For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಅಪ್ಪನ ಪ್ರಚಾರದ ಹುಚ್ಚಿಗೆ ಡ್ರಗ್ಸ್ ಪ್ರಕರಣ ಆರೋಪಿ ಹೈರಾಣು

  |

  ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿದೆ. ಎನ್‌ಸಿಬಿಯು ಆರ್ಯನ್ ಖಾನ್ ಅನ್ನು ಬಂಧಿಸಿದ್ದಾಗ ಆರ್ಯನ್ ಬಳಿ ಡ್ರಗ್ಸ್ ಸಿಕ್ಕಿರಲಿಲ್ಲ. ಆದರೆ ಆರ್ಯನ್‌ನ ಗೆಳೆಯ ಅರ್ಬಾಜ್ ಸೇಠ್ ಮರ್ಚೆಂಟ್ ಬಳಿ ತುಸು ಪ್ರಮಾಣದ ಡ್ರಗ್ಸ್ ಪತ್ತೆಯಾಗಿತ್ತು. ಹಾಗಾಗಿ ಆರ್ಯನ್ ಹಾಗೂ ಅರ್ಬಾಜ್ ಅನ್ನು ಎನ್‌ಸಿಬಿ ವಶಕ್ಕೆ ಪಡೆದು ನಂತರ ಬಂಧಿಸಿತ್ತು.

  ಇದೀಗ ಆರ್ಯನ್, ಅರ್ಬಾಜ್ ಸೇರಿ ಕ್ರೂಡೆಲಿಯಾ ಕ್ರೂಸ್ ಶಿಪ್‌ನ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ಎಲ್ಲ ಆರೋಪಿಗಳಿಗೂ ಷರತ್ತುಬದ್ಧ ಜಾಮೀನು ದೊರೆತಿದೆ. ಷರತ್ತಿನಂತೆ ಆರೋಪಿಗಳು ನಿಗದಿತ ಸಮಯದ ವರೆಗೆ ಕಚೇರಿಗೆ ಹೋಗಿ ಸಹಿ ಹಾಕಿ ಬರಬೇಕಿದೆ. ಆರ್ಯನ್ ಖಾನ್ ಸಹ ಇದನ್ನು ಮಾಡುತ್ತಿದ್ದಾರೆ. ಅರ್ಬಾಜ್ ಸೇಠ್ ಮರ್ಚೆಂಟ್ ಸಹ.

  ಇಂದು ಅರ್ಬಾಜ್ ಸೇಠ್ ಮರ್ಚೆಂಟ್ ಎನ್‌ಸಿಬಿ ಕಚೇರಿಗೆ ಬಂದಾಗ ಬಹಳ ತಮಾಷೆಯಾದ ಪ್ರಸಂಗವೊಂದು ನಡೆದಿದೆ. ಅರ್ಬಾಜ್‌ ಮರ್ಚೆಂಟ್‌ನ ತಂದೆ ಅಸ್ಲಾಮ್ ಮರ್ಚೆಂಟ್ ವಕೀಲರಾಗಿದ್ದು, ಅವರೂ ಸಹ ಮಗನೊಟ್ಟಿಗೆ ಎನ್‌ಸಿಬಿ ಕಚೇರಿ ಬಳಿ ಬಂದಿದ್ದರು. ಮಗ ಒಳಗೆ ಹೋದಾಗ ಹೊರಗೆ ತಂದೆ ಅಸ್ಲಂ ಮಾಧ್ಯಮದವರೊಟ್ಟಿಗೆ ಮಾತನಾಡುತ್ತಿದ್ದರು.

  ಮಗ ಅರ್ಬಾಜ್ ಎನ್‌ಸಿಬಿ ಕಚೇರಿಯಿಂದ ಹೊರಗೆ ಬರುತ್ತಿದ್ದಂತೆ ಮಾಧ್ಯಮದವರು ಅರ್ಬಾಜ್‌ನ ಫೋಟೊ ತೆಗೆಯಲು ಆರಂಭಿಸಿದರು. ಆಗ ಅರ್ಬಾಜ್‌ನ ತಂದೆ ಅಸ್ಲಂ, ಮಗನ ತೋಳು ಹಿಡಿದು ಮಾಧ್ಯಮದವರ ಎದುರು ನಿಲ್ಲಿಸಿ, ತಾವೂ ಅವನ ಪಕ್ಕದಲ್ಲಿ ನಿಂತು ಮಾಧ್ಯಮದವರ ಕ್ಯಾಮೆರಾಕ್ಕೆ ನಗುತ್ತಾ ಫೋಸು ಕೊಡಲು ಆರಂಭಿಸಿದರು.

  ಅಪ್ಪನ ಪ್ರಚಾರದ ಹುಚ್ಚು ನೋಡಿ ಅರ್ಬಾಜ್ ಅಲ್ಲೆ ಹಣೆ ಚಚ್ಚಿಕೊಂಡು 'ಅಪ್ಪ ಸಾಕು ಮಾಡು ಇದನ್ನು' ಎನ್ನುತ್ತಾ ಕಾರಿನ ಕಡೆಗೆ ಹೋದರು. ಈ ಎಲ್ಲ ಘಟನೆಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಡ್ರಗ್ಸ್ ಆರೋಪಿ ಮಗನ ಜೊತೆ ಖುಷಿಯಾಗಿ ಕ್ಯಾಮೆರಾಕ್ಕೆ ಫೋಸು ನೀಡುತ್ತಿರುವ ಅಪ್ಪನನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

  ಅರ್ಬಾಜ್ ಸೇಠ್, ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ ಸ್ನೇಹಿತನಾಗಿದ್ದು, ಡ್ರಗ್ಸ್ ಪ್ರಕರಣದಲ್ಲಿ ಇಬ್ಬರೂ ಒಟ್ಟಿಗೆ ಎನ್‌ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದರು. ಜೊತೆಗೆ ಮುನ್‌ಮುನ್‌ ಧಮೇಚಾ ಎಂಬುವರು ಸಹ ಬಂಧನಕ್ಕೆ ಒಳಗಾಗಿದ್ದರು. ಇದೀಗ ಎಲ್ಲರಿಗೂ ಜಾಮೀನು ದೊರೆತಿದೆ. ಆದರೆ ಪ್ರಕರಣದಲ್ಲಿ ಎನ್‌ಸಿಬಿ ಕರ್ತವ್ಯ ಲೋಪ ಎಸಗಿದೆ, ಹಣಕ್ಕೆ ಬೇಡಿಕೆ ಇಟ್ಟಿಗೆ ಎಂಬ ಆರೋಪ ಎನ್‌ಸಿಬಿ ಮೇಲೆ ಕೇಳಿ ಬಂದಿದೆ.

  English summary
  Drugs case accused Arbaaz Merchant's father Aslam Merchant's photo with his son goes viral. Arbaaz Merchant arrested by NCB with his friend Shah Rukh Khan's son Aryan Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X