"ಮೇಡಂ.. ಸ್ವಲ್ಪ ಒಳ್ಳೆಯ ಬಟ್ಟೆ ಹಾಕೊಳ್ಳಿ..": 'ಅರ್ಜುನ್ ರೆಡ್ಡಿ' ಬ್ಯೂಟಿ ಬಾಟಂಲೆಸ್‌ ಫೋಟೊಗೆ ನೆಟ್ಟಿಗರ ಕಮೆಂಟ್

By ಫಿಲ್ಮಿಬೀಟ್ ಡೆಸ್ಕ್

'ಅರ್ಜುನ್ ರೆಡ್ಡಿ' ಸಿನಿಮಾ ನೋಡಿದವರಿಗೆ ಈ ಬ್ಯೂಟಿ ಯಾರು ಅನ್ನೋ ಪರಿಚಯ ಮಾಡಿಕೊಡಬೇಕಿಲ್ಲ. ವಿಜಯ್ ದೇವರಕೊಂಡ ನಟಿಸಿದ ಈ ಸಿನಿಮಾ ಆ ಮಟ್ಟಿಗೆ ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಿತ್ತು. ಇದೇ ಸಿನಿಮಾದಿಂದ ಈಕೆ ತೆಲುಗು ಹಾಗೂ ಹಿಂದಿ ಭಾಷೆಯಲ್ಲೂ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆ ನಟಿಯ ಹೆಸರು ಶಾಲಿನಿ.

'ಅರ್ಜುನ್ ರೆಡ್ಡಿ' ಸಿನಿಮಾ ನೋಡಿದವರಿಗೆ ಅಲ್ಲಿನ ಶಾಲಿನಿಗೂ, ಈಗ ಬೋಲ್ಡ್ ಲುಕ್ ಕೊಟ್ಟಿರೋ ಶಾಲಿನಿಗೂ ಅಜಗಜಾಂತರ ವ್ಯತ್ಯಾಸ ಕಾಣಬಹುದು. ಹೌದು, ಶಾಲಿನಿ ಪಾಂಡೇ ಹಾಟ್ ಆಗಿರೋ ಒಂದು ಫೋಟೊಶೂಟ್ ಮಾಡಿಸಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Arjun Reddy Star Shalini Pandeys Hot and Bold Photoshoot sets fire on instagram photos inside

ಶಾಲಿನಿ ಇತ್ತೀಚೆಗೂ ಬೋಲ್ಡ್ ಲುಕ್‌ನಲ್ಲಿ ಫೋಟೊಶೂಟ್ ಮಾಡಿಸಿ, ಅವುಗಳಲ್ಲಿ ಕೆಲವನ್ನು ಶೇರ್ ಮಾಡಿದ್ದರು. ಈಗ ಮತ್ತೆ ಪಡ್ಡೆ ಹುಡುಗರ ನಿದ್ದೆ ಕೆಡಿಸುವುದಕ್ಕಂತಲೇ ಬೋಲ್ಡ್ ಲುಕ್‌ನಲ್ಲಿ ಫೋಟೊಶೂಟ್ ಮಾಡಿಸಿದ್ದಾರೆ. ಈ ಫೋಟೊಗಳು ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.

ಲಿಮಿಟ್‌ಲೆಸ್ ಫೋಟೊಶೂಟ್

ಶಾಲಿನಿ ಪಾಂಡೆ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಂನಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಬಿಸಿ ಬಿಸಿ ಫೋಟೊಶೂಟ್ ಕಂಡು ಪಡ್ಡೆ ಹುಡುಗರ ನಿದ್ದೆ ಹಾರಿ ಹೋಗಿದೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಬೂದು ಬಣ್ಣದ ಬಾಡಿ ಸೂಟ್‌ನಲ್ಲಿ ಮ್ಯಾಜಿಂಗ್ ಬ್ಲೇಜರ್ ಹಾಕಿಕೊಂಡು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.

ಎಷ್ಟೋ ಬೇಕೋ ಅಷ್ಟು ಮೇಕಪ್ ಮಾಡಿಕೊಂಡು, ನೆಟೆಡ್ ಸಾಕ್ಸ್ ಹಾಕೊಂಡು, ಬಾಟಮ್‌ಲೆಸ್‌ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊಗಳು ಶೇರ್ ಮಾಡಿದ್ದಲ್ಲದೆ 'ಫ್ರೀ..' ಅಂತ ಬರೆದು ಫೋಸ್ಟ್ ಮಾಡಿದ್ದಾರೆ.

