ಟಾಮ್ ಕ್ರೂಸ್ ಜೊತೆ ನಟಿಸಿರುವ ನಟಿಯ ಚೆಲುವಿಗೆ ಕ್ಲೀನ್ ಬೋಲ್ಡ್ ಆದ ಶುಭಮನ್ ಗಿಲ್ ?

ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ.

ಇನ್ನೂ.. ಮೊಹಮ್ಮದ್ ಅಜರುದ್ದೀನ್ ಅವರಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ, ಅಜಯ್ ಜಡೇಜಾ ಅವರಿಂದ ಹಿಡಿದು ಕೆ.ಎಲ್.ರಾಹುಲ್‌ವರೆಗೆ ಅನೇಕರು ನಾಯಕಿಯರ ಬೆಡಗು-ಭಿನ್ನಾಣಕ್ಕೆ ಮನ ಸೋತಿದ್ದಾರೆ. ಕೆಲವರು ಪ್ರೀತಿಯಲ್ಲಿ ಬಿದ್ದು ಎದ್ದರೆ, ಇನ್ನೂ ಕೆಲವರು ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಈ ಸಾಲಿಗೆ ಮುಂದೊಂದು ದಿನ ಭಾರತ ಕ್ರಿಕೆಟ್ ತಂಡದ ಸ್ಟಾರ್ ಪ್ಲೇಯರ್ ಶುಭಮನ್ ಗಿಲ್ ಸೇರಿಕೊಳ್ಳುವ ಎಲ್ಲ ಸಾಧ್ಯತೆಗಳಿದ್ದು ಆ ಚೆಲುವೆ ಯಾರು ಎನ್ನುವ ಪ್ರಶ್ನೆ ಹಲವು ದಿನಗಳಿಂದ ಹಲವರನ್ನು ಕಾಡುತ್ತಿದೆ. ಹೀಗಿರುವಾಗ ಅವನೀತ್ ಕೌರ್ ಹೆಸರು ಶುಭಮನ್ ಗಿಲ್ ಜೊತೆ ಥಳುಕು ಹಾಕಿಕೊಂಡಿದೆ.

Is there a romance brewing between Shubman Gill and TV actress Avneet Kaur

ಹೌದು, ಅವನೀತ್ ಕೌರ್, ಹಿಂದಿಯ ಕಿರುತೆರೆಯ ನಟಿ. ಧಾರಾವಾಹಿಗಳಿಗಿಂತ ರಿಯಾಲಿಟಿ ಶೋಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡಿರುವ ಅವನೀತ್, ಹಾಲಿವುಡ್‌ಗೆ ಲಗ್ಗೆ ಇಟ್ಟಿದ್ದಾರೆ. ಟಾಮ್ ಕ್ರೂಸ್ ಜೊತೆ ಮಿಷನ್ ಇಂಪಾಸಿಬಲ್‌ನಲ್ಲಿ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರ ಇನ್ನೇನು ಈ ವರ್ಷ ತೆರೆಗೆ ಬರಲಿದೆ.

