ಬಾಲಿವುಡ್ ನಟಿ ಅಮೀಶಾ ಪಟೇಲ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

Recommended Video

Ameesha Patel booked for cheating and cheque bounce | FILMIBEAT KANNADA

ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಜೊತೆಗೆ 'ಕಹೋ ನಾ ಪ್ಯಾರ್ ಹೇ' ಅಂತ ಹಾಡಿ ಕುಣಿದ ಬಾಲಿವುಡ್ ನ ಖ್ಯಾತ ನಟಿ ಅಮೀಶಾ ಪಟೇಲ್ ಗೆ ಸಂಕಷ್ಟ ಎದುರಾಗಿದೆ. ಅಮೀಶಾ ಪಟೇಲ್ ವಿರುದ್ಧ ರಾಂಚಿ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.

ಅಮೀಶಾ ಪಟೇಲ್ ಮತ್ತು ಆಕೆಯ ಬಿಸಿನೆಸ್ ಪಾರ್ಟ್ನರ್ ಕುನಾಲ್ ವಿರುದ್ಧ ಚಿತ್ರ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಚೀಟಿಂಗ್ ಮತ್ತು ಚೆಕ್ ಬೌನ್ಸ್ ಕೇಸ್ ಹಾಕಿದ್ದರು. ಇದರ ಪರಿಣಾಮ ರಾಂಚಿ ಕೋರ್ಟ್ ಅರೆಸ್ಟ್ ವಾರೆಂಟ್ ನೀಡಿದೆ.

ವರ್ಷದ ಹಿಂದೆ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಎಂಬುವವರಿಂದ ಅಮೀಶಾ ಪಟೇಲ್ ಮತ್ತು ಕುನಾಲ್ ಚಿತ್ರವೊಂದರ ನಿರ್ಮಾಣಕ್ಕಾಗಿ 2.50 ಕೋಟಿ ರೂಪಾಯಿ ಪಡೆದಿದ್ದರು. ಚಿತ್ರ ಬಿಡುಗಡೆ ನಂತರ ಹಣ ಹಿಂದಿರುಗಿಸುವುದಾಗಿ ಇಬ್ಬರು ಭರವಸೆ ನೀಡಿದ್ದರು. ಆದ್ರೆ, ಆ ಚಿತ್ರ ಬಿಡುಗಡೆ ಆಗಿಲ್ಲ.

Arrest warrant issued against Bollywood Actress Ameesha Patel

ಅಜಯ್ ಕುಮಾರ್ ಸಿಂಗ್ ಗೆ ಅಮೀಶಾ ಪಟೇಲ್ ನೀಡಿದ್ದ ಮೂರು ಕೋಟಿ ರೂಪಾಯಿಯ ಚೆಕ್ ಬೌನ್ಸ್ ಆಗಿದೆ. ಕಾರಣ ಕೇಳಲು ಫೋನ್ ಮಾಡಿದರೆ, ಆಕೆ ಪಿಕ್ ಮಾಡುತ್ತಿರಲಿಲ್ಲ. ಹೀಗಾಗಿ, ಅಜಯ್ ಕುಮಾರ್ ಸಿಂಗ್ ರಾಂಚಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ಅಮೀಶಾ ಪಟೇಲ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಆಗಿದೆ. ಅಮೀಶಾ ರನ್ನ ಅರೆಸ್ಟ್ ಮಾಡಲು ರಾಂಚಿ ಪೊಲೀಸರು ಮುಂಬೈಗೆ ತೆರಳಿದ್ದಾರೆ.

ನಟಿ ಅಮೀಶಾ ಪಟೇಲ್ ಇತ್ತೀಚೆಗಷ್ಟೇ 'ಬಿಗ್ ಬಾಸ್' ಮನೆಯೊಳಗೆ ಹೋಗಿದ್ದರು. ಹಿಂದಿ 'ಬಿಗ್ ಬಾಸ್-13'ನೇ ಆವೃತ್ತಿಯಲ್ಲಿ ಅಮೀಶಾ ಪಟೇಲ್ 'ಬಿಗ್ ಬಾಸ್' ಮನೆಯ ಒಡತಿಯಾಗಿ ಮೊದಲೆರಡು ದಿನ ಕಾಣಿಸಿಕೊಂಡಿದ್ದರು.

More from Filmibeat

English summary
Arrest warrant issued against Bollywood Actress Ameesha Patel in cheating and cheque bounce case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X