ತನ್ನ ಮದುವೆಯನ್ನು 4 ವರ್ಷ ಗುಟ್ಟಾಗಿಟ್ಟಿದ್ದರಂತೆ ಈ ಹಿರಿಯ ನಟಿ
ನಟ-ನಟಿಯರು ತಮ್ಮ ಖಾಸಗಿ ವಿಷಯ ಗುಟ್ಟಾಗಿಡುವುದು ಸಾಮಾನ್ಯ. ಆದರೆ ಮದುವೆ, ಮಗು ಅಂಥಹಾ ವಿಷಯಗಳನ್ನು ಸಹ ಗುಟ್ಟಾಗಿಡುತ್ತಾರೆ ಎಷ್ಟೋ ಮಂದಿ ನಟಿಯರು.
ಬಾಲಿವುಡ್‌ನ ಹಿರಿಯ ನಟಿ ಅರ್ಚನಾ ಪೂರನ್ ಸಿಂಗ್ ಸಹ, ತಾವು ತಮ್ಮ ಮದುವೆಯ ಬಗ್ಗೆ ನಾಲ್ಕು ವರ್ಷ ಗುಟ್ಟು ಕಾಯ್ದುಕೊಂಡಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಕಪಿಲ್ ಶರ್ಮಾ ಶೋ ನಲ್ಲಿ ಅವರು ತಮ್ಮ ಮದುವೆ ಗುಟ್ಟು ರಟ್ಟು ಮಾಡಿದ್ದಾರೆ.
ನಟಿ ಅರ್ಚನಾ ಪೂರನ್ ಸಿಂಗ್, ಪರ್ಮೀತ್ ಸೇಟಿ ಜೊತೆ 1992 ರಲ್ಲಿ ವಿವಾಹವಾದರು. ಆದರೆ ತಾವಿ ಪರ್ಮೀತ್ ಜೊತೆ ವಿವಾಹವಾಗಿದ್ದೇವೆ ಎಂದು ತಮ್ಮ ಪೋಷಕರಿಗೇ ತಿಳಿಸಿರಲಿಲ್ಲವಂತೆ ಅರ್ಚನಾ ಪೂರನ್ ಸಿಂಗ್.

ಇಬ್ಬರ ಮನೆಯಲ್ಲೂ ಮದುವೆ ಇಷ್ಟವಿರಲಿಲ್ಲ
ಪರ್ಮೀತ್ ಹಾಗೂ ಅರ್ಚನಾ ಇಬ್ಬರ ಮನೆಯಲ್ಲೂ ಮದುವೆ ಇಷ್ಟವಿರಲಿಲ್ಲವಂತೆ, ಹಾಗಾಗಿ ಇಬ್ಬರೂ ಗುಟ್ಟಾಗಿ ದೇವಾಲಯದಲ್ಲಿ ಮದುವೆ ಆಗಿಬಿಟ್ಟರಂತೆ. ಅಷ್ಟೇ ಅಲ್ಲ, ತಾವು ಮದುವೆ ಆಗಿರುವ ವಿಷಯವನ್ನು ಕುಟುಂಬದವರಿಂದ ಹಾಗೂ ಗೆಳೆಯರಿಂದ ನಾಲ್ಕು ವರ್ಷ ಮುಚ್ಚಿಟ್ಟಿದ್ದರಂತೆ.

ಸೈಫ್ ಅಲಿ ಖಾನ್ ಮೊದಲ ಸಿನಿಮಾ ಸಮಯದಲ್ಲಿ ಮದುವೆ!
ಸೈಫ್ ಅಲಿ ಖಾನ್‌ನ ಮೊದಲ ಸಿನಿಮಾದ ಚಿತ್ರೀಕರಣದಲ್ಲಿ ನಾನು ತೊಡಗಿದ್ದೆ. ಚಿತ್ರೀಕರಣ ಮುಗಿಸಿಕೊಂಡು ನಾನು ಪರ್ಮೀತ್ ದೇವಸ್ಥಾನಕ್ಕೆ ಹೋದೆವು, ಪೂಜಾರಿಗೆ ವಿಷಯ ತಿಳಿಸಿದೆವು, ಅವರು ನಾಳೆ ಬರುವಂತೆ ಹೇಳಿದರು, ಅಂತೆಯೇ ಹೋಗಿ ಮದುವೆ ಆದೆವು ಎಂದರು ಅರ್ಚನಾ ಪೂರನ್ ಸಿಂಗ್.

ನೇಹಾ ಕಕ್ಕರ್-ರೋಹನ್ ಬಂದಿದ್ದರು
ಇತ್ತೀಚೆಗಷ್ಟೆ ವಿವಾಹವಾದ ಗಾಯಕಿ ನೇಹಾ ಕಕ್ಕರ್ ಹಾಗೂ ಪತಿ ರೋಹನ್ ಪ್ರೀತ್ ಸಿಂಗ್ ಅವರು ಕಪಿಲ್ ಶರ್ಮಾ ಶೋ ಗೆ ಅತಿಥಿಯಾಗಿ ಬಂದಿದ್ದ ಸಮಯದಲ್ಲಿ ಅರ್ಚನಾ ತಮ್ಮ ಮದುವೆ ಕತೆ ಹೇಳಿದರು. ಅರ್ಚನಾ ಪೂರನ್ ಸಿಂಗ್ ಪ್ರಸ್ತುತ ಕಪಿಲ್ ಶರ್ಮಾ ಶೋ ನ ಭಾಗವಾಗಿದ್ದಾರೆ.
Recommended Video

ತಮ್ಮ ಪ್ರೀತಿ ಬಗ್ಗೆ ಹೇಳಿದ ನೇಹಾ ಕಕ್ಕರ್
ನೇಹಾ ಕಕ್ಕರ್ ಸಹ ತಮ್ಮ ಪ್ರೀತಿ ಹಾಗೂ ಮದುವೆ ಬಗ್ಗೆ ಮಾತನಾಡಿದರು. ನೇಹಾ ಹಾಗೂ ರೋಹನ್ ಲಾಕ್‌ಡೌನ್ ಅವಧಿಯಲ್ಲಿ ಅಂದರೆ ಆಗಸ್ಟ್ ತಿಂಗಳಲ್ಲಿ ಭೇಟಿ ಆದರಂತೆ. ರೋಹನ್ ಪ್ರೊಪೋಸ್ ಮಾಡಿದರಂತೆ, ನೇಹಾ ಒಪ್ಪಿಕೊಂಡು ಶೀಘ್ರದಲ್ಲಿಯೇ ಮದುವೆ ಆದರಂತೆ.


Click it and Unblock the Notifications










