ಮದ್ವೆ ದಿನನೇ ಕುಡಿದು ಚಿತ್ ಆದ ಸೋನಾಕ್ಷಿ ಸಿನ್ಹಾ ಗಂಡ ಜಹೀರ್ ಇಕ್ಬಾಲ್ ? ನಿನ್ನ ಕಥೆ ಅಷ್ಟೇ ಎಂದು ಟ್ರೋಲ್...!
ಪ್ರೀತಿಗೆ ಹುಟ್ಟೋದು ಗೊತ್ತು.. ಸಾಯೋದು ಗೊತ್ತಿಲ್ಲ.. ನಗ್ಸೋದು ಗೊತ್ತು.. ನಗು ಕಸಿಯೋದು ಗೊತ್ತಿಲ್ಲ. ಧರ್ಮ, ಬಣ್ಣ, ಭಾಷೆ, ಮೇಲು-ಕೀಳಿನ ಕಿಂಚಿತ್ತೂ ಅರಿವು ಇದಕ್ಕಿಲ್ಲ. ಕಣ್ಣಲ್ಲ್ ಹುಟ್ಟೋ ಪ್ರೀತಿಗೆ ಮನಸ್ಸೆ ಸಾಕ್ಷಿ.. ಹೃದಯವೇ ಸ್ವರ್ಗ. ಇದಕ್ಕೆ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ತಾಜಾ ಉದಾಹರಣೆ.
ಹೌದು, ಅಂತರ ಧರ್ಮವಾಗಿದ್ದರೂ, ವಯಸ್ಸಿನಲ್ಲಿ ಅಂತರ ಇದ್ದರೂ.. ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎಂಬಂತೆ ಯಾರಿಗೂ ಕ್ಯಾರೇ ಎನ್ನದೇ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ನಿನ್ನೆ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಸರಳವಾಗಿ ಮದ್ವೆಯಾಗಿದ್ದಾರೆ. ಇನ್ನೂ..ಇದು ಬಣ್ಣದ ಲೋಕ. ಮದುವೆ ಸರಳವಾದರೂ ಆರತಕ್ಷತೆಯಲ್ಲಿ ಆದರೂ ಅದ್ಧೂರಿತನ ಇರ್ಲೇಬೇಕು.

ಹೀಗಾಗಿಯೇ ಸಂಪೂರ್ಣ ಬಾಲಿವುಡ್‌ನ್ ತಮ್ಮ ಈ ಆರತಕ್ಷತೆ ಕಾರ್ಯಕ್ರಮಕ್ಕೆ ಕರೆದಿದ್ದ ಸೋನಾಕ್ಷಿ ಸಿನ್ಹಾ ನಿನ್ನೆ ತಮ್ಮ ರಿಸೆಪ್ಷನ್‌ನಲ್ಲಿ ಗೋಲ್ಡನ್ ಬಾರ್ಡರ್ ಒಳಗೊಂಡಿರುವ ರೆಡ್ ಕಲರ್ ಬನಾರಸಿ ಸೀರೆಯಲ್ಲಿ ಮಿಂಚಿದರು. ಹತ್ ಹತ್ರ 80.000 ಬೆಲೆಯ ಸೀರೆಯಲ್ಲಿ ರಾಣಿಯಂತೆ ಕಂಗೊಳಿಸಿದರು. ತಮ್ಮಿಬ್ಬರನ್ನೂ ಹರಸಿ ಹಾರೈಸಿ ಆಶೀವರ್ದಿಸಲು ಬಂದಿದ್ದ ತಮ್ಮ ಹಿಂದಿ ಚಿತ್ರರಂಗದ ಸ್ನೇಹಿತರ ಜೊತೆ ಕುಣಿದರು. ಆ ಪೈಕಿ ಒಂದು ವಿಡಿಯೋ ಈಗ ವೈರಲ್ ಆಗ್ತಿದೆ. ತಮ್ಮ ಮದ್ವೆಯ ದಿನ ಜಹೀರ್ ಮತ್ತು ಸೋನಾಕ್ಷಿ ಸಿನ್ಹಾ ಎಣ್ಣೆಯ ಅಮಲಿನಲ್ಲಿದ್ದರಾ ಎನ್ನುವ ಪ್ರಶ್ನೆಯನ್ನೂ ಅನೇಕರಲ್ಲಿ ಹುಟ್ಟು ಹಾಕಿದೆ.
ವೈರಲ್ ಆದ ಈ ವಿಡಿಯೋದಲ್ಲಿ ಸೋನಾಕ್ಷಿ ಸಿನ್ಹಾ ತಮ್ಮ ಪತಿ ಜಹೀರ್ ಇಕ್ಬಾಲ್ ಜೊತೆ ಹೆಜ್ಜೆ ಹಾಕಿದ್ದಾರೆ. ಶಾರುಖ್ ಖಾನ್ ಅಭಿನಯದ ದಿಲ್ ಸೇ ಚಿತ್ರದ ಚಯ್ಯಾ ಚಯ್ಯಾ, ದಬಂಗ್ ಸೇರಿ ಹಲವು ಹಾಡಿಗೆ ಕುಣಿದಿದ್ದಾರೆ. ಇವರ ಈ ಕುಣಿತ ಈಗ ಅನೇಕರ ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿಯೇ ಮದ್ವೆ ಸಂಭ್ರಮದಲ್ಲಿಯೇ ಕುಡಿದು ತೂರಾಡಿರುವ ಈ ಜೋಡಿ ಇನ್ನೆಷ್ಟು ದಿನ ಜೊತೆಯಾಗಿ ಬಾಳಿ ಬದುಕಲು ಸಾಧ್ಯ ಎಂಬ ಮಾತು ಈಗ ಕೇಳಿ ಬರುತ್ತಿದೆ. ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರನ್ನು ಒಂದು ವರ್ಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದೆ.

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರ ಈ ಚಯ್ಯಾ ಚಯ್ಯಾ ಡ್ಯಾನ್ಸ್ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಅನೇಕರು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.ಸೋನಾಕ್ಷಿ ಸಿನ್ಹಾ ತಮ್ಮ ಬದುಕಿನಲ್ಲಿ ಎಡವಿದರು ಎಂದು ಅನ್ಸುತ್ತೆ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ನಿನ್ನ ಕಥೆ ಅಷ್ಟೇ. ಮದ್ವೆ ದಿನವೇ ಇಷ್ಟೆಲ್ಲಾ ಕುಡಿದಿದ್ದಾನೆ. ನೀನು ಹೀಗೆ ಬಿಟ್ಟರೆ ಕಥೆ ಅಷ್ಟೇ ಅಂದಿದ್ದಾರೆ. ಇನ್ನೂ ಕಾಲ ಮಿಂಚಿಲ್ಲ, ಯೋಚ್ನೆ ಮಾಡು ಎಂಬ ಸಲಹೆಯನ್ನೆಲ್ಲ ಸೋನಾಕ್ಷಿ ಸಿನ್ಹಾಗೆ ಕೊಟ್ಟಿದ್ದಾರೆ. ಜಹೀರ್ ಇಕ್ಬಾಲ್ ಅವರನ್ನು ಕುಡುಕ, ಗಾಂಜಾ ಗಿರಾಕಿ ಎಂದೆಲ್ಲ ಹೀಯಾಳಿಸುತ್ತಿದ್ದಾರೆ. ನವ ಜೋಡಿಯನ್ನು ಟ್ರೋಲ್ ಮಾಡುತ್ತಿದ್ದಾರೆ.


Click it and Unblock the Notifications











