Khan sends mango to his ex wife Malaika Arora.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X