ಮಲೈಕಾನ 'ಮರೆತಿಲ್ಲ' ಅರ್ಜುನ್ ಕಪೂರ್ ; ಪಿಕ್ ಅಪ್ ಆಂಡ್ ಡ್ರಾಪ್ ..!
ಚಿತ್ರರಂಗ ಅಂದರೆ ಬಣ್ಣದ ಲೋಕ. ದಿನ ಬೆಳಗಾದರೆ ನೂರಾರು ಕಲರ್ ಕಲರ್ ಗಾಸಿಪ್. ಕೆಲವು ಸತ್ಯ. ಮಿಕ್ಕವು ಮಿಥ್ಯ. ಇದಕ್ಕೆ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಖಾನ್ ಅವರ ಸರಸ ವಿರಸದ ಕಥೆ ಮತ್ತೊಂದು ಉದಾಹರಣೆ.
ಹೌದು, ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಖಾನ್ ಬಗ್ಗೆ ಕೆಲ ದಿನಗಳಿಂದ ಸುದ್ದಿಯೊಂದು ಚಾಲ್ತಿಯಲ್ಲಿತ್ತು. ಪ್ರೇಮದ ಅಮಲೇರಿಸಿಕೊಂಡು, ಯಾವಾಗಲೂ ಅಂಟಿಕೊಂಡೇ ಇರುತ್ತಿದ್ದ ಜೋಡಿ ದೂರವಾಗುತ್ತಿದೆ ಅನ್ನುವ ಸುದ್ದಿ ಅದು.

ಸುದ್ದಿಯ ಸತ್ಯಾಸತ್ಯತೆ ಯಾರಿಗೂ ಬೇಡವಾದ ಕಾರಣ ತೇಲಿ ಬಂದ ಈ ಸುದ್ದಿಯನ್ನೇ ನಿಜವೆಂದು ಅಂದುಕೊಂಡ ಅನೇಕರು ದಿನಕ್ಕೊಂದು ಮಾತುಗಳನ್ನಾಡಿದರು. ಇಬ್ಬರ ನಡುವೆ ಇರುವ ವಯಸ್ಸಿನ ಅಂತರವನ್ನ ಮುಂದಿಟ್ಟುಕೊಂಡು ಮತ್ತೆ ಇಬ್ರನ್ನೂ ಟ್ರೋಲ್ ಮಾಡಿದರು.
ಇನ್ನೂ ಇದೇ ಸಮಯದಲ್ಲಿ ಮಲೈಕಾ ಮೊದಲ ಪತಿ ಅರ್ಬಾಜ್ ಖಾನ್ ಅವರ ಮದುವೆ ಬೇರೆ ನಡೆಯಿತಲ್ಲ. ಆ ಕಡೆ ಅವನು ಇಲ್ಲ. ಈ ಕಡೆ ಇವನು ಇಲ್ಲ ಎಂದು ಮಲೈಕಾ ಅವರನ್ನ ಮೊದಲಿಸಿದರು. ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಖಾನ್ ನಡುವೆ ಸಂಬಂಧ ಹಳಸಿ ಹೋಗಲು ಕಾರಣವನ್ನೂ ಕೂಡ ಹುಡುಕತೊಡಗಿದರು.

ಆದರೆ ಪ್ರೀತಿ ಅನ್ನೋದೆ ಹಂಗೆ. ದೂರವಾದಷ್ಟೂ ಹತ್ತಿರವಾಗ್ಬೇಕು, ಹತ್ತಿರವಾದಷ್ಟು ದೂರವಾಗ್ಬೇಕು ಅನ್ನೋ ಹಂಬಲದಲ್ಲಿ ಸದಾ ತುಡಿಯೋ ಮನಸಿನ ತಾಕಲಾಟ. ಇದಕ್ಕೆ ಕೈಗನ್ನಡಿ ಅನ್ನುವಂತೆ ಮೊನ್ನೆವರೆಗೆ ದೂರವಾದಂತೆ ಕಾಣ್ತಿದ್ದ ಈ ಜೋಡಿ, ಈಗ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದೆ. ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.
ಹೌದು, ನಿನ್ನೆ ಅರ್ಜುನ್ ಕಪೂರ್ ಮಲೈಕಾ ಅರೋರಾ ಖಾನ್ ಜೊತೆ ಕಾಣಿಸಿಕೊಂಡಿದ್ದಾರೆ. ಮಲೈಕಾ ಮೇಲಿನ ಪ್ರೀತಿ ಹಾಗೂ ಕಾಳಜಿಗೆ ತಾವೇ ಖುದ್ದು ಕಾರಿನಲ್ಲಿ ಮನೆವರೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದಾರೆ.

ಸದ್ಯಕ್ಕೆ ಅರ್ಜುನ್ ಕಪೂರ್ ಅವರ ಈ 'ಪಿಕ್ ಅಪ್ ಆಂಡ್ ಡ್ರಾಪ್' ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಇದ್ದರೆ ಹುಡುಗ ಹೀಗಿರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗ್ತಿದೆ. ಅರ್ಜುನ್ ಕಪೂರ್ ಗೆ ಮೆಚ್ಚುಗೆಯ ಮಹಾಪೂರ ಹರಿದು ಬರ್ತಿದೆ
ಅಂದ್ಹಾಗೇ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಖಾನ್ ಇನ್ನೂ ಮದುವೆಯಾಗಿಲ್ಲ. ಬದಲಿಗೆ ಕಳೆದ ಆರು ವರ್ಷಗಳಿಂದ ಲಿವ್ ಇನ್ ಸಂಬಂಧದಲ್ಲಿದ್ದಾರೆ. ಮದುವೆ ಎಂಬುದು ಜೀವನದ ಅವಿಭಾಜ್ಯ ಅಂಗ. ಮಲೈಕಾ ಅರೋರಾ ಖಾನ್ ಗೆ ಇದರ ಅನುಭವ ಆಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಲೈಕಾಗೆ ಎದೆ ಎತ್ತರಕ್ಕೆ ಬೆಳೆದ ಮಗ ಇದ್ದಾನೆ.
ಈ ಕಾರಣಕ್ಕೆ ಮದುವೆಯಾಗುವ ಅವಸರ ಇಬ್ಬರಿಗೂ ಇಲ್ಲ. ಆದರೂ ಬಾಲಿವುಡ್ ನಲ್ಲಿ ಅನೇಕರಿಗೆ ಇವರ ಮದುವೆಯನ್ನ ಆದಷ್ಟು ಬೇಗ ನೋಡುವ ಆಸೆ ಇದೆ. ಈ ಆಸೆಯನ್ನ ಮಲೈಕಾ ಅರೋರಾ ಖಾನ್ ಹಾಗೂ ಅರ್ಜುನ್ ಕಪೂರ್ ಯಾವಾಗ ಈಡೇರಿಸುತ್ತಾರೆ ಅನ್ನುವುದು ಸದ್ಯದ ಯಕ್ಷ ಪ್ರಶ್ನೆ.


Click it and Unblock the Notifications











