ಮಗು ಪ್ರಾಣ ಉಳಿಸಿ ಅಂದಿದ್ದಕ್ಕೆ ಕಾಲೆಳೆದ ವ್ಯಕ್ತಿ: ಅರ್ಜುನ್ ಕಪೂರ್ ಕೊಟ್ಟ ಉತ್ತರವೇನು?
ಬಾಲಿವುಡ್ ನಟ ಅರ್ಜುನ್ ಕಪೂರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಗುರುವಾರ ಒಂದು ಪೋಸ್ಟ್ ಹಾಕಿದ್ದರು. ಮಗು ಪ್ರಾಣವನ್ನು ಉಳಿಸಲು ನಿಮ್ಮ ಸಹಾಯ ಬೇಕಿದೆ, ನಿಮ್ಮಿಂದ ಸಾಧ್ಯವಾದಷ್ಟು ಧನ ಸಹಾಯ ಮಾಡಿ ಎಂದು ವಿನಂತಿಸಿ ದೇಣಿಗೆ ಲಿಂಕ್ ಹಂಚಿಕೊಂಡಿದ್ದರು.
ಅರ್ಜುನ್ ಕಪೂರ್ ಅವರ ಈ ಕೆಲಸಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಅರ್ಜುನ್ ಕಪೂರ್ ಅವರ ಕಾಲೆಳೆಯುವ ಪ್ರಯತ್ನವೂ ಮಾಡಿದ್ದಾರೆ.
ಅದರಲ್ಲೊಬ್ಬರು ಅರ್ಜುನ್ ಕಪೂರ್ ಉದ್ದೇಶಿಸಿ ''ನಿಮ್ಮ ಒಂದು ದಿನ ಗಳಿಕೆಯಿಂದ ಆ ಮಗುವನ್ನು ರಕ್ಷಿಸಬಹುದು'' ಎಂದು ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ಅರ್ಜುನ್ ಕಪೂರ್ ''ನಾನು ದಿನಕ್ಕೆ 16 ಕೋಟಿ ಸಂಪಾದಿಸುತ್ತಿದ್ದರೆ ಖಂಡಿತಾ ಈ ಪೋಸ್ಟ್ ಹಾಕುತ್ತಿರಲಿಲ್ಲ'' ಎಂದಿದ್ದಾರೆ.

''ನನ್ನ ಕಡೆಯಿಂದ ನಾನು ಮಾಡಬೇಕಾಗಿದ್ದ ಸಹಾಯ ಮಾಡಿದ್ದೇನೆ. ಸಹಾಯ ಮಾಡಿ ಮತ್ತು ಅವನಿಗೆ ಸಹಾಯ ಮಾಡಲು ಸಕಾರಾತ್ಮಕ ಸ್ಪಂದಿಸಿ'' ಎಂದು ತಿಳಿಸಿದ್ದಾರೆ.
ಮತ್ತೊಬ್ಬ ಕಾಮೆಂಟ್ ಮಾಡಿ "ನಾನು ಅದೇ ಮಾತನ್ನು ಹೇಳಿದ್ದೇನೆ, ಅವರು ತನ್ನ ಸ್ವಂತ ಲಾಭಕ್ಕಾಗಿ ಪ್ರಚಾರ ಮಾಡುತ್ತಿದ್ದಾನೆ" ಎಂದಿದ್ದಾರೆ. ಅದಕ್ಕೆ ಅರ್ಜುನ್ ಪ್ರತಿಕ್ರಿಯಿಸಿ ''ಹುಡುಗನ ಪ್ರಾಣ ಉಳಿಸಲು ನಾನು ಇದನ್ನು ಮಾಡುತ್ತಿದ್ದೇನೆ ಎಂದು ನೀವು ಅರಿತುಕೊಳ್ಳಲಿದ್ದೀರಾ'' ಎಂದಿದ್ದಾರೆ.
ನಟಿ ಆಲಿಯಾ ಭಟ್ ಸಹ ತಮ್ಮ ಇನ್ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಮಗು ಫೋಟೋ ಹಂಚಿಕೊಂಡು ಸಹಾಯ ಮಾಡಿ ಎಂದು ವಿನಂತಿಸಿದ್ದಾರೆ.


Click it and Unblock the Notifications











