ಅರ್ಜುನ್ ರಾಂಪಲ್ ಸಹೋದರಿಗೆ ಮತ್ತೊಮ್ಮೆ ನೋಟಿಸ್ ನೀಡಿದ ಎನ್‌ಸಿಬಿ

ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ನಟ ಅರ್ಜುನ್ ರಾಂಪಾಲ್ ಸಹೋದರಿ ಕೋಮಲ್ ರಾಂಪಾಲ್ ಅವರಿಗೆ ಎರಡನೇ ಎನ್‌ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಈ ಕುರಿತು ಎಎನ್‌ಐ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ''ಕೋಮಲ್ ರಾಂಪಾಲ್ ಅವರಿಗೆ ಎರಡನೇ ಬಾರಿ ಎನ್‌ಸಿಬಿ ನೋಟಿಸ್ ನೀಡಿ ವಿಚಾರಣೆ ಎದುರಿಸುವಂತೆ ಸೂಚಿಸಿದೆ'' ಎಂದು ತಿಳಿಸಿದೆ.

ಇದಕ್ಕೂ ಮುಂಚೆ ಜನವರಿ 6 ರಂದು ಕೋಮಲ್ ರಾಂಪಾಲ್ ಅವರಿಗೆ ಎನ್‌ಸಿಬಿ ನೋಟಿಸ್ ನೀಡಿತ್ತು. ಆ ಸಂದರ್ಭದಲ್ಲಿ ಕೋಮಲ್ ರಾಂಪಾಲ್ ಪರ ವಕೀಲರ ಮೂಲಕ ತಮ್ಮ ಆರೋಗ್ಯ ಸಮಸ್ಯೆಯಿಂದ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಸಮಯ ಕೇಳಿದ ಬಗ್ಗೆಯೂ ವರದಿಯಾಗಿರಲಿಲ್ಲ.

ಇದಕ್ಕೂ ಮುಂಚೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಹಾಗೂ ಗೆಳತಿ ಗೇಬ್ರಿಯೆಲಾ ಡೆಮೆಟ್ರಿಯೇಡ್ಸ್ ಗೂ ಎನ್‌ಸಿಬಿ ವಿಚಾರಣೆ ಮಾಡಿತ್ತು. ಈ ಕೇಸ್‌ನಲ್ಲಿ ಗೇಬ್ರಿಯೆಲಾ ಸಹೋದರನನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನು ಪಡೆದು ಹೊರಬಂದಿದ್ದರು.

ಅರ್ಜುನ್ ರಾಂಪಾಲ್ ಮನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ನಿಷೇಧಿತ ಔಷಧಿ ಪತ್ತೆಯಾಗಿತ್ತು. ಈ ಹಿನ್ನೆಲೆ ಕಚೇರಿಗೆ ಕರೆಸಿ ವಿಚಾರಣೆ ಸಹ ಮಾಡಲಾಗಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ನಡೆದ ಬೆಳವಣಿಗೆಯಿಂದ ಡ್ರಗ್ಸ್ ಪ್ರಕರಣದ ತನಿಖೆ ಆರಂಭವಾಗಿದ್ದು, ಹಲವು ಸೆಲೆಬ್ರಿಟಿಗಳನ್ನು ಎನ್‌ಸಿಬಿ ವಿಚಾರಣೆ ಮಾಡಿದೆ.

More from Filmibeat

English summary
Komal Rampal, sister of Arjun Rampal has been summoned by NCB for the second time in connection with drugs case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X