For Quick Alerts
  ALLOW NOTIFICATIONS  
  For Daily Alerts

  ಮಗು ಪ್ರಾಣ ಉಳಿಸಿ ಅಂದಿದ್ದಕ್ಕೆ ಕಾಲೆಳೆದ ವ್ಯಕ್ತಿ: ಅರ್ಜುನ್ ಕಪೂರ್ ಕೊಟ್ಟ ಉತ್ತರವೇನು?

  |

  ಬಾಲಿವುಡ್ ನಟ ಅರ್ಜುನ್ ಕಪೂರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಗುರುವಾರ ಒಂದು ಪೋಸ್ಟ್ ಹಾಕಿದ್ದರು. ಮಗು ಪ್ರಾಣವನ್ನು ಉಳಿಸಲು ನಿಮ್ಮ ಸಹಾಯ ಬೇಕಿದೆ, ನಿಮ್ಮಿಂದ ಸಾಧ್ಯವಾದಷ್ಟು ಧನ ಸಹಾಯ ಮಾಡಿ ಎಂದು ವಿನಂತಿಸಿ ದೇಣಿಗೆ ಲಿಂಕ್ ಹಂಚಿಕೊಂಡಿದ್ದರು.

  ಅರ್ಜುನ್ ಕಪೂರ್ ಅವರ ಈ ಕೆಲಸಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಅರ್ಜುನ್ ಕಪೂರ್ ಅವರ ಕಾಲೆಳೆಯುವ ಪ್ರಯತ್ನವೂ ಮಾಡಿದ್ದಾರೆ.

  ಮಲೈಕಾ ಅರೋರಾಗೆ ಹುಟ್ಟುಹಬ್ಬದ ಸಂಭ್ರಮ: 'ಫೂಲ್' ಎಂದ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ಮಲೈಕಾ ಅರೋರಾಗೆ ಹುಟ್ಟುಹಬ್ಬದ ಸಂಭ್ರಮ: 'ಫೂಲ್' ಎಂದ ಬಾಯ್ ಫ್ರೆಂಡ್ ಅರ್ಜುನ್ ಕಪೂರ್

  ಅದರಲ್ಲೊಬ್ಬರು ಅರ್ಜುನ್ ಕಪೂರ್ ಉದ್ದೇಶಿಸಿ ''ನಿಮ್ಮ ಒಂದು ದಿನ ಗಳಿಕೆಯಿಂದ ಆ ಮಗುವನ್ನು ರಕ್ಷಿಸಬಹುದು'' ಎಂದು ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ಅರ್ಜುನ್ ಕಪೂರ್ ''ನಾನು ದಿನಕ್ಕೆ 16 ಕೋಟಿ ಸಂಪಾದಿಸುತ್ತಿದ್ದರೆ ಖಂಡಿತಾ ಈ ಪೋಸ್ಟ್ ಹಾಕುತ್ತಿರಲಿಲ್ಲ'' ಎಂದಿದ್ದಾರೆ.

  ''ನನ್ನ ಕಡೆಯಿಂದ ನಾನು ಮಾಡಬೇಕಾಗಿದ್ದ ಸಹಾಯ ಮಾಡಿದ್ದೇನೆ. ಸಹಾಯ ಮಾಡಿ ಮತ್ತು ಅವನಿಗೆ ಸಹಾಯ ಮಾಡಲು ಸಕಾರಾತ್ಮಕ ಸ್ಪಂದಿಸಿ'' ಎಂದು ತಿಳಿಸಿದ್ದಾರೆ.

  ಮತ್ತೊಬ್ಬ ಕಾಮೆಂಟ್ ಮಾಡಿ "ನಾನು ಅದೇ ಮಾತನ್ನು ಹೇಳಿದ್ದೇನೆ, ಅವರು ತನ್ನ ಸ್ವಂತ ಲಾಭಕ್ಕಾಗಿ ಪ್ರಚಾರ ಮಾಡುತ್ತಿದ್ದಾನೆ" ಎಂದಿದ್ದಾರೆ. ಅದಕ್ಕೆ ಅರ್ಜುನ್ ಪ್ರತಿಕ್ರಿಯಿಸಿ ''ಹುಡುಗನ ಪ್ರಾಣ ಉಳಿಸಲು ನಾನು ಇದನ್ನು ಮಾಡುತ್ತಿದ್ದೇನೆ ಎಂದು ನೀವು ಅರಿತುಕೊಳ್ಳಲಿದ್ದೀರಾ'' ಎಂದಿದ್ದಾರೆ.

  ಮತ್ತೆ ಲಾಕ್ ಡೌನ್ ಸೂಚನೆಯನ್ನ ಕೊಡ್ತಿದ್ದೀಯಾ ರಾಮಾಯಣ ಸೀರಿಯಲ್ | Filmibeat Kannada

  ನಟಿ ಆಲಿಯಾ ಭಟ್ ಸಹ ತಮ್ಮ ಇನ್ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಮಗು ಫೋಟೋ ಹಂಚಿಕೊಂಡು ಸಹಾಯ ಮಾಡಿ ಎಂದು ವಿನಂತಿಸಿದ್ದಾರೆ.

  English summary
  Arjun Kapoor silences a troll who questioned his call for donation to help a child with life-threatening disease.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X