ಮದುವೆ ಸೀಸನ್ ಶುರು, 2019ಕ್ಕೆ ಅರ್ಜುನ್ ಕಪೂರ್- ಮಲೈಕಾ ಆರೋರಾ ವಿವಾಹ
ಬಾಲಿವುಡ್ ನಲ್ಲಿ ಸದ್ಯ ಮದುವೆ ಸೀಸನ್ ಶುರುವಾಗಿದೆ. ಸೋನಮ್ ಕಪೂರ್, ನೇಹಾ ಧೂಪಿಯಾ ನಂತರ ದೀಪಿಕಾ, ಪ್ರಿಯಾಂಕಾ ಛೋಪ್ರಾ ಹಸೆಮಣೆ ಏರಲಿದ್ದಾರೆ. ಇವರುಗಳ ಮದುವೆ ನಿರೀಕ್ಷಿತವಾಗಿತ್ತು.
ಆದರೆ, ಸದ್ಯ ಚಾಲ್ತಿಯಲ್ಲಿರುವ ಗಾಸಿಪ್ ನಂತೆ ಮಲೈಕಾ ಅರೋರಾ ಅವರು ಖಾನ್ ಸರ್ ನೇಮ್ ತೊರೆದು ಶೀಘ್ರದಲ್ಲೇ ಅರ್ಜುನ್ ವರಿಸಿ ಕಪೂರ್ ಆಗಲಿದ್ದಾರಂತೆ.

ಕಳೆದ ಕೆಲವು ದಿನಗಳಿಂದ, ಮಲೈಕಾ-ಅರ್ಜುನ್ ತುಂಬಾ ಹತ್ತಿರವಾಗಿದ್ದಾರೆ. ಸಲ್ಮಾನ್ ಖಾನ್ ಸೋದರ ಅರ್ಬಾಜ್ ಅವರಿಗೆ ಸೋಡಾ ಚೀಟಿ ಕೊಟ್ಟಿದ್ದು, ಅರ್ಜುನ್ ಕಪೂರ್ ಕೈ ಹಿಡಿಯಲು ಮುಂದಾಗಿದ್ದಾರೆ. ಮಲೈಕಾ ಹಾಗೂ ಅರ್ಬಾಜ್ ಖಾನ್ ಅವರಿಗೆ ಅರಾಹ್ ಖಾನ್(15 ವರ್ಷ) ಮಗನನ್ನು ಹೊಂದಿದ್ದಾರೆ.
ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ವಿವಾಹದ ಸಂಭ್ರಮದಲ್ಲಿರುವ ಬಿ ಟೌನ್ ನಂತರ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೋನಾಸ್ ಮದುವೆ ಸಂಭ್ರಮವನ್ನು ಡಿಸೆಂಬರ್ ನಲ್ಲಿ ಆಚರಿಸಲಿದೆ. ಇದಾದ ಬಳಿಕ ಅರ್ಜುನ್ ಕಪೂರ್ ಮನೆಯಲ್ಲಿ ಸಂಭ್ರಮಾಚರಣೆ ಆರಂಭವಾಗಲಿದ್ದು, ಮಲೈಕಾ ಹಾಗೂ ಅರ್ಜುನ್ 2019ರಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.


Click it and Unblock the Notifications











