ಸಲ್ಮಾನ್ ಸಹೋದರ ಅರ್ಬಾಝ್ ಗೆ ಸದ್ಯದಲ್ಲೇ ಮತ್ತೊಂದು ಮದುವೆ.?
ಸಲ್ಮಾನ್ ಖಾನ್ ಪ್ರೀತಿಯ ಸಹೋದರ.. ಬಾಲಿವುಡ್ ನಟ.. ನಿರ್ದೇಶಕ.. ನಿರ್ಮಾಪಕ ಅರ್ಬಾಝ್ ಖಾನ್ ಸದ್ಯದಲ್ಲಿಯೇ ಮತ್ತೊಂದು ಮದುವೆ ಆಗಲಿದ್ದಾರೆ ಎಂದು ಬಾಲಿವುಡ್ ತುಂಬಾ ಗುಲ್ಲೆಬ್ಬಿದೆ.
1998 ರಲ್ಲಿ ನಟಿ ಮಲೈಕಾ ಅರೋರ ಖಾನ್ ರನ್ನ ಅರ್ಬಾಝ್ ಖಾನ್ ಮದುವೆ ಆದರು. 17 ವರ್ಷಗಳ ಕಾಲ ಸಂಸಾರ ಮಾಡಿದ ಈ ದಂಪತಿ 2016 ರಲ್ಲಿ ದೂರಾದರು. ಮಲೈಕಾ ಅರೋರ ರಿಂದ ವಿಚ್ಛೇದನ ಪಡೆದ್ಮೇಲೆ, ಅರ್ಬಾಝ್ ಖಾನ್ ಹೆಸರು ಜಾರ್ಜಿಯಾ ಆಂಡ್ರಿಯಾನಿ ಜೊತೆಗೆ ತಳುಕು ಹಾಕಿಕೊಂಡಿದೆ.
ಇತ್ತೀಚಿನ ದಿನಗಳಲ್ಲಂತೂ ಎಲ್ಲಾ ಕಡೆಯೂ ಅರ್ಬಾಝ್ ಖಾನ್ ಹಾಗೂ ಜಾರ್ಜಿಯಾ ಒಟ್ಟಿಗೆ ಹೋಗುತ್ತಿದ್ದಾರೆ. ಮೊನ್ನೆಯಷ್ಟೇ ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ನಡೆದ ಗಣೇಶ ಚತುರ್ಥಿ ಸಂಭ್ರಮದಲ್ಲಿಯೂ ಅರ್ಬಾಝ್ ಜೊತೆಗೆ ಜಾರ್ಜಿಯಾ ಪಾಲ್ಗೊಂಡಿದ್ದರು.

ಜಾರ್ಜಿಯಾ ಬಗ್ಗೆ ಅರ್ಬಾಝ್ ಖಾನ್ ಬಹಿರಂಗವಾಗಿ ಏನೂ ಹೇಳಿಕೆ ಕೊಟ್ಟಿಲ್ಲ. ಆದ್ರೆ, ವರದಿಗಳ ಪ್ರಕಾರ, ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿದೆ. ಜಾರ್ಜಿಯಾ-ಅರ್ಬಾಝ್ ಮದುವೆ ಆಗಲು ತೀರ್ಮಾನಿಸಿದ್ದಾರೆ. ಇತ್ತ ಜಾರ್ಜಿಯಾ ರನ್ನ ಖಾನ್ ಕುಟುಂಬ ಒಪ್ಪಿಕೊಂಡಿದ್ದು ಸದ್ಯದಲ್ಲೇ ಮದುವೆ ನಡೆಯುವ ಸಾಧ್ಯತೆ ಇದೆ.


Click it and Unblock the Notifications











