ಅಂದು ಹಾಗೆ-ಇಂದು ಹೀಗೆ: ಸಲ್ಮಾನ್ ಖಾನ್-ಅರ್ನಬ್ ಗೋಸ್ವಾಮಿ ಹಳೆ ವಿಡಿಯೋ ವೈರಲ್
ಟ್ವಿಟ್ಟರ್‌ನಲ್ಲಿ ಟ್ರೋಲ್‌ಗಳನ್ನು ನೋಡಿದಾಗೆಲ್ಲಾ, ಜನ, ಅರ್ನಬ್ ಗೋಸ್ವಾಮಿ ಯನ್ನು ಗಂಭೀರವಾಗಿ ಪರಿಗಣಿಸುವುದನ್ನು ಬಿಟ್ಟುಬಿಟ್ಟಿದ್ದಾರಾ ಎಂಬ ಅನುಮಾನ ಮೂಡುತ್ತದೆ.
ಟ್ರೋಲರ್‌ಗಳಿಗೆ ಅರ್ನಬ್ ಗೋಸ್ವಾಮಿ ಅಚ್ಚು-ಮೆಚ್ಚಿನ 'ವಸ್ತು'. ಅವರ ಡಿಬೇಟ್‌ಗಳು, ಅರಚಾಟ-ಕಿರುಚಾಟಗಳು ಮೀಮ್‌ಗಳಾಗಿ ಸಾಮಾಜಿಕ ಜಾಲತಾಣದಲ್ಲಿ ನಗೆ ಉಕ್ಕಿಸುತ್ತಿವೆ.
ಅರ್ನಬ್ ಗೋಸ್ವಾಮಿಯ ಕಿರುಚಾಟದ ವಿಡಿಯೋಗಳನ್ನು ಎಡಿಟ್ ಮಾಡಿ ಅದನ್ನೇ ಹಾಡು ಮಾಡುವ ಹೊಸ ಸೃಜನಾತ್ಮಕ 'ಟ್ರೋಲ್ ಮಾದರಿ'ಯೇ ಹುಟ್ಟಿಕೊಂಡು ಬಿಟ್ಟಿದೆ. ಇದೀಗ ಅರ್ನಬ್ ಗೋಸ್ವಾಮಿ, ಎಲ್ಲಿಯೋ ಕೂತಿರುವ ಸಲ್ಮಾನ್ ಖಾನ್ ಕುರಿತಾಗಿ ಆಡಿರುವ ಮಾತುಗಳ ವಿಡಿಯೋ ಸಖತ್ ಟ್ರೋಲ್ ಆಗುತ್ತಿದೆ. ಇದೇ ಅರ್ನಬ್ ಹಿಂದೊಮ್ಮೆ ಸಲ್ಮಾನ್ ಜೊತೆ ಮಾತನಾಡಿದ್ದ ವಿಡಿಯೋ ಸಹ ಜೊತೆಯಲ್ಲಿ ಸೇರಿಕೊಂಡಿದೆ.

ಅರ್ನಬ್ ರ 'ಏಕಮುಖಿ ಡಿಬೇಟ್'
ಬಾಲಿವುಡ್‌ನ ಡ್ರಗ್ಸ್ ಪ್ರಕರಣದ ಬಗ್ಗೆ ತನ್ನ ಟಿವಿ ಚಾನೆಲ್‌ನ 'ಏಕಮುಖಿ ಡಿಬೇಟ್'ನಲ್ಲಿ ಮಾತನಾಡಿದ್ದ 'ಕಿರುಚಾಡಿದ್ದ' ಅರ್ನಬ್, ಸಲ್ಮಾನ್ ಖಾನ್ ಏಕೆ ಡ್ರಗ್ಸ್ ವಿಷಯದ ಬಗ್ಗೆ ಮಾತನಾಡುತ್ತಿಲ್ಲ ಎಂದು ತೆಲುಗು ರಾಯಲಸೀಮಾ ಸಿನಿಮಾ ವಿಲನ್‌ಗಳ ರೀತಿಯಲ್ಲಿ ಕಿರುಚಿ ಪ್ರಶ್ನಿಸಿದ್ದರು. ಸಲ್ಮಾನ್ ಖಾನ್ ಆ ಡಿಬೇಟ್‌ನಲ್ಲಿ ಹಾಜರಿರಲಿಲ್ಲ ಎಂಬುದು ಗಮನಿಸಬೇಕಾದುದ್ದು!

