ಹೃತಿಕ್ ಮಾಜಿ ಪತ್ನಿಯಿಂದಾಗಿ ಅರ್ಜುನ್ ರಾಂಪಾಲ್ ಮನೆಯಲ್ಲಿ ಜೋರು ಗಲಾಟೆ ನಡೆದಿತ್ತು.!

By Harshitha

'ತೋಳ ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು' ಎಂಬಂತೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ರವರ 20 ವರ್ಷಗಳ ದಾಂಪತ್ಯ ಮುರಿದು ಬಿದ್ಮೇಲೆ, ಅವರ ಸಂಸಾರದ ಗುಟ್ಟು ವ್ಯಾಧಿ ರಟ್ಟಾಗುತ್ತಿದೆ.

ವರ್ಷಗಳಿಂದ ಅರ್ಜುನ್ ರಾಂಪಾಲ್ ಹಾಗೂ ಪತ್ನಿ ಮೆಹರ್ ಜೆಸಿಯಾ ನಡುವೆ ಯಾವುದೂ ಸರಿಯಿರಲಿಲ್ಲ. ಅರ್ಜುನ್-ಮೆಹರ್ ದಾಂಪತ್ಯದಲ್ಲಿ ಬಿರುಗಾಳಿ ಬೀಸಲು ಹೃತಿಕ್ ರೋಷನ್ ಮಾಜಿ ಪತ್ನಿ ಸುಸೇನ್ ಕಾರಣ ಎಂಬೆಲ್ಲ ಮಾತುಗಳು ಬಿಟೌನ್ ಗಲ್ಲಿಗಳಲ್ಲಿ ಕೇಳಿಬರುತ್ತಿದೆ.

ಹೃತಿಕ್ ರೋಷನ್ ಹಾಗೂ ಸುಸೇನ್ ವಿಚ್ಛೇದನ ಪಡೆದ ಐದು ವರ್ಷಗಳ ಬಳಿಕ ಅರ್ಜುನ್ ರಾಂಪಾಲ್ ಹಾಗೂ ಮೆಹರ್ ಜೆಸಿಯಾ ಡೈವೋರ್ಸ್ ಪಡೆದಿದ್ದಾರೆ. ಒಂದಕ್ಕೊಂದು ಸಂಬಂಧ ಇದ್ಯೋ, ಇಲ್ವೋ.... ಆದ್ರೆ, ಎರಡನ್ನೂ ತಳುಕು ಹಾಕಿ ಗುಸು ಗುಸು ಅಂತ ಮಾತನಾಡುವವರ ಸಂಖ್ಯೆ ಸದ್ಯ ಬಾಲಿವುಡ್ ನಲ್ಲಿ ಜಾಸ್ತಿ ಆಗಿದೆ. ಮುಂದೆ ಓದಿರಿ...

ಅರ್ಜುನ್ ಹಾಗೂ ಸುಸೇನ್ ಆತ್ಮೀಯತೆ.!

ಅರ್ಜುನ್ ಹಾಗೂ ಸುಸೇನ್ ಆತ್ಮೀಯತೆ.!

ವರ್ಷಗಳಿಂದಲೂ ಅರ್ಜುನ್ ರಾಂಪಾಲ್ ಹಾಗೂ ಸುಸೇನ್ ಆತ್ಮೀಯ ಸ್ನೇಹಿತರು. ಇಬ್ಬರ ಅತಿಯಾದ ಆತ್ಮೀಯತೆ ಪತ್ನಿ ಮೆಹರ್ ಜೆಸಿಯಾ ಕಣ್ಣು ಕೆಂಪಾಗಿಸಿತ್ತು. ಇದರಿಂದಲೇ ದಂಪತಿ ನಡುವೆ ಕಿತ್ತಾಟ ಶುರುವಾಗಿದ್ದು ಅಂತ ಹೇಳುವವರು ಬಾಲಿವುಡ್ ನಲ್ಲಿದ್ದಾರೆ.

ಪಾರ್ಟಿಯೊಂದರಲ್ಲಿ ಸುಸೇನ್-ಮೆಹರ್ ಗಲಾಟೆ.!

ಪಾರ್ಟಿಯೊಂದರಲ್ಲಿ ಸುಸೇನ್-ಮೆಹರ್ ಗಲಾಟೆ.!

ಫರ್ದೀನ್ ಖಾನ್ ಆಯೋಜಿಸಿದ್ದ ಪಾರ್ಟಿಯೊಂದರಲ್ಲಿ ಅರ್ಜುನ್ ರಾಂಪಾಲ್ ಹಾಗೂ ಹೃತಿಕ್ ರೋಷನ್ ಕುಟುಂಬ ಪಾಲ್ಗೊಂಡಿತ್ತು. ಈ ಪಾರ್ಟಿಯಲ್ಲಿ ಮೆಹರ್ ಹಾಗೂ ಸುಸೇನ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಸಿಟ್ಟಾಗಿದ್ದ ಮೆಹರ್ ಪಾರ್ಟಿಯಿಂದ ಹೊರ ನಡೆದರು. ಅಲ್ಲಿಂದ ಇಬ್ಬರೂ ಮುಖಾಮುಖಿ ಆಗಿಲ್ಲ. ಪರಸ್ಪರ ಮಾತುಕತೆ ಕೂಡ ನಡೆಸಿಲ್ಲ ಎಂದು ಮುಂಬೈ ಮಿರರ್ ಪತ್ರಿಕೆ ಕೂಡ ವರದಿ ಮಾಡಿತ್ತು.

