»   » 'ನಮಸ್ತೆ ಇಂಗ್ಲೆಂಡ್'ಗೆ ಅಕ್ಷಯ್ ಬದಲಿಗೆ ಅರ್ಜುನ್ ಕಪೂರ್

'ನಮಸ್ತೆ ಇಂಗ್ಲೆಂಡ್'ಗೆ ಅಕ್ಷಯ್ ಬದಲಿಗೆ ಅರ್ಜುನ್ ಕಪೂರ್

Posted By:
Subscribe to Filmibeat Kannada

ನಿರ್ದೇಶಕ ವಿಪುಲ್ ಅಮೃತ್‌ಲಾಲ್ ಶಾಹ್ ರವರು ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಅಭಿನಯದ 'ನಮಸ್ತೆ ಲಂಡನ್' ಚಿತ್ರದ ಸೀಕ್ವೆಲ್ ಚಿತ್ರ ಮಾಡುವ ಬಗ್ಗೆ ಹಲವು ತಿಂಗಳುಗಳ ಹಿಂದೆಯೇ ಹೇಳಿದ್ದರು. ಸೀಕ್ವೆಲ್ ಚಿತ್ರಕ್ಕೆ 'ನಮಸ್ತೆ ಇಂಗ್ಲೆಂಡ್' ಟೈಟಲ್ ಅನ್ನು ಸೂಚಿಸಿಯು ಚಿತ್ರದ ಬಗ್ಗೆ ಯಾವುದೇ ಸುದ್ದಿ ಹಲವು ದಿನಗಳಿಂದ ಕೇಳಿಬಂದಿರಲಿಲ್ಲ.

ಆದರೆ ಇತ್ತೀಚಿನ ಲೇಟೆಸ್ಟ್ ವರದಿಗಳ ಪ್ರಕಾರ ಚಿತ್ರದಲ್ಲಿ ಪ್ರಮುಖವಾದ ಬದಲಾವಣೆ ಆಗಿರುವುದು ಚಿತ್ರ ಸೆಟ್ಟೇರಲು ತಡವಾಗಿದೆ ಎಂಬುದು ತಿಳಿದಿದೆ. ರೂಮರ್ಸ್ ಪ್ರಕಾರ 'ನಮಸ್ತೆ ಇಂಗ್ಲೆಂಡ್' ಚಿತ್ರದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸುವುದಿಲ್ಲ ಎನ್ನಲಾಗುತ್ತದೆ.

Arjun Kapoor To Replace Akshay Kumar In The Sequel Of 'Namastey London'

'ನಮಸ್ತೆ ಇಂಗ್ಲೆಂಡ್' ಚಿತ್ರದಲ್ಲಿ ಅಕ್ಷಯ್ ಕುಮಾರ್ ಬದಲು ನಟ ಅರ್ಜುನ್ ಕಪೂರ್ ಬಣ್ಣ ಹಚ್ಚಲಿದ್ದಾರಂತೆ. ಈ ಪ್ರಮುಖ ಬದಲಾವಣೆಗೆ ಅಕ್ಷಯ್ ಕುಮಾರ್ ಕಳೆದ 4 ತಿಂಗಳಿಂದ 2.0 ಚಿತ್ರದಲ್ಲಿ ತೊಡಗಿದ್ದು, ವಿಪುಲ್ ಅಮೃತ್‌ಲಾಲ್ ಸಿನಿಮಾದಲ್ಲಿ ನಟಿಸಲು ಡೇಟ್ ಸಮಸ್ಯೆ ಆಗಿದೆ ಎಂದು ವರದಿಗಳಿಂದ ತಿಳಿದಿದೆ. ಇನ್ನು ಹಲವು ಮೂಲಗಳ ಪ್ರಕಾರ ಅಕ್ಷಯ್ ಕುಮಾರ್ ಇತ್ತೀಚೆಗೆ ಸಮಾಜ ಕಳಕಳಿಯ ಚಿತ್ರಗಳಲ್ಲಿ ನಟಿಸುತ್ತಿದ್ದು, ಕಮರ್ಸಿಯಲ್ ಚಿತ್ರಗಳನ್ನು ತ್ಯಜಿಸಿರುವುದು ಕಾರಣ ಎನ್ನಲಾಗುತ್ತಿದೆ. ಅಲ್ಲದೇ ಈ ಚಿತ್ರದಿಂದ ಸೋನಾಕ್ಷಿ ಸಿನ್ಹಾ ಸಹ ಹೊರಹೋಗಿದ್ದು, ಅವರ ಬದಲಿಗೆ ಪರಿಣಿತಿ ಚೋಪ್ರಾ ನಟಿಸಲಿದ್ದಾರಂತೆ.

English summary
Arjun Kapoor To Replace Akshay Kumar In The Sequel Of 'Namastey London'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada