ಜಾಹ್ನವಿ ಅಭಿನಯ ನೋಡಿ ಮೂಕವಿಸ್ಮಿತನಾದ ಅರ್ಜುನ್ ಕಪೂರ್
ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ 'ದಡಕ್' ಇಂದು ರಿಲೀಸ್ ಆಗಿದೆ. ಜಾಹ್ನವಿ ಕಪೂರ್ ಕುಟುಂಬದವರು ಮೊದಲ ಶೋವನ್ನ ನೋಡಿ ಖುಷಿ ಪಟ್ಟಿದ್ದಾರೆ.
ಶ್ರೀದೇವಿ ಸಾವಿನ ಬಳಿಕ ಅವರ ಮಕ್ಕಳ ಬಗ್ಗೆ ಅರ್ಜುನ್ ಕಪೂರ್ ಹೆಚ್ಚು ಕಾಳಜಿ ವಹಿಸಿದ್ದಾರೆ. ಸಹೋದರಿಯ ಬಗ್ಗೆ ಮತ್ತು ಆಕೆ ಅಭಿನಯದ ಚಿತ್ರದ ಬಗ್ಗೆಯೂ ಬೆಂಬಲ ನೀಡುತ್ತಾ ಬಂದಿದ್ದಾರೆ.
ಇದೀಗ, ಜಾಹ್ನವಿ ಕಪೂರ್ ಅವರ ಸಿನಿಮಾ ನೋಡಿದ ಅರ್ಜುನ್ ಕಪೂರ್ ಚಿತ್ರತಂಡ ಹಾಗೂ ತಂಗಿಯ ಅಭಿನಯಕ್ಕೆ ಮನಸೋತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

''ಹೃದಯ ಬಡಿತವನ್ನ ಹೆಚ್ಚಿಸುವ ಲವ್ ಸ್ಟೋರಿ ಇದು. ನಿರ್ದೇಶಕ ಶಶಾಂಕ್ ಇಶಾನ್ ಮತ್ತು ಜಾಹ್ನವಿ ಇಬ್ಬರಿಂದಲೂ ಅದ್ಭುತವಾದ ಅಭಿನಯವನ್ನ ಹೊರತೆಗೆದಿದ್ದಾರೆ. ಇಶಾನ್ ಸಾಧಾರಣ ಯುವಕನ ಪಾತ್ರದಲ್ಲಿ ಮನಮೆಚ್ಚುವಂತೆ ನಟಿಸಿದ್ದಾರೆ. ಇನ್ನ ಸ್ವಚ್ಛವಾದ ಪ್ರೇಮಕಥೆಯಲ್ಲಿ ಸಹೋದರಿ ಜಾಹ್ನವಿ ಕಪೂರ್ ನಟನೆ ಮೂಕವಿಸ್ಮಿತಗೊಳಿಸಿದೆ'' ಎಂದು ಬರೆದುಕೊಂಡಿದ್ದಾರೆ.
ಕೇವಲ ಸಿನಿಮಾ ಮಾತ್ರವಲ್ಲ, ಟ್ರೈಲರ್ ಬಿಡುಗಡೆಯಾದಗಲೂ ಜಾಹ್ನವಿ ಬಗ್ಗೆ ಅರ್ಜುನ್ ಕಪೂರ್ ಪ್ರಶಂಸೆಯ ಮಾತುಗಳನ್ನಾಡಿದ್ದರು. ಈಗ ಸಿನಿಮಾ ನೋಡಿದ ಮೇಲೆಯೂ ಮೆಚ್ಚಿಕೊಂಡಿದ್ದಾರೆ.
ಮರಾಠಿಯ ಸೂಪರ್ ಹಿಟ್ ಸಿನಿಮಾ ಸೈರಾಟ್ ಚಿತ್ರದ ರೀಮೇಕ್ ದಡಕ್. ಚೊಚ್ಚಲ ಚಿತ್ರದಲ್ಲೇ ಶ್ರೀದೇವಿ ಪುತ್ರಿ ಬಾಲಿವುಡ್ ಗಮನ ಸೆಳೆದಿದ್ದಾರೆ. ಇದು ಸಹಜವಾಗಿ ಶ್ರೀದೇವಿ ಕುಟುಂಬಕ್ಕೆ ಸಂತಸ ತಂದಿದೆ.


Click it and Unblock the Notifications