ಅಂಥದ್ದೇನೂ ಇಲ್ಲ ಎಂದಿದ್ದ ಸುಸೇನ್

ಅಂಥದ್ದೇನೂ ಇಲ್ಲ ಎಂದಿದ್ದ ಸುಸೇನ್

ಪತಿ ಹೃತಿಕ್ ರೋಷನ್ ರಿಂದ ವಿಚ್ಛೇದನ ಪಡೆದ್ಮೇಲೆ, ''ವರ್ಷಗಳಿಂದ ಅರ್ಜುನ್ ಹಾಗೂ ಮೆಹರ್ ನನ್ನ ಸ್ನೇಹಿತರು. ನಾನು ಹಾಗೂ ಅರ್ಜುನ್ ಕೇವಲ ಸ್ನೇಹಿತರಷ್ಟೇ. ಅದಕ್ಕೂ ಮಿಗಿಲಾಗಿ ಏನೂ ಇಲ್ಲ'' ಎಂದು ಸುಸೇನ್ ಸ್ಪಷ್ಟ ಪಡಿಸಿದ್ದರು.

ಮೆಹರ್ ಲಾಸ್ಟ್ ಚಾನ್ಸ್ ಕೊಟ್ಟಿದ್ದರು.!

ಮೆಹರ್ ಲಾಸ್ಟ್ ಚಾನ್ಸ್ ಕೊಟ್ಟಿದ್ದರು.!

ತಮ್ಮ ದಾಂಪತ್ಯ ಜೀವನವನ್ನು ಉಳಿಸಿಕೊಳ್ಳಲು ಮೆಹರ್ ತುಂಬಾ ಪ್ರಯತ್ನ ಪಟ್ಟರಂತೆ. ಆದ್ರೆ, ಅದು ಸಾಧ್ಯ ಆಗಲಿಲ್ಲ. ಅರ್ಜುನ್ ಹಾಗೂ ಸುಸೇನ್ ಗುಟ್ಟಾಗಿ ಭೇಟಿ ಮಾಡುತ್ತಿದ್ದರು. ಇದರಿಂದ ಮೆಹರ್ ತುಂಬಾ ಅಪ್ಸೆಟ್ ಆಗಿದ್ದರು ಎಂಬುದು ಮೂಲಗಳ ಮಾಹಿತಿ.

ಜೋರು ಜೋರಾಗಿ ಕಿತ್ತಾಡಿದ್ದರು.!

ಜೋರು ಜೋರಾಗಿ ಕಿತ್ತಾಡಿದ್ದರು.!

ಅರ್ಜುನ್ ಹಾಗೂ ಮೆಹರ್ ನಡುವೆ ಆಗಾಗ ದೊಡ್ಡ ಗಲಾಟೆಯೇ ನಡೆಯುತ್ತಿತ್ತಂತೆ. ಒಮ್ಮೆ ಕಿತ್ತಾಟ ಜೋರಾಗಿ ನಡೆದಾಗ, ಪಕ್ಕದ ಮನೆಯವರು ಪೊಲೀಸ್ ಕಂಪ್ಲೇಂಟ್ ಕೊಡುವುದಾಗಿ ಎಚ್ಚರಿಕೆ ಕೊಟ್ಟಿದ್ದರಂತೆ. ಈ ಘಟನೆ ನಡೆದ ಬಳಿಕ ಬೇರೊಂದು ಅಪಾರ್ಟ್ಮೆಂಟ್ ಗೆ ಒಂದು ವಾರ ಕಾಲ ಅರ್ಜುನ್ ರಾಂಪಾಲ್ ಶಿಫ್ಟ್ ಆಗಿದ್ದರು ಎಂಬ ಗುಲ್ಲು ಎಲ್ಲೆಡೆ ಹಬ್ಬಿದೆ.

ದಾಂಪತ್ಯ ಜೀವನಕ್ಕೆ ಎಳ್ಳುನೀರು ಬಿಟ್ಟ ಅರ್ಜುನ್-ಮೆಹರ್

ದಾಂಪತ್ಯ ಜೀವನಕ್ಕೆ ಎಳ್ಳುನೀರು ಬಿಟ್ಟ ಅರ್ಜುನ್-ಮೆಹರ್

ಅಂತೂ 20 ವರ್ಷಗಳ ತಮ್ಮ ದಾಂಪತ್ಯಕ್ಕೆ ಅರ್ಜುನ್ ರಾಂಪಾಲ್ ಹಾಗೂ ಮೆಹರ್ ಎಳ್ಳು ನೀರು ಬಿಟ್ಟಿದ್ದಾಗಿದೆ. ಪರಸ್ಪರ ಒಪ್ಪಿಗೆಯಿಂದ ಇಬ್ಬರೂ ದೂರವಾಗಿದ್ದಾರೆ.

More from Filmibeat

English summary
According to the rumours, Arjun Rampal had fought loudly with Mehr.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X