For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟ ಅರ್ಜುನ್ ರಾಂಪಾಲ್‌ಗೆ ನೋಟಿಸ್ ನೀಡಿದ ಎನ್‌ಸಿಬಿ

  |

  ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೆ ಬರುವಂತೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರಿಗೆ ಎನ್‌ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಸಮನ್ಸ್ ನೀಡಿದೆ. ನವೆಂಬರ್ 13ರ ಒಳಗೆ (ಶುಕ್ರವಾರ) ಎನ್‌ಸಿಬಿ ಕಚೇರಿ ಆಗಮಿಸಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ವಿವರಣೆ ನೀಡಬೇಕೆಂದು ಎನ್‌ಸಿಬಿ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

  ಮತ್ತೊಂದೆಡೆ ಅರ್ಜುನ ರಾಂಪಾಲ್ ಅವರ ಗೆಳತಿ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ವಿಚಾರಣೆ ಎರಡನೇ ದಿನವೂ ಮುಂದುವರಿದಿದೆ. ಬುಧವಾರ ಎನ್‌ಸಿಬಿ ಎದುರು ಹಾಜರಾಗಿದ್ದ ಗೇಬ್ರಿಯೆಲಾ ಆರು ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಟ್ಟಿದ್ದರು. ಮುಂದೆ ಓದಿ....

  ನಟ ಅರ್ಜುನ್ ರಾಂಪಲ್ ನಿವಾಸದ ಮೇಲೆ ಎನ್‌ಸಿಬಿ ದಾಳಿನಟ ಅರ್ಜುನ್ ರಾಂಪಲ್ ನಿವಾಸದ ಮೇಲೆ ಎನ್‌ಸಿಬಿ ದಾಳಿ

  ವಿಚಾರಣೆ ಮುಂದುವರಿದಿದೆ

  ವಿಚಾರಣೆ ಮುಂದುವರಿದಿದೆ

  ಅರ್ಜುನ ರಾಂಪಾಲ್ ಅವರ ಗೆಳತಿ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಅವರ ಸಹೋದರನನ್ನು ಎನ್‌ಸಿಬಿ ಬಂಧಿಸಿತ್ತು. ನಂತರ ಹೆಚ್ಚಿನ ತನಿಖೆಗೆ ಗೇಬ್ರಿಯೆಲಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮೊದಲ ದಿನ ಆರು ಗಂಟೆಗೆ ಹೆಚ್ಚು ಸಮಯ ಡ್ರಿಲ್ ಮಾಡಿದ ಅಧಿಕಾರಿಗಳು ಇಂದು ಸಹ ವಿಚಾರಣೆ ಮುಂದವರಿದಿಸಿದ್ದಾರೆ.

  ತನಿಖಾಧಿಕಾರಿ ಮಾಹಿತಿ

  ತನಿಖಾಧಿಕಾರಿ ಮಾಹಿತಿ

  ಈ ಕುರಿತು ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯಿಸಿರುವ ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ "ತನಿಖೆ ಇನ್ನೂ ಪೂರ್ಣಗೊಳ್ಳದ ಕಾರಣ ಗೇಬ್ರಿಯೆಲ್ಲಾ ಅವರನ್ನು ಮತ್ತೆ ಕರೆಯಲಾಗಿದೆ. ಅರ್ಜುನ್ ರಾಂಪಾಲ್ ಅವರನ್ನು ಶುಕ್ರವಾರ ಎನ್‌ಸಿಬಿ ಮುಂದೆ ಹಾಜರಾಗುವಂತೆ ತಿಳಿಸಿದ್ದೇವೆ" ಎಂದು ತಿಳಿಸಿದ್ದಾರೆ.

  ರಾಂಪಾಲ್ ಮನೆ ಮೇಲೆ ದಾಳಿ ಆಗಿತ್ತು

  ರಾಂಪಾಲ್ ಮನೆ ಮೇಲೆ ದಾಳಿ ಆಗಿತ್ತು

  ನವೆಂಬರ್ 9 ರಂದು ನಟ ಅರ್ಜುನ್ ರಾಂಪಾಲ್ ಅವರ ಅಂಧೇರಿ, ಖಾರ್ ಮತ್ತು ಬಾಂದ್ರಾದಲ್ಲಿನ ಕಚೇರಿ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕೆಲವು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  Recommended Video

  Sashikumar ಮಗನ್ನನ್ನು ನೋಡಿ ಇದು ಗೌರವ ಪಡುವಂತಹ ವಿಚಾರ ಎಂದ Shivanna | Seethayanam | Filmibeat Kannada
  ಗೇಬ್ರಿಯೆಲ್ಲಾ ಸಹೋದರ ಬಂಧನ

  ಗೇಬ್ರಿಯೆಲ್ಲಾ ಸಹೋದರ ಬಂಧನ

  ಕಳೆದ ತಿಂಗಳು, ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಗೇಬ್ರಿಯೆಲ್ಲಾ ಸಹೋದರ ಅಗಿಸಿಲಾಸ್ ಡೆಮೆಟ್ರಿಯೇಡ್ಸ್ ಅವರನ್ನು ಎನ್‌ಸಿಬಿ ಬಂಧಿಸಿತ್ತು. ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲಾ ಅವರ ಮನೆಯ ಮೇಲೂ ದಾಳಿ ನಡೆಸಿದ್ದ ಎನ್‌ಸಿಬಿ, ಫಿರೋಜ್ ಪತ್ನಿ ಶಬಾನಾ ಸಯೀದ್ ಅವರನ್ನು ಬಂಧಿಸಿದ್ದರು. ನಂತರ ನವೆಂಬರ್ 10 ರಂದು ಆಕೆಗೆ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ.

  English summary
  Drugs Case: Bollywood actor Arjun Rampal Summoned By NCB and they asked to appear before november 13th.
  Thursday, November 12, 2020, 14:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X