Arjun Reddy Star Shalini Pandeys Hot and Bold Photoshoot sets fire on instagram photos inside

ಹಾಟ್ ಫೋಟೊಶೂಟ್‌ಗೆ ಹೇಗಿದೆ ರೆಸ್ಪಾನ್ಸ್

'ಅರ್ಜುನ್ ರೆಡ್ಡಿ' ಬ್ಯುಟಿಯ ಹಾಟ್ ಫೋಟೊಶೂಟ್ ನೋಡಿ ನೆಟ್ಟಿಗರೇನು ಸುಮ್ಮನೆ ಕೂತಿಲ್ಲ. ಅವರು ಡಿಸೈನ್ ಡಿಸೈನ್ ಆಗಿಯೇ ಕಮೆಂಟ್ ಮಾಡುತ್ತಿದ್ದಾರೆ. ಕೆಲವರಂತೂ ಶಾಲಿನಿ ಪಾಂಡೆಯ ಬ್ಯೂಟಿಗೆ ಮನಸೋತಿದ್ದಾರೆ. ಒಬ್ಬರು "ಮೇಡಂ.. ಸ್ವಲ್ಪ ಒಳ್ಳೆಯ ಬಟ್ಟೆ ಹಾಕೊಳ್ಳಿ. ಹಣ ಇರೋರ ಹಾಗೆ ಕಾಣಿಸುತ್ತಿದ್ದೀರಾ. ಫ್ರೆಶ್ ಆಗಿರಿ. ಬಟ್ಟೆ ಹಾಕೊಂಡು ಸ್ಟೈಲಿಶ್ ಆಗಿ ಇರಬಹುದು" ಎಂದು ಕಮೆಂಟ್ ಮಾಡಿದ್ದಾರೆ.

ಇನ್ನೊಬ್ಬರು "ಅರ್ಜುನ್ ರೆಡ್ಡಿ ಕಾಲಕ್ಕೆ ಮತ್ತೆ ಹೊರಟು ಹೋಗಿ.. ಹೀಗೆ ಫೋಸ್ ಕೊಡುವುದರಿಂದ ಅವಕಾಶ ಸಿಗುವುದಿಲ್ಲ. ನಾನು ನಿಮ್ಮನ್ನು ಹಾಗೆಯೇ ನೋಡಲು ಬಯಸುತ್ತೇವೆ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಮತ್ತೆ ಕೆಲವರು ಶಾಲಿನಿ ಹಾಟ್ ಫೋಟೊಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.

'ಮಹಾರಾಜ' ಸಿನಿಮಾದಲ್ಲಿ ಶಾಲಿನಿ ಬ್ಯುಸಿ

'ಅರ್ಜುನ್ ರೆಡ್ಡಿ' ಬಳಿಕ ಶಾಲಿನಿ ಟಾಲಿವುಡ್‌ನಲ್ಲಿ 'ಮಹಾನಟಿ' ಹಾಗೂ ಕಲ್ಯಾಣ್ ರಾಮ್ ನಟನೆಯ '118' ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಅದ್ಯಾವುದೂ ಸ್ಟಾರ್ ಇಮೇಜ್ ಕೊಡಲಿಲ್ಲ. ಹೀಗಾಗಿ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಈಗಾಗಲೇ ರಣ್‌ವೀರ್ ಸಿಂಗ್ ಅಭಿನಯದ 'ಜಯೇಶ್‌ಬಾಯ್ ಜೋರ್‌ದಾರ್' ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಈಗ ಆಮಿರ್ ಖಾನ್ ಪುತ್ರ ಜುನೈದ್ ಖಾನ್ ನಟಿಸುತ್ತಿರುವ 'ಮಹಾರಾಜ' ಸಿನಿಮಾದಲ್ಲಿ ಶಾಲಿನಿ ಪಾಂಡೆ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ. ಸ್ವತ: ಆಮಿರ್ ಖಾನ್ ಕಣ್ಗಾವಲಿನಲ್ಲಿ ಈ ಸಿನಿಮಾ ಆರಂಭ ಆಗುತ್ತಿದೆ.

More from Filmibeat

English summary
Arjun Reddy Star Shalini Pandey's Hot and Bold Photoshoot sets fire on instagram photos inside, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X