ಇಂಥಾ ಅವನೀತ್ ಕೌರ್ ಮತ್ತು ಶುಭಮನ್ ಗಿಲ್ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ. ಇದಕ್ಕೆ ಪೂರಕವಾಗಿ ಅವನೀತ್ ಕೌರ್ ಮೊನ್ನೆ ದುಬೈನಲ್ಲಿ ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿ ಫೈನಲ್ ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಭಾರತ ತಂಡವನ್ನು ಹುರಿದುಂಬಿಸಿದ್ದಾರೆ. ಈಗ ವಾರದ ನಂತರ ಮೈದಾನದಲ್ಲಿ ಅವನೀತ್ ಇರುವ ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅನೇಕರು ಗಿಲ್.. ಗಿಲ್.. ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಅತ್ತಿಗೆ ಎಂದು ಕರೆದಿದ್ದಾರೆ. ಶುಭಮನ್ ಗಿಲ್ ಮತ್ತು ಅವನೀತ್ ಕೌರ್‌ ಇಬ್ಬರ ಕಾಲೆಳೆಯುತ್ತಿದ್ದಾರೆ. ಇನ್ನು ಕೆಲವರು ಅವನೀತ್ ಕೌರ್ ಕ್ರಿಕೆಟಿಗರನ್ನು ಮೆಚ್ಚಿಸಲು ಅವರ ಗಮನವನ್ನು ಸೆಳೆಯಲು ಅವನೀತ್ ಕೌರ್ ಆಗಾಗ ಹೀಗೆ ಸ್ಟೇಡಿಯಂಗೆ ತೆರಳುತ್ತಾರೆ ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಅಂದ್ಹಾಗೇ ಅವನೀತ್ ಕೌರ್ ಅವರ ಹೆಸರು ಈ ಹಿಂದೆ ಕಿರುತೆರೆಯ ನಟ ರಾಘವ್ ಶರ್ಮಾ ಜೊತೆ ಕೇಳಿ ಬಂದಿತ್ತು. ಇಬ್ಬರು ಜೊತೆಯಲ್ಲಿ ಕೆಲಸ ಮಾಡಿರುವ ಹಿನ್ನೆಲೆ ಇಬ್ಬರು ಲವ್ವಲ್ಲಿ ಬಿದ್ದಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಈಗಲೂ ಕೂಡ ರಾಘವ್ ಶರ್ಮಾ ಮತ್ತು ಅವನೀತ್ ಕೌರ್ ಮದುವೆಯಾಗುತ್ತಾರೆ ಎನ್ನುವ ನಂಬಿಕೆ ಹಲವರಲ್ಲಿದೆ. ಆದರೆ, ತಮ್ಮ ಸಂಬಂಧದ ಬಗ್ಗೆ ಇಲ್ಲಿಯವರೆಗೆ ಅವನೀತ್ ಕೌರ್ ಆಗಲಿ ರಾಘವ್ ಶರ್ಮಾ ಆಗಲಿ ಮಾತನಾಡಿಲ್ಲ. ತಮ್ಮ ನಡುವೆ ಇರುವ ಕೇವಲ ಫ್ರೆಂಡ್‌ಶಿಫ್ ಮಾತ್ರ ಎಂದು ಕೂಡ ಹೇಳಿಲ್ಲ.

ಇನ್ನು ಮತ್ತೊಂದೆಡೆ ಶುಭಮನ್ ಗಿಲ್ ಭಾರತದ ಕ್ರಿಕೆಟ್ ಲೋಕದ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಮನೆ ಅಳಿಯನಾಗ್ತಾರೆ ಎಂದು ಅನೇಕರು ಅಂದುಕೊಂಡಿದ್ದರು. ಸಚಿನ್ ಅವರ ಮುದ್ದಿನ ಪುತ್ರಿ ಸಾರಾ ಅವರನ್ನು ಶುಭಮನ್ ಗಿಲ್ ಪ್ರೀತಿ ಮಾಡುತ್ತಿದ್ದಾರೆ ಎಂದು ಭಾವಿಸಿದ್ದರು. ಇದಕ್ಕೆ ಪೂರಕವಾಗಿ ಸಾರಾ ಅಲಿ ಖಾನ್ ಮತ್ತು ಶುಭಮನ್ ಗಿಲ್ ಅನೇಕ ಬಾರಿ ಜೊತೆಯಲ್ಲಿ ಓಡಾಡಿದ್ದು ಇದೆ. ಆದರೆ ಈಗ ಶುಭಮನ್ ಗಿಲ್ ಬದುಕಿನಲ್ಲಿ ಅವನೀತ್ ಕೌರ್ ಪ್ರವೇಶವಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇವರಿಬ್ಬರ ಪ್ರೇಮ ಕಥೆಯ ಸುಳಿವು ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಒಂದು ವರ್ಗ ಇವರಿಬ್ಬರ ಸೋಶಿಯಲ್ ಮೀಡಿಯಾ ಪೇಜ್‌ಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

More from Filmibeat

Read more about: cricket bollywood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X