ಎಲ್ಲಿ ಬಚ್ಚಿಕೊಂಡಿದ್ದೀಯ ಸಲ್ಮಾನ್: ಅರ್ನಬ್ ಪ್ರಶ್ನೆ
ಅತ್ಯಂತ ಜೋರಾಗಿ ಕಿರುಚಾಡಿದ್ದ ಅರ್ನಬ್, 'ಎಲ್ಲಿ ಬಚ್ಚಿಟ್ಟುಕೊಂಡಿದ್ದೀಯಾ? ಡ್ರಗ್ಸ್ ಮಾಫಿಯಾ ಬಗ್ಗೆ ನಿನ್ನ ಬಾಯಿ ಏಕೆ ಬಂದ್ ಆಗಿದೆ? ಯಾಕೆ ಸುಮ್ಮನಿದ್ದೀಯಾ ಸಲ್ಮಾನ್? ಯಾವ ನಗರದಲ್ಲಿ ಅಡಗಿಕೊಂಡಿದ್ದೀಯಾ? ಯಾವ ದೇಶದಲ್ಲಿದ್ದೀಯಾ ನೀನು? ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ಈಗ ಸಖತ್ ಟ್ರೋಲ್ ಆಗುತ್ತಿದೆ.

ಕೆಲ ವರ್ಷಗಳ ಹಿಂದಿನ ವಿಡಿಯೋ ವೈರಲ್
ಅರ್ನಬ್ ರ ಕಿರುಚಾಟದ ವಿಡಿಯೋಕ್ಕೆ, ಅವರೇ ಕೆಲ ವರ್ಷಗಳ ಹಿಂದೆ ಸಲ್ಮಾನ್ ಖಾನ್ ಸಂದರ್ಶನ ಮಾಡಿದಾಗ ಸಲ್ಮಾನ್ ಖಾನ್ ಬಗ್ಗೆ ಹೇಳಿದ್ದ ಮಾತುಗಳ ವಿಡಿಯೋ ಒಂದನ್ನು ಅಂಟಿಸಲಾಗಿದೆ. ಆ ವಿಡಿಯೋದಲ್ಲಿ ಸಲ್ಮಾನ್ ಖಾನ್ ಅನ್ನು ಸುಂದರ ಪದಗುಚ್ಛಗಳನ್ನು ಬಳಸಿ ವಿಧವಿಧವಾಗಿ ಬಣ್ಣಿಸಿದ್ದಾರೆ ಅರ್ನಬ್.
Recommended Video

ಸಲ್ಮಾನ್ ಅನ್ನು ಮನಸಾರೆ ಹೊಗಳಿದ್ದ ಅರ್ನಬ್
'ನಿಮ್ಮನ್ನು ಬಹಳ ಜನ ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂಬುದು ನಾನು ಅರಿತುಕೊಂಡೆ, ನಿಮ್ಮ ಮುಂದೆ ನನಗೆ ಕುಳಿತುಕೊಳ್ಳಲು ಅವಕಾಶ ನೀಡಿದ್ದಕ್ಕೆ ನಾನು ಋಣಿ, ನಿಮ್ಮ ಮಾನವೀಯತೆಯುಳ್ಳ ಹೃದಯವನ್ನು ನಾನು ಇಂದು ಕಂಡೆ' ಸಂದರ್ಶನ ಮುಗಿಸುವ ಮುನ್ನಾ ಹೀಗೆಲ್ಲಾ ಸಲ್ಮಾನ್ ಅನ್ನು ಹೊಗಳಿದ್ದರು ಅರ್ನಬ್! ಈ ಎರಡೂ ವಿಡಿಯೋಗಳನ್ನು ಜೋಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ವಿಡಿಯೋ ನೋಡಿದವರು ಅರ್ನಬ್ ರದ್ದು 'ಗೋಸುಂಬೆತನ' ಎಂದು ಹೀಗಳೆದಿದ್ದಾರೆ.


Click it and Unblock the Notifications