For Quick Alerts
  ALLOW NOTIFICATIONS  
  For Daily Alerts

  ನಟ ರಣದೀಪ್ ಹೂಡ ಬಂಧನಕ್ಕೆ ಒತ್ತಾಯ

  |

  ಬಾಲಿವುಡ್ ನಟ ರಣದೀಪ್ ಹೂಡ ಅನ್ನು ಬಂಧಿಸಬೇಕು ಎಂಬ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ.

  ರಣದೀಪ್ ಹೂಡ, ಕಾರ್ಯಕ್ರಮವೊಂದರಲ್ಲಿ ಅಸಭ್ಯವಾದ ಜೋಕ್ ಒಂದನ್ನು ಹೇಳಿರುವ ವಿಡಿಯೋ ವೈರಲ್ ಆಗಿದೆ. ರಣದೀಪ್ ಹೇಳಿರುವ ಜೋಕ್ ಮಹಿಳೆಯರಿಗೆ ಅಪಮಾನ ಮಾಡುವಂತಿದೆ ಎಂದು ಹಲವರು ಆರೋಪಿಸಿದ್ದಾರೆ.

  ಮಹಿಳೆಯೊಬ್ಬಾಕೆಯನ್ನು ಅಪಹಾಸ್ಯ ಮಾಡುವ ಜೋಕ್ ಅನ್ನು ಹೇಳುವ ರಣದೀಪ್ ಹೂಡ ಜೋಕ್‌ನಲ್ಲಿ ಮಹಿಳೆಯ ಹೆಸರನ್ನು ಮಿಸ್.ಮಾಯಾವತಿ ಎಂದು ಬಳಸಿದ್ದಾರೆ. ಇದೂ ಸಹ ತೀವ್ರ ವಿವಾದಕ್ಕೆ ಕಾರಣವಾಗಿದೆ. ರಣದೀಪ್ ಹೂಡ ಬಿಎಸ್‌ಪಿ ನಾಯಕಿ, ಉತ್ತರ ಪ್ರದೇಶ ಮಾಜಿ ಸಿಎಂ ಮಾಯಾವತಿಯನ್ನು ಉದ್ದೇಶದಲ್ಲಿಟ್ಟುಕೊಂಡು ಈ ಜೋಕ್ ಮಾಡಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.

  ಮಹಿಳೆಯರಿಗೆ ಅವಮಾನ ಮಾಡುವಂಥಹಾ, ಅದರಲ್ಲೂ ವಿವಾಹಿತ ಮಹಿಳೆಯರಿಗೆ ಅಪಮಾನ ಮಾಡುವಂತಹಾ ಜೋಕ್ ಹೇಳಿರುವ ರಣದೀಪ್ ಹೂಡ ಅನ್ನು ಕೂಡಲೇ ಬಂಧಿಸಬೇಕು ಎಂಬ ಒತ್ತಾಯ ಜೋರಾಗಿ ಕೇಳಿ ಬರುತ್ತಿದೆ.

  'ರಣದೀಪ್ ಹೇಳಿರುವ ಜೋಕ್ ಈ ದೇಶದಲ್ಲಿ ಮಹಿಳೆಗೆ ಅದರಲ್ಲೂ ದಲಿತ ಮಹಿಳೆಗೆ ಎಷ್ಟು ಗೌರವ ನೀಡಲಾಗುತ್ತದೆ ಎಂಬುದಕ್ಕೆ ಉದಾಹರಣೆ. ಇಂಥಹುದನ್ನು ಈಗಿನ ಯುವಕರು ಅನುಸರಿಸಬಾರದು ಎಂದರೆ ಇಂಥಹಾ ಅಸೂಕ್ಷ್ಮ ಜೋಕ್ ಹೇಳಿರುವ ಆ ಮೂಲಕ ಮಹಿಳೆಯರಿಗೆ ಅಪಮಾನ ಮಾಡಿರುವ ರಣದೀಪ್ ಹೂಡ ಅನ್ನು ಬಂಧಿಸಬೇಕು' ಎಂದಿದ್ದಾರೆ.

  ಹಲವಾರು ಮಂದಿ ರಣದೀಪ್ ಹೂಡ ವಿರುದ್ಧ ಕಿಡಿ ಕಾರಿದ್ದಾರೆ. ರಣದೀಪ್ ಹೂಡಾ ಅನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಒತ್ತಡ ಹೇರಿದ್ದಾರೆ.

  ಈ ವಿಡಿಯೋ ವೈರಲ್ ಆದ ನಂತರ ರಣದೀಪ್ ಹೂಡ ಗೌರವ ರಾಯಭಾರಿ ಆಗಿದ್ದ ಸಿಎಂಎಸ್ ಹೆಸರಿನ ವನ್ಯಜೀವಿ ಸಂರಕ್ಷಣಾ ಸಂಸ್ಥೆಯು ರಣದೀಪ್ ಅನ್ನು ರಾಯಭಾರಿ ಸ್ಥಾನದಿಂದ ತೆಗೆದು ಹಾಕಿದೆ.

  Upendra ಹೆಸರಿಲ್ಲದ Prajakeeya ಪಕ್ಷ ಗೆಲ್ಲುತ್ತಾ?ಇದು ಸಾಧ್ಯಾನಾ? | Uppi's Open Challenge|Filmibeat Kannada

  ಸಲ್ಮಾನ್ ಖಾನ್ ನಟಿಸಿದ್ದ 'ರಾಧೆ' ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ರಣದೀಪ್ ಹೂಡ ನಟಿಸಿದ್ದರು. 'ಅನ್‌ಫೇರ್' ಮತ್ತು 'ಲೌಲಿ' ಸಿನಿಮಾಗಳು ಪ್ರಸ್ತುತ ರಣದೀಪ್ ಕೈಯಲ್ಲಿವೆ.

  English summary
  Netizen demand arrest actor Randeep Hooda for making sexist and casteist joke. Randeep told an insensitive joke few years back. Video of it now went viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X